ಮಡಿಕೇರಿ, ಏ. ೭: ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಮಡಿಕೇರಿಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಲೋಕಸಭಾ ಚುನಾವಣೆ ಯನ್ನು ಜಂಟಿಯಾಗಿ ಎದುರಿಸುವ ತೀರ್ಮಾನವನ್ನು ಮಾಡಲಾಯಿತು ಮತ್ತು ಈ ನಿಟ್ಟಿನಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ಜಾತ್ಯತೀತ ಜನತಾದಳದ ಕೋರ್ ಕಮಿಟಿ ಸದಸ್ಯ ಸಿ.ಎಲ್. ವಿಶ್ವ ಮತ್ತು ಪ್ರವೀಣ್ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಎರಡು ಪಕ್ಷದ ಪ್ರಮುಖ ರಾದ ಪಾಣತ್ತಲೆ ವಿಶ್ವನಾಥ್, ನಾಗರಾಜ್, ಅನಿತಾ ಪೂವಯ್ಯ, ಕನ್ನಿಕೆ, ಮನು ಮಂಜುನಾಥ್, ಪುಷ್ಪವತಿ, ಗೌತಮ್, ಕವನ್ ಕಾವೇರಪ್ಪ, ಮಂಜುನಾಥ್ ಶಿವದಾಸ್, ಜಾಶೀರ್, ಸುರೇಶ್, ರವಿ ಮೊಗೇರ ಸೇರಿದಂತೆ ಇನ್ನಿತರರು ಹಾಜರಿದ್ದರು.