ಮಡಿಕೇರಿ, ಏ. ೧೦: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ ಈ ಬಾರಿ ಐದನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಕೊಡಗು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ವರ್ಷ ಐದನೇ ಸ್ಥಾನಕ್ಕೆ ಇಳಿದಿದೆ. ಶೇಕಡವಾರು ಫಲಿತಾಂಶದಲ್ಲಿ ಹೆಚ್ಚಳವಾಗಿದ್ದರೂ ರಾಜ್ಯದ ೩೨ ಜಿಲ್ಲೆಗಳ ಪೈಕಿ ಐದನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ದಕ್ಷಿಣ ಕನ್ನಡ (ಶೇ. ೯೭.೩೭), ಉಡುಪಿ (ಶೇ. ೯೬.೮೦), ವಿಜಯಪುರ ಶೇ. ೯೪.೮೯) ಹಾಗೂ ಉತ್ತರ ಕನ್ನಡ ಜಿಲ್ಲೆ ಶೇ. ೯೨.೫೧) ಫಲಿತಾಂಶದೊAದಿಗೆ ಮೊದಲ ನಾಲ್ಕು ಸ್ಥಾನಗಳಲ್ಲಿವೆ.
೨೦೨೩ರಲ್ಲಿ ಶೇ. ೯೦.೫೫ ಫಲಿತಾಂಶದೊAದಿಗೆ ರಾಜ್ಯದಲ್ಲಿ ಕೊಡಗು ಮೂರನೇ ಸ್ಥಾನದಲ್ಲಿತ್ತು. ಈ ವರ್ಷ ಫಲಿತಾಂಶ ಶೇ. ೯೨.೧೩ ಕ್ಕೆ ಏರಿಕೆಯಾಗಿದೆಯಾದರೂ ಜಿಲ್ಲೆ ಐದನೇ ಸ್ಥಾನದಲ್ಲಿರುವುದು ಕಂಡು ಬಂದಿದೆ. ಗದಗ ಜಿಲ್ಲೆ ಶೇ. ೭೨.೮೬ ಫಲಿತಾಂಶದೊAದಿಗೆ ಕೊನೆಯ ಸ್ಥಾನದಲ್ಲಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ಮಾರ್ಚ್ ೧ ರಿಂದ ೨೨ರವರೆಗೆ ಒಟ್ಟು ೧೧೨೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಉತ್ತರಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನು ಒಟ್ಟು ೭೦ ಮೌಲ್ಯಮಾಪನ ಕೇಂದ್ರಗಳಲ್ಲಿ ಮಾರ್ಚ್ ೨೫ ರಿಂದ ಏಪ್ರಿಲ್ ೩ರತನಕ ೨೭,೬೫೯ ಮೌಲ್ಯಮಾಪಕರು ನಡೆಸಿದ್ದು, ಇಂದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ೬,೯೮,೩೭೮ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಂಡಿದ್ದರು. ಇವರ ಪೈಕಿ ೬,೮೧,೦೭೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿಷಯಗಳಿಗೆ ೧೭,೨೯೯ ಮಂದಿ ಗೈರು ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದವರಲ್ಲಿ ಒಟ್ಟು ೫,೫೨,೬೯೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷದ ಶೇಕಡಾವಾರು ಉತ್ತೀರ್ಣತಾ ಪ್ರಮಾಣ ೮೧.೧೫ ರಷ್ಟಾಗಿದೆ. ೨೦೨೩ರಲ್ಲಿ ಉತ್ತೀರ್ಣತಾ ಪ್ರಮಾಣ ಶೇ. ೭೪.೬೭ ರಷ್ಟಿದ್ದು, ಈ ಬಾರಿ ಶೇ. ೬.೪೮ ರಷ್ಟು ಪ್ರಮಾಣ ಏರಿಕೆಯಾಗಿದೆ.
ವಿದ್ಯಾರ್ಥಿ ಪ್ರಕಾರದ ಫಲಿತಾಂಶ
೨೦೨೪ರಲ್ಲಿ ಹೊಸದಾಗಿ ೬,೨೨,೮೧೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೫,೨೬,೮೫೮ ಮಂದಿ ಉತ್ತೀರ್ಣರಾಗಿ ಶೇ. ೮೪.೫೯ ರಷ್ಟು ಫಲಿತಾಂಶ ಬಂದಿದೆ. ಪುನರಾವರ್ತಿತರಾಗಿದ್ದ ೩೬,೦೦೭ ವಿದ್ಯಾರ್ಥಿಗಳ ಪೈಕಿ ೧೫,೧೧೬ ಮಂದಿ ಉತ್ತೀರ್ಣರಾಗಿ ಶೇ. ೪೧.೯೮ ಹಾಗೂ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ ೨೨,೨೫೩ ಮಂದಿ ಪೈಕಿ ೧೦,೭೧೬ ಮಂದಿ ಉತ್ತೀರ್ಣರಾಗಿ ಶೇ. ೪೮.೧೬ ಫಲಿತಾಂಶ ಬಂದಿದೆ. ಎಲ್ಲಾ ಸೇರಿ ಒಟ್ಟಾರೆಯಾಗಿ ಶೇ. ೮೧.೧೫ ಫಲಿತಾಂಶ ಬಂದAತಾಗಿದೆ.
ವಿಷಯವಾರು ವಿವರ
ಕಲಾ ವಿಭಾಗದಲ್ಲಿ ೧,೮೭,೮೯೧ ಮಂದಿಯ ಪೈಕಿ ೧,೨೮,೪೪೮ ಮಂದಿ ತೇರ್ಗಡೆಯಾಗಿದ್ದು, ಶೇ. ೬೮.೩೬ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ೨,೧೫,೩೫೭ ಮಂದಿಯ ಪೈಕಿ ೧,೭೪,೩೧೫ ವಿದ್ಯಾರ್ಥಿಗಳು ತೇರ್ಗಡೆಯಾಗಿ
(ಮೊದಲ ಪುಟದಿಂದ) ಶೇ. ೮೦.೯೪ ಫಲಿತಾಂಶ ಮತ್ತು ವಿಜ್ಞಾನ ವಿಭಾಗದಲ್ಲಿ ೨,೭೭,೮೩೧ ಮಂದಿ ಪೈಕಿ ೨,೪೯,೯೨೭ ಮಂದಿ ಉತ್ತೀರ್ಣರಾಗಿ ಶೇ. ೮೯.೯೬ ಫಲಿತಾಂಶ ಬಂದಿದೆ.
ಮೂರು ವಿಷಯಗಳ ಪೈಕಿ ವಿಜ್ಞಾನ ವಿಭಾಗದಲ್ಲೇ ಹೆಚ್ಚು ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಈ ವಿಭಾಗದಲ್ಲೇ ಹೆಚ್ಚು ಫಲಿತಾಂಶ (ಶೇ. ೮೯.೯೬) ಬಂದಿರುವುದು ವಿಶೇಷವಾಗಿದೆ.
ಬಾಲಕಿಯರೇ ಮೇಲುಗೈ
ರಾಜ್ಯದಲ್ಲಿ ೩,೨೧,೬೪೭ ಬಾಲಕರು ಪರೀಕ್ಷೆ ಬರೆದಿದ್ದು, ೨,೪೭,೪೭೮ ಮಂದಿ ತೇರ್ಗಡೆಯಾಗಿ ಶೇ. ೭೬.೯೮ ಫಲಿತಾಂಶ ಬಂದಿದೆ. ೩,೫೯,೬೧೨ ಬಾಲಕಿಯರ ಪೈಕಿ ೩,೦೫,೨೧೨ ಮಂದಿ ಉತ್ತೀರ್ಣರಾಗಿದ್ದು, ಶೇ. ೮೪.೮೭ ರಷ್ಟು ಫಲಿತಾಂಶ ಬಂದಿದ್ದು, ಈ ಹಿಂದಿನAತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ೨೦೨೩ನೇ ಸಾಲಿನಲ್ಲೂ ಬಾಲಕರ ವಿಭಾಗದಲ್ಲಿ ಶೇ. ೬೯.೦೫ ಫಲಿತಾಂಶ ಬಂದಿದ್ದರೆ ಬಾಲಕಿಯರ ವಿಭಾಗದಲ್ಲಿ ಶೇ. ೮೦.೨೫ ರಷ್ಟು ಫಲಿತಾಂಶ ಬಂದಿತ್ತು.
ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಹೋಲಿಸಿದರೆ ಈ ಫಲಿತಾಂಶ ಒಂದಷ್ಟು ಸರಿ ಸಮಾನವಾಗಿದೆ. ನಗರಪ್ರದೇಶದಲ್ಲಿ ಶೇಕಡವಾರು ೮೧.೧೦ ಮಂದಿ ಉತ್ತೀರ್ಣರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿಯೂ ಶೇ. ೮೧.೩೧ ರಷ್ಟು ಮಂದಿ ತೇರ್ಗಡೆಯಾಗಿರುವುದು ಮತ್ತೊಂದು ಗಮನಾರ್ಹ ವಿಚಾರವಾಗಿದೆ.
ಜಿಲ್ಲೆಗೆ ೨ನೆ ಸ್ಥಾನವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮಡಿಕೇರಿ ಸಂತ ಮೈಕಲರ ಕಾಲೇಜಿನ ಜೀವನ್ ಡಿ.ಪಿ ಹಾಗೂ ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು ಕಾಲೇಜಿನ ಸಿಂಚು ಹೆಚ್.ಆರ್ ತಲಾ ೫೮೮ ಅಂಕದೊAದಿಗೆ ೨ನೆ ಸ್ಥಾನ ಹಂಚಿಕೊAಡಿದ್ದಾರೆ. ಜೀವನ್ ಮಡಿಕೇರಿ ನಿವಾಸಿ ಪ್ರಶಾಂತ್ ಡಿ.ಎಮ್ - ಸುಮಾ ಡಿ.ಪಿ ದಂಪತಿಯ ಪುತ್ರ ಹಾಗೂ ಸಿಂಚು ಮಡಿಕೇರಿ ನಿವಾಸಿ ಹೆಚ್.ಸಿ ರತೀಶ್ - ಬಿ.ಆರ್ ಸುಧಾ ದಂಪತಿಯ ಪುತ್ರಿ. ತೃತೀಯ ಸ್ಥಾನ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಕಾವೇರಮ್ಮ ಎಮ್.ಎಮ್ (೫೮೬ ಅಂಕ) ಅವರ ಪಾಲಾಗಿದೆ. ಇವರು ಮಂಡೇಡ ಮೇದಪ್ಪ - ಪಾರ್ವತಿ ದಂಪತಿಯ ಪುತ್ರಿ.
ತಾಯಿ-ಮಗಳು ಉತ್ತೀರ್ಣ
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿಯವರಾದ ರಿನಿಶಾ ಹಾಗೂ ಅವಳ ತಾಯಿ ಬೇಬಿರಾಣಿ ೨೦೨೩-೨೪ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ಗೋಣಿಕೊಪ್ಪಲಿನ ವಿದ್ಯಾನಿಕೇತನ್ ಕಾಲೇಜಿನಲ್ಲಿ ಓದುತ್ತಿರುವ ಎಲೆಕ್ಟ್ರಿಕಲ್ ಕ್ಲಾಸ್ ೧ ಗುತ್ತಿಗೆದಾರರಾದ ಸುರೇಂದ್ರ.ಟಿ.ಕೆ ಅವರ ಪುತ್ರಿ ರಿನಿಶಾ ಟಿ.ಎಸ್ ೬೦೦ಕ್ಕೆ ೫೭೦ ಪಡೆದು ಅತ್ಯುನ್ನತ ಅಂಕ ಪಡೆದರೆ ಅವಳ ತಾಯಿ ಬೇಬಿರಾಣಿ ಎಂಯು ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ೬೦೦ಕ್ಕೆ ೩೮೮ ಪಡೆಯುವ ಮೂಲಕ ಪ್ರಥಮ ಶ್ರೇಣಿಯ ಅಂಕ ಪಡೆದು ಒಂದೇ ವರ್ಷದಲ್ಲಿ ತಾಯಿ-ಮಗಳು ಪಿಯುಸಿ ಉತ್ತೀರ್ಣರಾಗಿದ್ದು, ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ ಮಗಳು ೯೬ ಪಡೆದರೆ ತಾಯಿ ೯೩ ಅಂಕಪಡೆದಿದ್ದಾರೆ.
ಕಳೆದ ೨೫ ವರ್ಷಗಳ ಹಿಂದೆ ಹತ್ತನೇ ತರಗತಿಯನ್ನು ಓದಿದನಂತರ ಮಗಳ ಒತ್ತಾಯಕ್ಕಾಗಿ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಹೆಮ್ಮೆ ಎನಿಸಿದೆಂದು ಬೇಬಿರಾಣಿ ಹೇಳುತ್ತಾಳೆ. ನನ್ನ ತಾಯಿಯು ಪಿಯುಸಿ ಉತ್ತೀರ್ಣರಾಗಿರುವುದು ನಾನು ಉತ್ತೀರ್ಣರಾಗಿರುವುದಕ್ಕಿಂತಲೂ ಹೆಮ್ಮೆ ಎನಿಸಿದೆ ಎನ್ನುತ್ತಾಳೆ ರಿನಿಶಾ. -ಕರುಣ್ ಕಾಳಯ್ಯ
ವಾಣಿಜ್ಯ ವಿಭಾಗದಲ್ಲಿ
ಜಿಲ್ಲೆಗೆ ೨ನೆ ಸ್ಥಾನವನ್ನು ಅರ್ವತ್ತೊಕ್ಲು ಸರ್ವದೈವತಾ ಕಾಲೇಜಿನ ರಶ್ಮಿತಾ ಕೆ.ಕೆ (೫೮೯ ಅಂಕ) ಪಡೆದುಕೊಂಡಿದ್ದಾರೆ. ಇವರು ಕಿರಣ್ ಕೆ.ಎಂ - ಭವಾನಿ ದಂಪತಿಯ ಪುತ್ರಿ. ತೃತೀಯ ಸ್ಥಾನವನ್ನು ಪೊನ್ನಂಪೇಟೆ ಸಂತ ಅಂಥೋಣಿ ಕಾಲೇಜಿನ ಬಿಂದು ಐ ಹಾಗೂ ಕೊಟ್ಟಮುಡಿ ಮರ್ಖಜ್ ಕಾಲೇಜಿನ ಜೂವೇರಿಯಾ ಪಿ.ಜೆಡ್ ಅವರುಗಳು ತಲಾ ೫೮೮ ಅಂಕಗಳೊAದಿಗೆ ಹಂಚಿಕೊAಡಿದ್ದಾರೆ. ಬಿಂದು ಅವರು ಇಂದ್ರೇಶ್ - ಡಿಸೋಜಾ ದಂಪತಿಯ ಪುತ್ರಿ. ಜೂವೇರಿಯಾ ಜುಬೇರ್ ಪಿ.ಎಸ್ - ಬುಶ್ರಾ ದಂಪತಿಯ ಪುತ್ರಿ.
ಕಲಾ ವಿಭಾಗದಲ್ಲಿ
ದ್ವಿತೀಯ ಸ್ಥಾನವನ್ನು ಸಿದ್ದಾಪುರದ ಇಕ್ರಾ ಕಾಲೇಜಿನ ಸಫ್ನ ಪಿ.ಐ ಅವರು ಪಡೆದು ಕೊಂಡಿದ್ದಾರೆ. ಇವರು ಇಸ್ಮೆöÊಲ್ ಪಿ.ಎಂ - ಜುಹಾರ ಪಿ.ಯು ದಂಪತಿಯ ಪುತ್ರಿ. ತೃತೀಯ ಸ್ಥಾನವನ್ನು ಮಡಿಕೇರಿ ಸಂತ ಜೋಸೆಫರ ಕಾಲೇಜಿನ ಶ್ರೀನಂದಾ ಎಸ್ ಗಳಿಸಿದ್ದಾರೆ. ಇವರು ಕೆ.ಶಿವಕುಮಾರ್ - ಲತಾ ಪಿ.ಎಸ್ ದಂಪತಿಯ ಪುತ್ರಿ.
ವೀರಾಜಪೇಟೆ
ವೀರಾಜಪೇಟೆ ನಗರದ ಶಾಫಿ ಜುಮಾ ಮಸೀದಿಯಲ್ಲಿ ರವೂಫ್ ಹುದವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಶುಹೈಬ್ ಫೈಝಿ, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಬಾದ್ಷಾ ಮಸೀದಿಯಲ್ಲಿ ಮಖ್ಸೂದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮುತ್ತಲಿಬ್ ಅನ್ವರಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.
ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೆöÊಟ್ ಕ್ಯಾಂಪಸ್ ಈದ್ಗಾದಲ್ಲಿ ಅಬ್ದುಲ್ ಗಫೂರ್ ಉಳಿಯಿಲ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್ಗಾದಲ್ಲಿ ಸಜ್ಜಾದ್ ಅಲ್ ಹಿಕ್ಮಿ ಪ್ರವಚನ ಮತ್ತು ನಮಾಝ್ಗೆ ನಾಯಕತ್ವ ನೀಡಿದರು. ನಮಾಝ್ ನಂತರ ಸಮುದಾಯದÀವರು ಪರಸ್ಪರ ಶುಭಾಶಯ ಹಂಚಿದರು. ಕೇರಳದಲ್ಲಿ ಶವ್ವಾಲ್ ತಿಂಗಳಿನ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶಾಫಿ ವಿಭಾಗದವರು ಮಾತ್ರ ಹಬ್ಬ ಆಚರಿಸಿದರು. ಹನಫಿ ಮುಸಲ್ಮಾನರು ಗುರುವಾರ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಗುಲ್ಶದ್ ಅಹಮದ್, ಸುಣ್ಣದ ಬೀದಿಯ ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಮಸ್ಜಿದ್-ಎ-ಅಝಮ್ನಲ್ಲಿ ಹಸೀಬ್ ಶರೀಫ್ ಪ್ರವಚನ ಮತ್ತು ನಮಾಝ್ಗೆ ನಾಯಕತ್ವ ನೀಡಲಿದ್ದಾರೆ.
ಇಂದು ಸರ್ಕಾರಿ ರಜೆ
ರಂಜಾನ್ ಹಬ್ಬದ ಪ್ರಯುಕ್ತ ತಾ. ೧೧ರಂದು (ಇಂದು) ಸರ್ಕಾರಿ ರಜೆ ಘೋಷಿಸಲಾಗಿದೆ.
ಪೂರಕ ಪರೀಕ್ಷೆ
೨೦೨೪ರ ದ್ವಿತೀಯ ಪಿಯುಸಿ ಪರೀಕ್ಷೆ - ೨ (ಪೂರಕ ಪರೀಕ್ಷೆ) ಏ. ೨೯ ರಿಂದ ಮೇ ೧೬ರ ತನಕ ನಡೆಸಲಾಗುವುದು.
ಇತರ ಮಾಹಿತಿ
uಉತ್ತರ ಪತ್ರಿಕೆಯ ಸ್ಕಾö್ಯನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ. ೧೦ ರಿಂದ ೧೬ರ ತನಕ ಅವಕಾಶವಿದೆ.
u ಉತ್ತರ ಪತ್ರಿಕೆಯ ಸ್ಕಾö್ಯನ್ಡ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಏ. ೧೪ ರಿಂದ ೧೯ರತನಕ ಅವಕಾಶವಿದೆ.
u ಮರು ಮೌಲ್ಯಮಾಪನಕ್ಕಾಗಿ ಮತ್ತು ಮರು ಎಣಿಕೆಗೆ ಏ. ೧೪ ರಿಂದ ೨೦ರವರೆಗೆ ಅರ್ಜಿ ಸಲ್ಲಿಸಬಹುದು. (ಸ್ಕಾö್ಯನ್ಡ್ಪ್ರತಿ ಪಡೆದುಕೊಂಡವರಿಗೆ ಮಾತ್ರ)
u ಸ್ಕಾö್ಯನ್ಡ್ ಪ್ರತಿ ಪಡೆಯಲು ಶುಲ್ಕ - ರೂ. ೫೩೦ (ಪ್ರತಿ ವಿಷಯಕ್ಕೆ)
u ಮರು ಮೌಲ್ಯ ಮಾಪನದ ಶುಲ್ಕ - ರೂ. ೧೬೭೦ (ಪ್ರತಿ ವಿಷಯಕ್ಕೆ)