ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಏ. ೧೦: ಬಿರು ಬಿಸಿಲಿನ ನಡುವೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಇದೀಗ ಅರಣ್ಯದಂಚಿನ ಕಾಫಿ ತೋಟದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಟ ನಡೆಸುತ್ತಿದ್ದು ಮುಂಜಾನೆ ವೇಳೆ ಹುಲಿಯೊಂದು ದ.ಕೊಡಗಿನ ಹರಿಹರ ಗ್ರಾಮದ ದೇವಾಲಯದ ಬಳಿ ಇರುವ ಸಣ್ಣದಾದ ಕೆರೆಯಲ್ಲಿ ನೀರು ಕುಡಿದು ಮತ್ತೆ ಕಾಡಿನತ್ತ ತೆರಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
ವಿಪರೀತ ಬಿಸಿಲಿನ ತಾಪವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಹುಲಿಗಳು
(ಮೊದಲ ಪುಟದಿಂದ) ಅರಣ್ಯ ಪ್ರದೇಶದಿಂದ ನೀರಿನ ಮೂಲಗಳಾದ ಕೆರೆ, ಹೊಳೆ ಬದಿ ಹಾಗೂ ತಂಪಾದ ಕಾಫಿ ತೋಟಗಳಲ್ಲಿ ಆಗಿಂದಾಗ್ಗೆ ನಾಗರಿಕರಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಹಜವಾಗಿಯೇ ದ.ಕೊಡಗಿನ ಬಹುತೇಕ ಭಾಗದಲ್ಲಿ ಹುಲಿಯ ಸಂಚಾರವಿರುವುದು ದೃಢಪಟ್ಟಿದೆ.
ದ.ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದ್ದು ಇತ್ತೀಚೆಗೆ ಟಿ.ಶೆಟ್ಟಿಗೇರಿ, ಶ್ರೀಮಂಗಲ ಮುಖ್ಯ ರಸ್ತೆಯ ಅನತಿ ದೂರದಲ್ಲಿ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ, ಹಸುವಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾಚರಣೆ ಕೈಗೊಂಡರಾದರೂ ಹುಲಿ ಸೆರೆ ಸಾಧ್ಯವಾಗಿರಲಿಲ್ಲ. ಟಿ.ಶೆಟ್ಟಿಗೇರಿ ಸಮೀಪದ ತಾವಳಗೇರಿ ಗ್ರಾಮದ ಮಚ್ಚಮಾಡ ನಂದ ಅವರ ಭತ್ತದ ಗದ್ದೆಯಲ್ಲಿ ಕಟ್ಟಲಾಗಿದ್ದ ಹಸುವಿನ ಮೇಲೆಯೂ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಸಮೀಪದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಹುಲಿ ಸಂರಕ್ಷಿತ ಪ್ರದೇಶದಿಂದ ಹಲವು ಹುಲಿಗಳು ಸುತ್ತಮುತ್ತಲಿನ ರೈತರ ಕಾಫಿ ತೋಟಗಳಿಗೆ ಆಗಮಿಸುತ್ತಿವೆ. ಹುಲಿಗಳು ರೈತರ ಕಾಫಿ ತೋಟದಲ್ಲಿ ಆಗಿಂದ್ದಾಗಿಯೇ ಕಾಣಿಸಿಕೊಂಡಿರವುದರಿAದ ಸಹಜವಾಗಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಫಿ ಬೆಳೆಗಾರರಿಗೆ ನಿದ್ದೆ ಗೆಡಿಸಿದೆ. ಅರಣ್ಯ ಪ್ರದೇಶದಿಂದ ಇದೀಗ ಮತ್ತೆ ನಾಡಿನತ್ತ ಹುಲಿಯು ಆಗಮಿಸುತ್ತಿರುವುದರಿಂದ ಬಹುತೇಕ ರೈತರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.
ಗ್ರಾಮೀಣ ಭಾಗದಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ನಾಗರಿಕರಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಅರಣ್ಯ ವ್ಯಾಪ್ತಿಯಿಂದ ನಾಡಿನತ್ತ ಆಗಮಿಸುವ ಹುಲಿಗಳು ತಮ್ಮ ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹುಲಿಯ ಸೆರೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹುಲಿಯ ಸೆರೆ ಮಾತ್ರ ನಡೆಯುತ್ತಿಲ್ಲ.ಮುಂಜಾನೆ ವೇಳೆ ನನ್ನ ಸ್ನೇಹಿತನಾದ ದುಗ್ಗಂಡ ಯಶ್ವಂತ್ರೊAದಿಗೆ ರಸ್ತೆ ಬದಿಯಿರುವ ಕೆರೆಯ ಬಳಿ ತೆರಳುತ್ತಿದ್ದ ವೇಳೆ ಹುಲಿಯೊಂದು ನೀರು ಕುಡಿದು ಕಾಡಿನತ್ತ ತೆರಳುತ್ತಿರುವುದು ಪ್ರತ್ಯಕ್ಷವಾಗಿದೆ. ಈ ಸಂದರ್ಭ ಹುಲಿಯ ಚಿತ್ರ ಸೆರೆ ಹಿಡಿಯಲಾಗಿದೆ. ಹುಲಿಯು ತೀರಾ ಬಳಲಿರುವ ರೀತಿಯಲ್ಲಿ ಕಂಡು ಬಂದಿದೆ. ಈ ಭಾಗದಲ್ಲಿ ಹುಲಿಯ ಸಂಚಾರ ದೃಢಪಟ್ಟಿದೆ.
-ಕಳ್ಳೆಂಗಡ ನವೀನ್ ಸುಬ್ಬಯ್ಯ ಪ್ರತ್ಯಕ್ಷದರ್ಶಿ, ಬೆಳ್ಳೂರು
ಕ್ಯಾಮರಾಗಳನ್ನು ಅಳವಡಿಸಿ ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹರಿಹರದಲ್ಲಿ ಕಾಣಿಸಿಕೊಂಡ ಹುಲಿಯ ನಿಖರ ಮಾಹಿತಿ ಪಡೆಯಲು ಈಗಾಗಲೇ ಹಲವು ಕ್ಯಾಮರಾಗಳನ್ನು ಅಳವಡಿಸಿದ್ದು ಕೂಂಬಿAಗ್ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. ಹುಲಿಯ ಸೆರೆಗೆ ಸಂಬAಧಪಟ್ಟAತೆ ಹಿರಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಹುಲಿ ಕಾಣಿಸಿಕೊಂಡಿರುವ ಪ್ರದೇಶಗಳು ಬ್ರಹ್ಮಗಿರಿ ಹಾಗೂ ನಾಗರಹೊಳೆ ಅರಣ್ಯ ವ್ಯಾಪ್ತಿಯನ್ನು ಆವರಿಸಿರುವುದರಿಂದ ಯಾವಾಗ ಹುಲಿನಾಡಿನತ್ತ ಧಾವಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಆಯ್ದ ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. -ಶಂಕರ್ ಆರ್ಎಫ್ಒ, ಪೊನ್ನಂಪೇಟೆ