ಗೋಣಿಕೊಪ್ಪ ವರದಿ, ಏ. ೧೧ : ಸುಳುಗೋಡು ಪಾಲ್ಪರೆ ಚಾಮುಂಡೇಶ್ವರಿ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶ ಮಹೋತ್ಸವ ತಾ. ೯ ರಂದು ಆರಂಭವಾಯಿತು. ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ನೇತೃತ್ವದಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ತಂತ್ರಿ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪೂಣ್ಯಾಹ ವಾಚನ, ಪ್ರಸಾದಶುದ್ದಿ, ರಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ತಾ. ೧೦ ರಂದು ಮಹಾ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಬಿಂಬ ಶುದ್ದಿಕಲಶ ಪೂಜೆ, ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಮಹಾ ಸುದರ್ಶನ ಹೋಮ, ದುರ್ಗಾಪೂಜೆ, ಕುಂಡ ಶುದ್ಧಿ, ಮಹಾಪೂಜೆ ನೆರವೇರಿದವು. ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.