ಸಿದ್ದಾಪುರ, ಏ. ೧೦: ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಶಾಫಿ ಪಂಗಡದವರು ಸಂಭ್ರಮದಿAದ ಆಚರಿಸಿದರು. ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ನಮಾಜ್ ನೆರವೇರಿಸಿದರು ಸಾಮೂಹಿಕ ನಮಾಜ್ ನಂತರ ಶಾಂತಿ ಸಹ ಬಾಳ್ವೆ ಸಹೋದರತ್ವ ಸಾರುವ ಸಂದೇಶದೊAದಿಗೆ ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಡಿಕೇರಿಯ ಬದ್ರಿಯಾ ಮಸೀದಿಯಲ್ಲಿ ನಮಾಜ್ ನೇತೃತ್ವ ವಹಿಸಿ ಮಾತನಾಡಿದ ಹಫೀಜ್ ಫಜಲುಲ್ಲಾ ರೆಹಮಾನ್ ಹಬ್ಬಗಳು ಭಾವೈಕ್ಯದ ಸಂದೇಶವನ್ನು ಸಾರುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನಮ್ಮ ಭಾರತ ಎಂದಿಗೂ ಶಾಂತಿ ನೆಮ್ಮದಿಯನ್ನು ಬಯಸುತ್ತದೆ ಹೊರತು ದ್ವೇಷದ ವಾತಾವರಣವಲ್ಲ. ಪ್ರವಾದಿ (ಸ) ಅವರು ನೀವು ಎಲ್ಲಿಯವರೆಗೆ ನಿಮ್ಮ ನೆರೆಯವರನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಓರ್ವ ಉತ್ತಮ ವಿಶ್ವಾಸಿಯಾಗಲು ಸಾದ್ಯವಿಲ್ಲ

(ಮೊದಲ ಪುಟದಿಂದ) ಎಂದು ಹೇಳಿದ್ದಾರೆ. ಅದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ನಾಡಿನಲ್ಲಿ ಉತ್ತಮ ಮಳೆ, ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ಪಟ್ಟಣದ ಜಲಾಲಿಯಾ ಮಸೀದಿ, ಬಜೆಗುಂಡಿಯ ಖಿಳಾರಿಯಾ ಮಸೀದಿ, ತಣ್ಣೀರುಹಳ್ಳ, ಕಲ್ಕಂದೂರು, ಕಾಗಡಿಕಟ್ಟೆ, ಹೊಸತೋಟದ ಮಸೀದಿಗಳಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು.

ಬಜೆಗುಂಡಿಯ ಖಿಳಾರಿಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯ ಇಮಾಮ್ ಉಬೈದ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿ ರಂಜಾನ್ ಸಂದೇಶ ನೀಡಿದರು.

ಪ್ರಾರ್ಥನೆ ನಂತರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಜಮಾತ್ ಅಧ್ಯಕ್ಷ ಕೆ.ಎ. ಯಾಕೂಬ್, ಸದಸ್ಯರಾದ ಸುಲೈಮಾನ್, ಹನೀಫ್, ನಿಯಾಜ್, ಅಬ್ದುಲ್ ರಜಾಕ್, ಅಬ್ಬಾಸ್ ಸೇರಿದಂತೆ ಇತರರು ಹಾಜರಿದ್ದರು.

ಹೊಸತೋಟದ ಬಟಕನಹಳ್ಳಿ ಜಾಮಿಯಾ ಮಸೀದಿಯಲ್ಲಿ ನಡೆದ ಹಬ್ಬಾಚರಣೆಯಲ್ಲಿ ಮಸೀದಿಯ ಖತೀಬರಾದ ಸಿದ್ದೀಕ್ ಝಹ್ರಿ ಮಾತನಾಡಿ, ಯುವಕರು ಸಮಾಜದ ಒಳಿತಿಗೆ ಮುಂದಡಿಯಿಡಬೇಕು. ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಕೈಲಾದ ಸಹಾಯ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಮಸೀದಿಯ ಪ್ರಮುಖರಾದ ರಸಾಕ್ ಸಹದಿ, ಸಲಾಂ ಮದನಿ, ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಕಾರ್ಯದರ್ಶಿ ಸಲೀಂ ಹೊಸತೋಟ, ಖಾಲೀದ್, ಉಸೈನ್, ಉಮ್ಮರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.