ಮುಳ್ಳೂರು, ಏ. ೭: ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಮಹಿಳಾ ದೌರ್ಜನ್ಯ ನಿರ್ಭಂಧ ಘಟಕವನ್ನು ಉದ್ಘಾಟಿಸಲಾಯಿತು. ಘಟಕವನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಉದ್ಘಾಟಿಸಿದರು.

ಈ ಸಂದರ್ಭ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರಿಗೆ ಕಾನೂನು ರಕ್ಷಣೆ, ಹದಿ ಹರಿಯದ ಮತ್ತು ಕಿಶೋರಿಯರ ಸಮಸ್ಯೆ ಕುರಿತಾಗಿ ಸಾವಿತ್ರಮ್ಮ ಮತ್ತು ಶಾಂತಿ ಅವರುಗಳು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು ಮತ್ತು ಕಾಲೇಜಿನ ಪ್ರಾಂಶುಪಾಲ ಎಂ.ಆರ್. ನಿರಂಜನ್, ಘಟಕದ ಮೇಲ್ವಿಚಾರಕಿ ಶ್ರೇಯಾ ಸುಹಾಸ್ ಮತ್ತು ಘಟಕದ ಸಹ ಮೇಲ್ವಿಚಾರಕಿ ರಮ್ಯ ಶಿವಣ್ಣ, ಮಕ್ಕಳ ಆಪ್ತ ಸಮಾಲೋಚಕರು, ಕಾಲೇಜಿನ ಉಪನ್ಯಾಸಕಿಯರು ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.