ಮಡಿಕೇರಿ,ಏ.೧೧: ಪ್ರತಿಯೊಬ್ಬ ಮಕ್ಕಳಲ್ಲೂ ಕ್ರೀಡಾ ಸ್ಫೂರ್ತಿ ಇರಬೇಕು, ಇದು ಮುಂದಿನ ಭವಿಷ್ಯಕ್ಕೆ ಸಹಾಯಕವಾಗಲಿದೆ ಎಂದು ಮೂರು ಬಾರಿ ಒಲಂಪಿಕ್ಸ್ ಆಡಿರುವ, ಹಾಗೂ ಭಾರತ ಹಾಕಿ ತಂಡದ ನಾಯಕ ಮಾಜಿ ಎಂ.ಎA. ಸೋಮಯ್ಯ ಕರೆ ನೀಡಿದರು.
ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸ ಲಾಗಿರುವ ೩೦ನೇ ವರ್ಷದ ಉಚಿತ ಬೇಸಿಗೆ ಶಿಬಿರಕ್ಕೆ ಆಗಮಿಸಿ ಮಕ್ಕಳಿಗೆ ಹಿತವಚನ ನುಡಿದರು. ಮಕ್ಕಳು ಈಗಿನಿಂದಲೇ ಕ್ರೀಡಾಸ್ಪೂರ್ತಿ ಬೆಳೆಸಿಕೊಳ್ಳುವದರೊಂದಿಗೆ ಕಲಿಸಿದ ಗುರುಗಳು, ಹಿರಿಯರಿಗೆ ಗೌರವ ಕೊಡುವದನ್ನು ಮೈಗೂಡಿಸಿ ಕೊಳ್ಳಬೇಕು. ಶಿಬಿರದಲ್ಲಿ ಹೇಳಿಕೊಡುವದನ್ನು ಮನೆಯಲ್ಲಿಯೂ ಅಭ್ಯಾಸ ಮಾಡಬೇಕು. ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ದೇಹ, ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಟ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಇದು ಉತ್ತಮ ಕ್ರೀಡಾಪಟು ವಾಗಲು ಅತ್ಯವಶ್ಯ ಎಂದು ಹೇಳಿದರು. ಈ ಶಿಬಿರ ಶಂಕರ್ ಸ್ವಾಮಿ ಆವರ ಕನಸಿನ ಕೂಸಾಗಿದ್ದು, ವಾಂಡರ್ಸ್ನಲ್ಲಿ ಆಟವಾಡಿದ ಎಂ.ಪಿ. ಗಣೇಶ್, ಗೋವಿಂದ, ಸುಬ್ಬಯ್ಯ ಸೇರಿದಂತೆ ಅನೇಕರು ಅಂತರರಾಷ್ಟಿçÃಯ ಆಟಗಾರರಾಗಿ ಹೊರ ಹೊಮ್ಮಿದ್ದಾರೆ, ಪ್ರಸ್ತುತ ಶಿಬಿರದಲ್ಲಿ ಉತ್ತಮ ತರಬೇತುದಾರರಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಕರೆ ನೀಡಿದರು. ಇದೀಗ ಜಿಲ್ಲೆಗೆ ಉತ್ತಮ ಜಿಲ್ಲಾಧಿಕಾರಿ ಬಂದಿದ್ದು, ಕ್ರಿಡಾಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಾಗಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವದಾಗಿ ಹೇಳಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರ ರಾದ ಬೊಪ್ಪಂಡ ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಗಣೇಶ್, ಲೋಕೇಶ್ ನಾಯ್ಡು, ಹರೇಂದ್ರ ಇತರರಿದ್ದರು.