ಮಡಿಕೇರಿ, ಏ. ೧೦ : ಸಂಘ, ಸಮಾಜದೊಂದಿಗೆ ಲೀನ ಆಗಬೇಕೆಂಬುದು ಸಂಘ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡೆಗೇವಾರ್ ಅವರ ಅಭಿಲಾಷೆಯಾಗಿತ್ತು, ಸಂಘದ ಸ್ವಯಂಸೇವಕರೊAದಿಗೆ ಸಮಾಜದ ಬಂಧುಗಳು ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ರಾಷ್ಟಿçÃಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಶಾರೀರಿಕ ಪ್ರಮುಖ್ ಸತೀಶ್ ಕುತ್ಯಾರು ಕರೆ ನೀಡಿದರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಮಡಿಕೇರಿ ನಗರ ಶಾಖೆ ವತಿಯಿಂದ ನಗರದ ಶ್ರೀ ಆಂಜನೇಯ ದೇವಸ್ಥಾನ ಮೈದಾನದಲ್ಲಿ ಆಯೋಜಿಸಲಾಗಿದ್ದ ಯುಗಾದಿ ಉತ್ಸವದಲ್ಲಿ ಮಾತನಾಡಿದರು.
ವಸಂತ ಋತುವಿನಲ್ಲಿ ಪ್ರಕೃತಿ ಮೈದುಂಬಿ ಹೊಸತನದೊಂದಿಗೆ ಕೂಡಿರುತ್ತದೆ. ಬಿಸಿಲಿನ ಬೇಗೆಯ ನಡುವೆಯೂ ಗಿಡ ಮರಗಳು ಚಿಗುರಿ ಫಲವನ್ನು ನೀಡುತ್ತದೆ. ಪ್ರಕೃತಿಯೇ ಹೊಸತನದ ಎಡೆಗೆ ಸಮಾಜವನ್ನು ಕೊಂಡೊಯ್ಯುತ್ತಿದೆ. ಹಾಗಾಗಿ ಹಿಂದುಗಳಿಗೆ ಯುಗಾದಿ ಹೊಸ ವರ್ಷದ ಆರಂಭವಾಗಿದೆ. ಯುಗಾದಿಯ ದಿನವೇ ಸಂಘ ಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡೆಗೇವಾರ್ ಜನಿಸಿರುವುದು ಸಂಘದ ಸ್ವಯಂಸೇವಕರಿಗೆ ಹೆಮ್ಮೆಯ ದಿನವಾಗಿದೆ ಎಂದರು.
ಸAಘ ಸ್ಥಾಪಕರಾದ ಡಾಕ್ಟರ್ ಜಿ ಜನ್ಮತಃ ದೇಶಭಕ್ತರಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ ೯ ವರ್ಷಗಳ ಕಾಲ ಕಾರಾಗೃಹ ವಾಸವಾಗಿದ್ದರು. ಕ್ರಾಂತಿಕಾರಿಗಳ ಜೊತೆಗೂ ಸಹವಾಸ ಇತ್ತು, ಕ್ರಾಂತಿಕಾರಿಗಳ ಅನುಶೀಲನಾ ಸಮಿತಿಯಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸಿದ್ದರು. ಜನ ಸಂಘಟಿತರಾಗಬೇಕು ಎಂದು ಡಾಕ್ಟರ್ ಜಿ ಆಕಾಂಕ್ಷೆಯನ್ನು ಹೊಂದಿದ್ದರು. ರಾಷ್ಟ್ರ ಅಂದಾಗ ನಾವೆಲ್ಲರೂ ಒಟ್ಟಾಗಿ ಸೇರುತ್ತೇವೆ. ಆ ಮೂಲಕ ಸಾಮಾಜಿಕ ಪರಿವರ್ತನೆ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಉಕ್ಕಿನ ನರಗಳ, ಕಬ್ಬಿಣದ ಮಾಂಸಖAಡಗಳುಳ್ಳ ನೂರು ಜನ ಯುವಕರನ್ನು ಕೊಡಿ, ಇಂದೇ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ ಎಂದು ಹೇಳಿದ್ದರು, ಆದರೆ ಆ ನೂರು ಜನ ಯುವಕರು ವಿವೇಕಾನಂದರಿಗೆ ಸಿಗಲೇ ಇಲ್ಲ, ಆದರೆ ಸ್ವಾಮಿ ವಿವೇಕಾನಂದರು ಅಂದು ಕಂಡ ಕನಸು ಇಂದು ನನಸಾಗುತ್ತಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಯಲ್ಲಿ ಆ ರೀತಿಯ ಯುವಕರು ತಯಾರಾಗುತ್ತಿದ್ದಾರೆ. ಅನೇಕ ಜನ ಪ್ರತಿಭಾವಂತ ಯುವಕರನ್ನು ಡಾಕ್ಟರ್ ಜಿ ಸಂಘದ ಸಮೀಪಕ್ಕೆ ಕರೆತಂದರು ಎಂದು ಹೇಳಿದರು.
ಇಂದು ಸಂಘದ ಸ್ವಯಂಸೇವಕರು ಎರಡು ರೀತಿಯ ಕಾರ್ಯವನ್ನು ಮಾಡಬೇಕಾಗಿದೆ; ಒಂದು
(ಮೊದಲ ಪುಟದಿಂದ) ಸಾಮಾಜಿಕ ಪರಿವರ್ತನೆ ಕೆಲಸ, ಸಮಾಜದಲ್ಲಿರುವ ಮೇಲು ಕೀಳು, ಅಸ್ಪೃಶ್ಯತೆ ಭಾವನೆಯನ್ನು ತೊಡೆದು ಹಾಕಬೇಕಾದ ಕಾರ್ಯ. ಪರಿಸರ ಸಂರಕ್ಷಣೆ, ಸಂಸ್ಕಾರ ಕೊಡುವ ಕೆಲಸವೂ ಆಗಬೇಕಾಗಿದೆ, ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳಬೇಕಾಗಿದೆ. ದೇವಸ್ಥಾನ, ಮಠ ಮಂದಿರಗಳು, ಶಾಲೆಗಳು ಸಾಂಸ್ಥಿಕ ಸಂಘಟನೆಗಳ ಮೂಲಕ ಪರಿವರ್ತನೆಯ ಕೇಂದ್ರಗಳಾಗಬೇಕು, ಆ ಮೂಲಕ ಭವ್ಯ ಭಾರತದ ಕನಸು ನನಸಾಗಬೇಕಾಗಿದೆ. ಮುಂಬರುವ ಮಹಾ ಚುನಾವಣೆಯಲ್ಲಿ ಶೇಕಡ ನೂರರಷ್ಟು ಮತದಾನ ಮಾಡುವಂತೆ ಸಂಘದ ಸ್ವಯಂಸೇವಕರು ಹಾಗೂ ಸಮಾಜ ಬಂಧುಗಳು ಮಾಡಬೇಕಾದ ಕರ್ತವ್ಯಗಳಾಗಿವೆ ಎಂದು ಸತೀಶ್ ಕುತ್ಯಾರ ಹೇಳಿದರು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಕಾರ್ಯವಾಹ ರವಿ ಉಪಸ್ಥಿತರಿದ್ದರು. ಮಡಿಕೇರಿ ನಗರ ಕಾರ್ಯವಾಹ ವಿವೇಕ್ ಸ್ವಾಗತಿಸಿ, ವಸತಿ ಪ್ರಮುಖ್ ಧನುಷ್ ದೇಶಭಕ್ತಿ ಗೀತೆಯನ್ನು ಹಾಡಿದರು. ನಗರ ಸಹ ಕಾರ್ಯವಾಹ ಡಾ ಲಿಖಿತ್ ವಂದಿಸಿ ಕಳೆದ ಒಂದು ವರ್ಷಗಳ ಸಂಘದ ಕೆಲಸ ಕಾರ್ಯಗಳ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಪ್ರಮುಖರಾದ ಕೆ.ಕೆ. ದಿನೇಶ್ ಕುಮಾರ್, ಕೆ ಕೆ ಮಹೇಶ್ ಕುಮಾರ್, ಶಿವಾಜಿರಾವ್ ಪಾಟೀಲ್, ಭರತ್ ರಾಜ್ ಹಾಗೂ ಇನ್ನಿತರರು ಇದ್ದರು.
ಕೂಡಿಗೆ: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಹೊನ್ನಾರು ಉತ್ಸವವನ್ನು ಆಚರಿಸಲಾಯಿತು. ಯುಗಾದಿ ಹಬ್ಬದಂದು ಗ್ರಾಮದ ಗ್ರಾಮಸ್ಥರು ಒಂದೆಡೆ ಸೇರಿದ್ದರು. ದೇವಾಲಯ ಸಮಿತಿಯ ವತಿಯಿಂದ ವರ್ಷದ ಹೊಸ ಪಂಚಾAಗ ನೋಡಿದ ನಂತರ ಹೊನ್ನಾರು (ಚಿನ್ನದ ಸಾಲು) ಆಚರಣೆಗೆ ಸಿದ್ದರಾಗಿ ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿ ದೇವಾಲಯ ಆವರಣಕ್ಕೆ ಬಂದು ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವರ ಭೂಮಿಯಲ್ಲಿ ಸಂಪ್ರದಾಯದAತೆ ಪೂರ್ವದಿಂದ ಪಶ್ಚಿಮಕ್ಕೆ ಜೋಡೆತ್ತಿನ ಮೂಲಕ ದೇವಾಲಯದ ಅರ್ಚಕ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವ ಚಾಲನೆಗೊಂಡಿತು.
ಮೇಷ ರಾಶಿಗೆ ಸೇರಿರುವ ಲೋಕೇಶ್ ಎಂಬವರ ಜೋಡಿ ಎತ್ತುಗಳನ್ನು ಮತ್ತು ಉಳುಮೆಯ ರೈತ, ನೇಗಿಲು, ನೊಗವನ್ನು ಪೂಜೆ ಮಾಡಿ ನಂತರ ದೇವರ ಭೂಮಿಯಲ್ಲಿ ಉಳುಮೆ ಮಾಡಲಾಯಿತು. ಉತ್ಸವದಲ್ಲಿ ಗ್ರಾಮದ ೨೦ ಕ್ಕೂ ಹೆಚ್ಚು ಜೋಡಿ ಎತ್ತುಗಳು, ಸಿಂಗಾರಗೊAಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೊರೆನೂರು ಗ್ರಾಮದ ಹೆದ್ದಾರಿಯ ಸಮೀಪದಲ್ಲಿರುವ ಜೋಡಿ ಬಸವೇಶ್ವರ ದೇವಾಲಯದ ಬಳಿಗೆ ಬಂದು ಜೋಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವದಲ್ಲಿ ಭಾಗವಹಿಸಿದ ಮಾಲೀಕರು ಜಮೀನಿನ ಉಳುಮೆ ಯ ಪ್ರಥಮ ಸಾಲು ಎಂದು ಯುಗಾದಿ ದಿನದಂದು ಸಾಲು ಹೊಡೆದರು.
ಈ ಪದ್ಧತಿಯನ್ನು ಕಳೆದ ೬೦ ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಣೆ ಮಾಡಿ ಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊAಡಿತ್ತು. ಗ್ರಾಮದ ಮಹಿಳೆಯರು ಗ್ರಾಮದ ಬೀದಿಗಳಲ್ಲಿ ವಿವಿಧ ಬಣ್ಣದ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು. ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ ಎಲ್ಲಾ ಜೋಡಿ ಎತ್ತುಗಳÀ ರೈತರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಇದರ ಅಂಗವಾಗಿ ಸಂಜೆ ಶ್ರೀ ಬಸವೇಶ್ವರ ಮೂರ್ತಿಯನ್ನು ವಿದ್ಯುತ್ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಸ್. ಜಗದೀಶ್, ಕಾರ್ಯದರ್ಶಿ. ಟಿ.ಎಲ್. ಮಹೇಶ್ ಕುಮಾರ್, ಉಪಾಧ್ಯಕ್ಷ ಚಿದಾನಂದ, ಖಜಾಂಚಿ ಕೆ.ಎಸ್ ಕೃಷ್ಣ ಗೌಡ, ಸಮಿತಿಯ ನಿರ್ದೇಶಕರಾದ ವಸಂತ್, ಸಿದ್ದಪ್ಪ, ರಾಮಪ್ಪ ಸೇರಿದಂತೆ ಸಮಿತಿಯ ಸದಸ್ಯರು, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಉತ್ಸವದಲ್ಲಿ ತೊರೆನೂರು ಗ್ರಾಮದ ಬಾಲಕರು ಸಂಪ್ರದಾಯದAತೆ ಉಡುಗೆ ತೊಟ್ಟು ಕರುಗಳನ್ನು ಅಲಂಕರಿಸಿದ್ದು, ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಮಡಿಕೇರಿ: ಮಡಿಕೇರಿ ನಗರದ ಸುರ್ದಶನ ಬಡಾವಣೆಯ ಶ್ರೀ ಮುನೀಶ್ವರ ದೇವಾಲಯದಲ್ಲಿ ಯುಗಾದಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಅಭಿಷೇಕ, ಅಲಂಕಾರ ಪೂಜೆ, ಹೋಮ ಹವನಾದಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ದೇವಾಲಯದ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿಗೆ ಭಕ್ತರು ಹರಕೆ ಅರ್ಪಿಸಿದರು. ಮಹಾಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಅಪಾರ ಸಂಖ್ಯೆಯ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆಯಾಯಿತು. ಯುಗಾದಿ ಉತ್ಸವದ ಪ್ರಯುಕ್ತ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.