ಚೆಟ್ಟಳ್ಳಿ, ಏ. ೧೧: ೩೦೦ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ‘ಮಳೆ ದೇವರು’ ಎಂದು ಪ್ರಸಿದ್ಧಿ ಪಡೆದ ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿ ದೇವಿಯ ಉತ್ಸವವು ತಾ. ೧೪ ರಿಂದ ಆರಂಭಗೊಳ್ಳಲಿದೆ ಎಂದು ದೇವಾಲಯ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. ೧೪ ರಂದು ಪಟ್ಟಣಿ ಹಬ್ಬ ತಾ. ೧೫ ರಂದು ದೊಡ್ಡ ಹಬ್ಬ ಹಾಗೂ ತಾ. ೧೬ ರಂದು ಭಂಡಾರ ತರುವ ಆಚರಣೆಗಳು ನಡೆಯಲಿವೆ.
ತಾ. ೧೧ ರಂದು ದೇವತಾ ಕಾರ್ಯದೊಂದಿಗೆ ಚೌರಿಆಟ್ ನಡೆಸಿ ಆಚರಣೆಗೆ ಮುನ್ನುಡಿ ಇಡಲಾಗಿದ್ದು, ೧೪ರ ಪಟ್ಟಣಿ ಹಬ್ಬದಂದು ಬೆಳಿಗ್ಗೆ ಪುತ್ತರಿರ ಕುಟುಂಬದ ಜಾಗದಲ್ಲಿರುವ ಭಗವತಿ ದೇವರ ಮೂಲನೆಲೆಗೆ ಅರ್ಚಕರು ಪೂಜೆ ಸಲ್ಲಿಸಲಿದ್ದು, ಮಧ್ಯಾಹ್ನ ೨ ಗಂಟೆಗೆ ಮುಳ್ಳಂಡ ಐನ್ಮನೆಯಿಂದ ದೇವತಕ್ಕÀರು ದೇವಭಂಡಾರವನ್ನು ತರುವುದು, ೧೫ರಂದು ದೊಡ್ಡಹಬ್ಬ ನಡೆದು ೧೬ ರಂದು ವಿವಿಧ ಪೂಜಾ ಕೈಂಕರ್ಯದೊAದಿಗೆ ಉತ್ಸವ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.