ನಾಪೋಕ್ಲು, ಏ. ೭: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ೯ನೇ ದಿನದ ಪಂದ್ಯಾಟದಲ್ಲಿ ಸಣ್ಣುವಂಡ ಮತ್ತು ಮಂಡೇಪAಡ ತಂಡಗಳು ಭರ್ಜರಿ ಜಯಗಳಿಸಿವೆ.
ಸಣ್ಣುವಂಡ ಮತ್ತು ಮೂಕಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಣ್ಣುವಂಡ ತಂಡವು ಮೂಕಚಂಡ ತಂಡದ ವಿರುದ್ಧ ೭-೧ ಗೋಲುಗಳ ಜಯ ದಾಖಲಿಸಿದೆ. ತಂಡದ ಪರ ಉತ್ತಪ್ಪ ೩, ಪೊನ್ನಣ್ಣ ೨, ಮುತ್ತಪ್ಪ, ಯತೀಕ್ ಅಯ್ಯಪ್ಪ ತಲಾ ಒಂದೊAದು ಗೋಲು ಗಳಿಸಿದರು. ಅಂತೆಯೇ ಮಂಡೇಪAಡ ಮತ್ತು ನಾಳಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪAಡ ತಂಡವು ನಾಳಿಯಂಡ ತಂಡವನ್ನು ೬-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ತಂಡದ ಪರ ಚಂದನ್ ಕಾರ್ಯಪ್ಪ ೫ ಗೋಲು ಮತ್ತು ಸಿದ್ದು ಪೂವಯ್ಯ ೧ ಗೋಲುಗಳಿಸಿ ಸಂಭ್ರಮಿಸಿದರು.
ತೀತರಮಾಡ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ತೀತರಮಾಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಬ್ಬಚ್ಚಿರ ಮತ್ತು ಬಾದುಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾದುಮಂಡ ತಂಡವು ಕಬ್ಬಚ್ಚಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೊಲ್ಲಿರ ಮತ್ತು ಮುಕ್ಕಾಟಿರ (ಹರಿಹರ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಕೊಲ್ಲಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು.
ಕುಟ್ಟೇಟಿರ ಮತ್ತು ಮಂಡೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಟಿರ ತಂಡವು ಕುಟ್ಟೇಟಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊವ್ವೇರಿಯಂಡ ಮತ್ತು ಕಾವಾಡಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊವ್ವೇರಿಯಂಡ ತಂಡವು ಕಾವಾಡಿಚಂಡ ತಂಡವನ್ನು ೨-೦ ಗೋಲಿನಿಂದ ಮಣಿಸಿತು. ಅಜ್ಜಿಕುಟ್ಟಿರ ಮತ್ತು ಮೇವಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇವಡ ತಂಡವು ಅಜ್ಜಿಕುಟ್ಟಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಗುಮ್ಮಟ್ಟಿರ ಮತ್ತು ಚಿಮ್ಮಣಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿಮ್ಮಣಮಾಡ ತಂಡವು ಗುಮ್ಮಟ್ಟಿರ ತಂಡವನ್ನು ೩-೧ ಗೋಲುಗಳಿಂದ ಪರಾಭವಗೊಳಿಸಿತು.
ಪುಗ್ಗೇರ ಮತ್ತು ಅಪ್ಪಂಡೆರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಂಡೆರರAಡ ತಂಡವು ಪುಗ್ಗೇರ ತಂಡವನ್ನು ೪-೧ ಗೋಲುಗಳಿಂದ ಪರಾಭವಗೊಳಿಸಿತು. ಚಂದುರ ಮತ್ತು ಕೋದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂದುರ ತಂಡವು ಕೋದಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿತು. ಆಲೆಮಾಡ ಮತ್ತು ಗಾಂಡAಗಡ ತಂಡಗಳÀ ನಡುವೆ ನಡೆದ ಪಂದ್ಯದಲ್ಲಿ ಗಾಂಡAಗಡ ತಂಡವು ಆಲೆಮಾಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು.
ಅಜ್ಜಮಾಡ ಮತ್ತು ಕೊಂಡೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜಮಾಡ ತಂಡವು ಕೊಂಡೀರ ತಂಡವನ್ನು ಟೈಬ್ರೇಕರ್ನಲ್ಲಿ ೬-೫ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಾಳಿಮಾಡ ಮತ್ತು ಉದ್ದಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಳಿಮಾಡ ತಂಡವು ೧-೦ ಗೋಲಿನಿಂದ ಉದ್ದಪಂಡ ತಂಡವನ್ನು ಸೋಲಿಸಿತು. ಮುಂಡಚಾಡಿರ ಮತ್ತು ಬೇರೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಂಡಚಾಡಿರ ತಂಡವು ೧-೦ ಗೋಲುಗಳಿಂದ ಬೇರೆರ ತಂಡವನ್ನು ಪರಾಭವಗೊಳಿಸಿತು. ಕೊಣಿಯಂಡ ಮತ್ತು ನಾಗಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಗಂಡ ತಂಡವು ಕೊಣಿಯಂಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ಕೈಬುಲಿರ ಮತ್ತು ಚೇರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇರಂಡ ತಂಡವು ಕೈಬುಲಿರ ತಂಡವನ್ನು ೩-೦ ಗೋಲಿನಿಂದ ಪರಾಭವಗೊಳಿಸಿತು.
- ಪಿ.ವಿ.ಪ್ರಭಾಕರ್