ವೀರಾಜಪೇಟೆ, ಏ. ೭: ಸುಮಾರು ೫೦೦ ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಐತಿಹಾಸಿಕ ದೇವಾಲಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ಪ್ರತಿ ೧೨ ವರ್ಷಗಳಿಗೊಮ್ಮೆ ಲೋಕ ಕಲ್ಯಾಣಕ್ಕಾಗಿ ನಡೆಸುವ ಮಹಾ ಕುಂಭಾಭಿಷೇಕ ಪೂಜೆ ೩ ದಿನಗಳ ಕಾಲ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ನಡೆಯಿತು.

ಈ ಪೂಜಾ ಕೈಂಕರ್ಯಗಳನ್ನು ತಮಿಳುನಾಡಿನ ೧೭ ಜನ ತಂತ್ರಿಗಳ ತಂಡದ ವತಿಯಿಂದ ನೆರವೇರಿಸಲಾಯಿತು. ಆರಂಭದಲ್ಲಿ ತಲಕಾವೇರಿಯಿಂದ ತೀರ್ಥವನ್ನು ತಂದು ಅಮ್ಮ ಹಾಗೂ ಕುಂಭನಿಗೆ ಅಭಿಷೇಕ ಮಾಡಿ ನಂತರ ವಿವಿಧ ಪೂಜೆಗಳನ್ನು ನಡೆಸಲಾಯಿತು. ಈ ಬಾರಿ ರಾಜ್ಯದಲ್ಲಿಯೇ ಬರಗಾಲ ಆವರಿಸಿಕೊಂಡಿರುವುದರಿAದ ಉತ್ತಮ ಮಳೆಯಾಗಿ ಬೆಳೆಯಾಗಿ ದೇಶ ಸುಭೀಕ್ಷೆಯಾಗಲು ವರುಣ ಪೂಜೆಯನ್ನು ನಡೆಸಲಾಯಿತು.

ತಾ.೨ ರಂದು ಮಂಗಳವಾರ ಸಂಜೆ ೬ ಗಂಟೆಗೆ ವಿವಿಧ ಪೂಜಾ ವಿಧಿ ವಿಧನಗಳು ಪ್ರಾರಂಭಗೊAಡು ಮೊದಲಿಗೆ ಗಣಪತಿ ಪೂಜೆ, ವಾಸ್ತು ಶಾಂತಿ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾಗ ಪೂಜೆ, ಪ್ರಥಮ ಕಾಲಯಾಗ ಶಾಲಾ ಪ್ರವೇಶ, ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಕರುಪ್ಪ ಸ್ವಾಮಿ, ಶ್ರೀ ಅಂಗಾಳ ಪರಮೇಶ್ವರಿ ದೇವಿಗೆ ಕುಂಭಾಭಿಷೇಕ. ತದನಂತರ ಗೋಪೂಜೆ, ಮಹಾಭಿಷೇಕ, ಅಲಂಕಾರ ಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು.

ಪೂಜಾ ಕೈಂಕರ್ಯದಲ್ಲಿ ವೀರಾಜಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ವಿವಿಧ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲಾಯಿತು.

ದೇವಾಲಯದ ಟ್ರಸ್ಟ್ ಅಧ್ಯಕ್ಷ ಟಿ.ಪಿ. ಕೃಷ್ಣ ಮಾತನಾಡಿ ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾ ಕುಂಭಾಭಿಷೇಕ ನಡೆಸಲಾಗುತ್ತದೆ. ಅದೇ ರೀಯಲ್ಲಿ ಈ ವರ್ಷ ಕುಂಭಾಭಿಷೇಕ, ಹಾಗೂ ವಿವಿಧ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ಎಂದರು. ಈ ಸಂದರ್ಭ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಟಿ.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಎನ್ ರಂಜನ್, ಟಿ.ಪಿ. ವೇಣು ಗೋಪಾಲ್, ಟಿ.ಪಿ. ಗುರುನಾಥ್, ಟಿ.ಆರ್. ಜನಾರ್ಧನ್, ಟಿ.ಡಿ. ಹರೀಶ್, ಟಿ.ಸಿ. ನಿಶಾಂಕ್, ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಇದ್ದರು.