ಬೇಸಿಗೆಯ ದಗೆ ಈ ಬಾರಿ ಈ ಹಿಂದೆAದಿಗಿAತಲೂ ಹೆಚ್ಚಿದ್ದು, ಕೊಡಗು ಜಿಲ್ಲೆಯಲ್ಲಿಯೂ ಕೂಡ ಸುಮಾರು ೩೫ ರಿಂದ ೩೭ ಡಿಗ್ರಿ ತಾಪಮಾನ ಪ್ರತಿನಿತ್ಯ ದಾಖಲಾಗುತ್ತಿದೆ. ಅತಿಯಾದ ಬಿಸಿಲಿನ ತಾಪಕ್ಕೆ ವಾಹನಗಳ ಮಾಲೀಕರು ತೆಗೆದುಕೊಳ್ಳಬೇಕಾದ ಕೆಲ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.

ವಾಹನವನ್ನು ಬಿಸಿಲಿನಲ್ಲಿ ನಿಲ್ಲಿಸುವಾಗ...

v ಲೈಟರ್‌ಅನ್ನು ಡ್ಯಾಶ್‌ಬೋರ್ಡ್ನಲ್ಲಿ ಇಡಬೇಡಿ. ಹೊರ ವಾತಾವರಣದ ತಾಪಮಾನವು ೪೦ ಡಿಗ್ರಿ ಸೆಲ್‌ಶಿಯಸ್ ಆಸುಪಾಸಿನಲ್ಲಿ ದ್ದರೂ ವಾಹನದ ಡ್ಯಾಶ್‌ಬೋರ್ಡ್ ಮೇಲೆ ಬೀಳುವ ನೇರ ಕಿರಣಗಳಿಂದ ಡ್ಯಾಶ್‌ಬೋರ್ಡ್ ತಾಪಮಾನ ೭೦ ಡಿಗ್ರಿ ಕೂಡ ದಾಟಬಹುದು. ಲೈಟರ್ ನಲ್ಲಿನ ಇಂಧನವು ಬೆಂಕಿಗಾಹುತಿಯಾಗಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ.

v ಮೊಬೈಲ್ ಫೋನ್ ಚಾರ್ಜ್ ಮಾಡುವ ಪೋರ್ಟೆಬಲ್ ಚಾರ್ಜರ್ ಕೂಡ ಡ್ಯಾಶ್‌ಬೋರ್ಡ್ನಲ್ಲಿಟ್ಟಲ್ಲಿ ಅತಿಯಾದ ಶಾಖದಿಂದ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

v ಸಾಫ್ಟ್ ಡ್ರಿಂಕ್ಸ್ ಬಾಟಲಿಗಳನ್ನು ಸ್ವಲ್ಪ ಅಲ್ಲಾಡಿಸಿ ವಾಹನದಲ್ಲಿ ಇಟ್ಟರೆ, ತೀವ್ರತರದ ಶಾಖದಿಂದಾಗಿ ಡ್ರಿಂಕ್ಸ್ನಲ್ಲಿನ ಒತ್ತಡಭರಿತ ಕಾರ್ಬನ್ ಡೈಆಕ್ಸೆöÊಡ್ ಹೊರಬರಲೆತ್ನಿಸಿದಾಗ ಬಾಟಲಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಈ ಕಾರಣದಿಂದ ಬಾಟಲಿಗಳನ್ನು ಕಾರಿನಲ್ಲಿಡಬೇಡಿ.

v ಇದೇ ರೀತಿ ಸೆಂಟ್, ಡಿಯೋಡರೆಂಟ್‌ಗಳು ಕೂಡ ಸ್ಫೋಟ ಗೊಳ್ಳುವ ಸಾಧ್ಯತೆಗಳಿವೆ.

v ನೀರಿನ ಬಾಟಲಿಯನ್ನೂ ಸೂರ್ಯನ ಕಿರಣಗಳ ನೇರ ಸಂಪರ್ಕಕ್ಕೆ ಇಡಬೇಡಿ. ಕಿರಣಗಳು ನೀರಿನ ಮೂಲಕ ಚಲಿಸಿದಾಗ ಭೂತಗನ್ನಡಿ ಯಂತೆಯೇ ಪರಿಣಾಮ ಬೀರಿ ಒಂದೇ ಕಡೆ ಸೂರ್ಯನ ಕಿರಣಗಳು ಕೇಂದ್ರೀಕೃತವಾಗುತ್ತವೆ. ಈ ಸ್ಥಳವು ವಾಹನದ ಸೀಟು ಅಥವಾ ಇತರ ವಿದ್ಯುತ್ ಉಪಕರಣಗಳಾಗಿದ್ದಲ್ಲಿ ಹೊತ್ತಿ ಉರಿಯುವ ಸಾಧ್ಯತೆಗಳಿವೆ.

v ಔಷಧಿಯ ಬಾಟಲಿಗಳು, ಆಹಾರ ಪದಾರ್ಥಗಳುಳ್ಳ ಪ್ಯಾಕೆಟ್ ಗಳನ್ನು ವಾಹನದಲ್ಲಿಟ್ಟಲ್ಲಿ ಅತಿಯಾದ ಶಾಖಕ್ಕೆ ಒಳಗಾಗಿ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆಗಳಿವೆ.