ಕುಶಾಲನಗರ, ಏ. ೭: ಕೊಡಗು ಜಿಲ್ಲೆಯ ಬ್ಯೂಟಿ ಪಾರ್ಲರ್ ಮಾಲೀಕರು ಹಾಗೂ ಸೌಂದರ್ಯ ತಜ್ಞರಿಗೆ ಕುಶಾಲನಗರದಲ್ಲಿ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು. ಕುಶಾಲನಗರ ಮಾದಾಪಟ್ಟಣ ಬಳಿ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸೌಂದರ್ಯ ವರ್ಧಕ ಸಂಸ್ಥೆಯಾದ ಗೊನಾರಿ ಮುಖ್ಯಸ್ಥೆ ಲುಬ್ನಮ್ ಅವರ ನೇತೃತ್ವದಲ್ಲಿ ಸೌಂದರ್ಯ ವರ್ಧಕಗಳ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಾಯೋಗಿಕವಾಗಿ ಸೌಂದರ್ಯ ಪರಿಕರಗಳ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು. ಕೊಡಗು ಜಿಲ್ಲೆಯ ಹಲವು ಸೌಂದರ್ಯ ತಜ್ಞರು ಮತ್ತು ಬ್ಯೂಟಿ ಪಾರ್ಲರ್ ಕೇಂದ್ರಗಳ ಮಾಲೀಕರುಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಬ್ಯೂಟಿಷಿಯನ್ ತಜ್ಞ ಲೋಕೇಶ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು.