ನಾಪೋಕ್ಲು, ಏ. ೧೦: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೨ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ ಅಂಜಪರವAಡ, ಕಲಿಯಂಡ ತಂಡಗಳು ಸೇರಿದಂತೆ ಮಾಚಿಮಂಡ, ಬೊಳ್ಳೆಪಂಡ, ಕೊಂಗಾAಡ, ಚಿರಿಯಪಂಡ, ಅರೆಯಡ, ಕೇಳಪಂಡ, ಅಮ್ಮಂಡ, ಚೇನಂಡ, ಕರೋಟಿರ, ಮಂಡಿರ(ನೆಲಜಿ), ತೀತಮಾಡ, ತಿರುಟೆರ, ಕುಂಡ್ಯೋಳAಡ, ಕುಟ್ಟಂಡ (ಅಮ್ಮತ್ತಿ) ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ನಡೆದ ಚೊಟ್ಟೇಕ್‌ಮಾಡ ಮತ್ತು ಕೊಂಗಾAಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕೊಂಗಾAಡ ತಂಡವು ಚೊಟ್ಟೇಕ್‌ಮಾಡ ತಂಡವನ್ನು ೩-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ತಂಡದ ಪರ ರಚನ್, ಕಾರ್ಯಪ್ಪ, ಆಕಾಶ್ ತಲಾ ಒಂದೊAದು ಗೋಲು ದಾಖಲಿಸಿದರು. ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಚೆರುವಾಳÀಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಚೆರುವಾಳÀಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ಚಂಗಪ್ಪ ಎರಡು ಗೋಲು ದಾಖಲಿಸಿದರೆ, ಕಾರ್ಯಪ್ಪ ಮತ್ತು ದಿವಿನ್ ತಲಾ ಒಂದೊAದು ಗೋಲು ದಾಖಲಿಸಿದರು. ಕೂಪದಿರ ಮತ್ತು ಮಂಡಿರ(ನೆಲಜಿ) ತಂಡಗಳ ನಡುವಿನ ಪಂದ್ಯದಲ್ಲಿ ಮಂಡಿರ ತಂಡವು ಕೂಪದಿರ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ತಂಡದ ಪರ ತನಿಲ್ ಒಂದು ಗೋಲು ದಾಖಲಿಸಿದರು.

ಕುಟ್ಟಂಡ(ಅಮ್ಮತ್ತಿ) ಮತ್ತು ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಟ್ಟಂಡ ತಂಡವು ಮಾಪಂಗಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ರಜಿನಾ ಎರಡು ಗೋಲು ದಾಖಲಿಸಿದರೆ, ಕವನ್ ಒಂದು ಗೋಲು ದಾಖಲಿಸಿದರು. ಪಳಂಗಿಯAಡ ಮತ್ತು ಅಂಜಪರವAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವAಡ ತಂಡವು ಪಳಂಗಿಯAಡ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ಚಿರಾಗ್ ಎರಡು ಗೋಲು ದಾಖಲಿಸಿದರೆ, ಹೇಮಂತ್, ಅವಿನ್ ಚಿಟ್ಟಿಯಪ್ಪ, ದೀಪಕ್ ಸುಬ್ಬಯ್ಯ ತಲಾ ಒಂದೊAದು ಗೋಲು ದಾಖಲಿಸಿದರು. ಮಾಜಿ ಒಲಂಪಿಯನ್ ಅಂಜಪರವAಡ ಸುಬ್ಬಯ್ಯ ತಂಡದ ಪರ ಆಟವಾಡಿ ಗಮನ ಸೆಳೆದರು.

ಮೈದಾನ ೨ರಲ್ಲಿ ನಡೆದ ಮಾಚಿಮಂಡ ಮತ್ತು ಬಾಚಮಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಾಚಿಮಂಡ ತಂಡವು ಬಾಚಮಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ದರ್ಶನ್ ಬಿದ್ದಪ್ಪ, ಪ್ರಸಾದ್ ಚಂಗಪ್ಪ, ಆಶಿಕ್ ಉತ್ತಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಆದೇಂಗಡ ಮತ್ತು ಚಿರಿಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿರಿಯಪಂಡ ತಂಡವು ಆದೇಂಗಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು.

ತಂಡದ ಪರ ದೀಪಕ್ ಸುಬ್ಬಯ್ಯ, ಸಚಿನ್ ಸೋಮಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಕೇಳಪಂಡ ಮತ್ತು ಅವರೆಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇಳಪಂಡ ತಂಡವು ಅವರೆಮಾದಂಡ ತಂಡವನ್ನು ೨-೧ ಗೋಲಿನ ಅಂತರದಿAದ ಸೋಲಿಸಿತು. ಅವರೆಮಾದಂಡ ತಂಡದ ಪರ ನೂತನ್ ಉತ್ತಪ್ಪ ಒಂದು ಗೋಲು ದಾಖಲಿಸಿದರೆ, ಕೇಳಪಂಡ ತಂಡದ ಪರ ಗಣೇಶ್ ನಾಣಯ್ಯ ಎರಡು ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು. ನಂಬಡಮAಡ ಮತ್ತು ಚೇನಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೇನಂಡ ತಂಡವು ನಂಬಡಮAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು.

ತಂಡದ ಪರ ಮಾದಪ್ಪ, ಮೌರ್ಯ ತಿಮ್ಮಯ್ಯ ತಲಾ ಒಂದೊAದು ಗೋಲು ದಾಖಲಿಸಿದರು. ತೀತಮಾಡ ಮತ್ತು ಬೈರೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತಮಾಡ ತಂಡವು ಬೈರೇಟಿರ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಮದನ್, ಸುಜಿತ್ ಸೋಮಯ್ಯ, ಪೃಥ್ವಿ ತಲಾ ಒಂದು ಗೋಲು ದಾಖಲಿಸಿದರು. ಆತಿಥೇಯ ಕುಂಡ್ಯೋಳAಡ ಮತ್ತು ಚೆರಿಯಂಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕುಂಡ್ಯೋಳAಡ ತಂಡವು ಚೆರಿಯಂಡ ತಂಡವನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ತಂಡದ ಪರ ದಿವಿನ್ ದೇವಯ್ಯ, ಪ್ರಧಾನ್ ಪೊನ್ನಣ್ಣ, ಕಾರ್ಯಪ್ಪ, ಪೊನ್ನಪ್ಪ ತಲಾ ಒಂದೊAದು ಗೋಲು ದಾಖಲಿಸಿದರು.

ಮೈದಾನ ೩ರಲ್ಲಿ ನಡೆದ ಬೊಳ್ಳೆಪಂಡ ಮತ್ತು ವಾಟೇರಿರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬೊಳ್ಳೆಪಂಡ ತಂಡವು ವಾಟೇರಿರ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿತು. ತಂಡದ ಪರ ಗ್ಯಾನ್ ಒಂದು ಗೋಲು ದಾಖಲಿಸಿದರು. ಅರೆಯಡ ಮತ್ತು ದೇಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ತಂಡವು ದೇಯಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ತಂಡದ ಪರ ಸನು ಚಿಣ್ಣಪ್ಪ, ಪೆಮ್ಮಯ್ಯ, ಅಪನ್ ತಿಮ್ಮಯ್ಯ ತಲಾ ಒಂದೊAದು ಗೋಲು ಗಳಿಸಿದರು.

ಮುದ್ದಿಯಡ ಮತ್ತು ಅಮ್ಮಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಅಮ್ಮಂಡ ತಂಡವು ಮುದ್ದಿಯಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ತಂಡದ ಪರ ಪ್ರಧಾನ್, ಸೋಮಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಕಲ್ಲೇಂಗಡ ಮತ್ತು ಕರೋಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕರೋಟಿರ ತಂಡವು ಕಲ್ಲೇಂಗಡ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಸೋಮಯ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೂವಣ್ಣ ಚೊಟ್ಟೇಕ್‌ಮಾಡ ತಂಡದ ಪರ ೬ ಜನ ಹಿರಿಯರು ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ತಂಡದ ಪರ ರಾಜೀವ್ ಬೋಪಯ್ಯ(೫೫), ಪೂವಯ್ಯ(೬೨), ರಮೇಶ್(೬೭), ಮಾದಪ್ಪ(೬೭), ಪೂವಯ್ಯ(೭೪), ಮಾದಪ್ಪ(೬೪), ಬಿದ್ದಪ್ಪ(೬೦) ಆಟವಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.ಒಂದು ಗೋಲು ದಾಖಲಿಸಿದರು. ತಿರುಟೆರ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ತಿರುಟೆರ ತಂಡವು ಪುಲಿಯಂಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ತಿರುಟೆರ ತಂಡದ ಪರ ವಿನು ಸೋಮಯ್ಯ ಎರಡು ಗೋಲು, ಪ್ರೀತಂ ಪೂವಯ್ಯ ಒಂದು ಗೋಲು ದಾಖಲಿಸಿದರೆ, ಪುಲಿಯಂಡ ತಂಡದ ಪರ ಪೊನ್ನಣ್ಣ ಒಂದು ಗೋಲು ದಾಖಲಿಸಿದರು.

ವೀಕ್ಷಕ ವಿವರಣೆಗಾರರಾಗಿ ಮೂಡೆರ ಹರೀಶ್ ಕಾಳಯ್ಯ, ಕುಲ್ಲೇಟಿರ ಅರುಣ್ ಬೇಬ, ಮಣವಟ್ಟಿರ ದಯಾ ಚಿಣ್ಣಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ಕಂಗಾAಡ ಜಾಲಿ ಪೂವಪ್ಪ, ಬೊಟ್ಟೋಳಂಡ ಸೌಮ್ಯ ಕಾರ್ಯ ನಿರ್ವಹಿಸಿದರು.

ತಾ. ೯ರಂದು ನಡೆದ ೧೧ನೇ ದಿನದ ಪಂದ್ಯಾಟದಲ್ಲಿ ಕುಲ್ಲಚಂಡ, ಪುಟ್ಟಿಚಂಡ, ಮೇಚಿಯಂಡ, ಕೇಲೇಟಿರ, ಕೋಟೆರ(ನೆಲಜಿ), ಬೊಟ್ಟೋಳಂಡ, ಬಾಳೆಯಡ, ಉದಿಯಂಡ, ನೆರ್ಪಂಡ, ಮಾಳೇಟಿರ, ಚೆಪ್ಪುಡಿರ, ಮೂಡೆರ, ಪಾಲಂದಿರ, ಕಡೇಮಾಡ, ದಾಸಂಡ, ಕರ್ತಮಾಡ, ಮೊಣ್ಣಂಡ, ಚೊಟ್ಟೆಯಂಡಮಾಡ ತಂಡಗಳು ಮುನ್ನಡೆ ಸಾಧಿಸಿವೆ.

ನಿರ್ಗಮಿಸಿದ ತಂಡಗಳು: ಬೊಳಿಯಾಡಿರ, ತಾತಂಡ, ನಂದಿನೆರವAಡ, ಕುಪ್ಪಣಮಾಡ, ಪರದಂಡ, ಚೊಟ್ಟೆರ, ಕಾಚಪನೆರ, ಹಂಚೆಟ್ಟಿರ, ನೆರ್ಪಂಡ, ಪೊನ್ನಚೆಟ್ಟಿರ, ಅಮ್ಮಾಟಂಡ, ಕಂಜಿತAಡ, ಅಟ್ರಂಗಡ, ಮುಂಡೋಟಿರ, ಮೈಂದಪAಡ, ಪಳೆಯಂಡ, ಪಾಲಚಂಡ, ಮಾಚಂಗಡ ಸೋಲನುಭವಿಸುವದರ ಮೂಲಕ ಪಂದ್ಯಾಟದಿAದ ನಿರ್ಗಮಿಸಿವೆ. -ಪಿ.ವಿ.ಪ್ರಭಾಕರ್