ಸೋಮವಾರಪೇಟೆ, ಏ. ೧೧: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಆಗಾಗ್ಗೆ ದಾಳಿಗೆ ಮುಂದಾಗುತ್ತಿರುವ ಕಾಡಾನೆಯ ಸೆರೆಗೆ ಕ್ರಮ ವಹಿಸುತ್ತಿರುವ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಜೂರು ಭಾಗದಲ್ಲಿ ನಿರಾತಂಕ ವಾಗಿ ನಡೆಯುತ್ತಿರುವ ಕಾಡಾನೆಗಳ ಹಾವಳಿಯ ಬಗ್ಗೆ ವರದಿಯಾಗುತ್ತಿರುವ ನಡುವೆ, ‘ಶಕ್ತಿ’ಯೊಂದಿಗೆ ಮಾv Àನಾಡಿರುವ ಭಾಸ್ಕರ್ ಅವರು, ಸ್ಥಳೀಯವಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ಹಳೆಯ ಕಾಲದಿಂದಲೂ ಇರುವ ಕಾರಿಡಾರ್ಗೆ ಇತ್ತೀಚಿನ ದಿನಗಳಲ್ಲಿ ತಡೆಯಾಗಿರುವ ಹಿನ್ನೆಲೆ ಕಾಡಾನೆಗಳು ಗೊಂದಲಕ್ಕೀಡಾಗಿ ಎಲ್ಲೆಂದರಲ್ಲಿ ಸಂಚರಿಸುತ್ತಿವೆ. ಇವುಗಳ ಪೈಕಿ ಎರಡು ಆನೆಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ದ್ವಿಚಕ್ರ ವಾಹನ ಸವಾರರ ಮೇಲೆ ಆಗಾಗ್ಗೆ ಧಾಳಿಗೆ ಮುಂದಾಗುತ್ತಿರುವ ಒಂದು ಆನೆಯನ್ನು ಸೆರೆ ಹಿಡಿಯಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸ ಲಾಗಿದೆ. ಅನುಮತಿ ದೊರೆತೊಡನೆ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಕಾಜೂರು ಭಾಗದಲ್ಲಿರುವ ಕಾಡಾನೆಗಳ ಸಮಸ್ಯೆ ಯ ಬಗ್ಗೆ ಖುದ್ದು ಪರಿಶೀಲಿಸಲಾಗಿದೆ. ಸಿಸಿಎಫ್ ಅವರೂ ಕೂಡ ಭೇಟಿ ನೀಡಿದ್ದಾರೆ. ಕಾಜೂರಿನಲ್ಲಿ ಈ ಹಿಂದಿನಿAದಲೂ ಕಾರಿಡಾರ್ ಇದೆ. ಕಳೆದೆರಡು ವರ್ಷಗಳಿಂದ ರೈಲ್ವೇ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಯಡವನಾಡು ಅರಣ್ಯದಿಂದ ಕಾಜೂರು ಮಾರ್ಗವಾಗಿ ಟಾಟಾ ಕಾಫಿ ತೋಟಕ್ಕೆ ತೆರಳುವುದು, ಹೊಳೆ, ಕೆರೆಯ ನೀರು ಕುಡಿದು, ಅಲ್ಲಿ ಸಿಗುವ ಆಹಾರ ತಿಂದು ವಾಪಸ್ಸಾಗುವುದು ವಾಡಿಕೆಯಾಗಿತ್ತು.
ಆದರೆ ಬ್ಯಾರಿಕೇಡ್ ಅಳವಡಿಕೆ ಹಾಗೂ ಖಾಸಗಿ ಕಾಫಿ ಸಂಸ್ಥೆಯವರು ತೋಟದ ಸುತ್ತಲೂ ಸೋಲಾರ್ ಬೇಲಿ ನಿರ್ಮಿಸಿದ ನಂತರ ಕಾರಿಡಾರ್ಗೆ ತಡೆಬಿದ್ದಿದೆ. ಪರಿಣಾಮ ಆನೆಗಳು ಮಾಮೂಲಿಯಂತೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಸಂಸ್ಥೆ ತೋಟದೊಳಗೆ ಹೋಗುವ ಆನೆಗಳನ್ನು ಅಲ್ಲಿಂದ ಓಡಿಸುತ್ತಿದ್ದಾರೆ. ಇದರಿಂದಾಗಿಯೂ ಸಮಸ್ಯೆ ಉದ್ಬವಿಸಿದೆ ಎಂದು ತಿಳಿಸಿದ್ದಾರೆ.
ಕಾಜೂರು, ಯಡವಾರೆ, ಐಗೂರು ಭಾಗದಲ್ಲಿ ಜನವಸತಿ ಇರುವ ಹಿನ್ನೆಲೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ರಾತ್ರಿ ವೇಳೆ ತೋಟದ ಮೂಲಕ ತೆರಳುವ ಆನೆಗಳು ಕೋಟೆಬೆಟ್ಟದ ತಟದಿಂದ ಬರುವ ಹೊಳೆಯ ನೀರನ್ನು ಕುಡಿದು ವಾಪಸ್ಸಾಗುತ್ತಿವೆ. ಬ್ಯಾರಿಕೇಡ್ನಲ್ಲಿ ಅರಣ್ಯ ಇಲಾಖೆ ಯಿಂದ ನಿರ್ಮಿಸಿರುವ ಗೇಟ್ ಮೂಲಕ ತೆರಳುವ ಸಂದರ್ಭ ಯಾವುದಾದರೂ ವಾಹನಗಳು ಬಂದರೆ ಗಾಬರಿಯಾಗುವ ಆನೆಗಳು ಎಲ್ಲೆಂದರಲ್ಲಿ ತೆರಳುತ್ತಿವೆ. ಇದೂ ಕೂಡ ಸಮಸ್ಯೆಗೆ ಮೂಲವಾಗಿದೆ. ಇದರೊಂದಿಗೆ ಬಿಸಿಲು ಹೆಚ್ಚಿರುವ ಹಿನ್ನೆಲೆ ಆನೆಗಳು ತೋಟಗಳಿಗೆ ತೆರಳುತ್ತಿವೆ ಎಂದು ಭಾಸ್ಕರ್ ಅವರು ಮಾಹಿತಿ ನೀಡಿದ್ದಾರೆ. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಸ್ತುತ ೧೦ ರಿಂದ ೧೫ ಆನೆಗಳು ಕಾಜೂರು ಭಾಗದಲ್ಲಿ ಸಂಚರಿಸುತ್ತಿವೆ. ಬ್ಯಾರಿಕೇಡ್ ನಿರ್ಮಾಣ, ಖಾಸಗಿ ಸಂಸ್ಥೆಯಿAದ ಸೋಲಾರ್ ಬೇಲಿ ನಿರ್ಮಾಣದಿಂದ ಕಾರಿಡಾರ್ಗೆ ತಡೆಬಿದ್ದಿದೆ. ಬ್ಯಾರಿಕೇಡ್ನ ಗೇಟ್ ಮೂಲಕ ಆನೆಗಳು ಸಂಚರಿಸಲು ಇನ್ನೂ ಅಭ್ಯಾಸವಾಗಿಲ್ಲ. ಹಾಗಾಗಿ ಖಾಸಗಿ ಸಂಸ್ಥೆಯವರೊAದಿಗೆ ಮಾತುಕತೆ ನಡೆಸಿದ್ದು, ಕಾಡಾನೆಗಳು ನಿರಾತಂಕವಾಗಿ ಸಂಚರಿಸಿ, ವಾಪಸ್ ಆಗಲು ಅನುಕೂಲವಾಗುವಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಕೆಲವರು ಬ್ಯಾರಿಕೇಡ್ ಅಳವಡಿಸುವಂತೆ ಇನ್ನು ಕೆಲವರು ಸೋಲಾರ್ ಬೇಲಿ ಅಳವಡಿಸುವಂತೆ ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಸದ್ಯದ ಮಟ್ಟಿಗೆ ಕಾಜೂರಿನಿಂದ ಹಾರಂಗಿ ಹಿನ್ನೀರು ಪ್ರದೇಶದವರೆಗೆ ಸುಮಾರು ೭.೫ ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಬಾರಿ ಬಿಸಿಲಿನ ಧಗೆ ಅಧಿಕವಿರುವುದರಿಂದ ಕಾಡಾನೆಗಳು ಹೆಚ್ಚು ನಾಡಿಗೆ ಬರುತ್ತಿವೆ. ಪ್ರಸ್ತುತ ಸಾರ್ವಜನಿಕರ ಮೇಲೆ ಧಾಳಿಗೆ ಮುಂದಾಗುತ್ತಿರುವ ಆನೆಯನ್ನು ಸೆರೆಹಿಡಿಯಲು ಇಲಾಖಾ ಮಟ್ಟದಲ್ಲಿ ಕ್ರಮವಹಿಸಲಾಗಿದೆ. ಆದೇಶ ಬಂದ ತಕ್ಷಣ ಕಾರ್ಯೋನ್ಮುಖರಾಗುತ್ತೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
- ವಿಜಯ್ ಹಾನಗಲ್