ಸಿದ್ದಾಪುರ, ಏ. ೧೨: ಬೈಕ್ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ನಡೆದಿದೆ.
ನೆಲ್ಯಹುದಿಕೇರಿಯ ಎಂ.ಜಿ ಕಾಲನಿ ನಿವಾಸಿ ರಂಶಾದ್ ಹಾಗೂ ರಾಶೀದ್ ಅವರುಗಳು ಅರೆಕಾಡಿಗೆ ತೆರಳುತ್ತಿದ್ದ ಸಂದರ್ಭ ಅತ್ತಿಮಂಗಲ ತಲುಪುತ್ತಿದ್ದಂತೆ ಕಾಫಿ ತೋಟದಿಂದ ಹಠಾತ್ತನೆ ರಸ್ತೆಗೆ ಬಂದ ಕಾಡಾನೆ ಬೈಕಿನ ಮೇಲೆ ದಾಳಿ ಮಾಡಿದೆ. ದಾಳಿಯ ಪರಿಣಾಮ ರಂಶಾದ್ ಹೊಟ್ಟೆ ಹಾಗೂ ಕಾಲಿಗೆ ಗಾಯವಾಗಿದ್ದು, ಸಹೋದರ ರಾಶಿದ್ ಓಡಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರು ಗಾಯಾಳುವನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿ.ಆರ್.ಎಫ್.ಒ ಸುಬ್ರಾಯ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಳೆದ ವರ್ಷ ವ್ಯಕ್ತಿಯೋರ್ವ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಅರೆಕಾಡು ಗ್ರಾಮದಲ್ಲಿ ರೈತರೊಬ್ಬರು ಬಲಿಯಾಗಿದ್ದರು. ಕಾಡಾನೆಯೊಂದು ಕಳೆದು ಹಲವು ದಿನಗಳಿಂದ ನಿರಂತರವಾಗಿ ದಾಂಧÀಲೆ ನಡೆಸುತ್ತಿದ್ದು, ವಾಹನ ಸವಾರರ ಮೇಲೆ ಹಲವು ಬಾರಿ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಸೆರೆಗೆ ಈಗಾಗಲೇ ಅನುಮತಿ ಸಿಕ್ಕಿದ್ದು, ಆದಷ್ಟು ಶೀಘ್ರದಲ್ಲೇ ದಾಂಧÀಲೆ ನಡೆಸುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು ಎಂದು ಡಿ.ಆರ್.ಎಫ್.ಓ ಸುಬ್ರಾಯ ‘ಶಕ್ತಿ’ಗೆ ತಿಳಿಸಿದರು.
-ವಾಸು/ಮುಬಾರಕ್