ಗೋಣಿಕೊಪ್ಪಲು, ಏ. ೮: ಪ್ರಕೃತಿಯ ನಡುವೆ ಸುತ್ತಲೂ ಭತ್ತದ ಗದ್ದೆಗಳು, ಎಲ್ಲಿ ನೋಡಿದರೂ ಹಸಿರು ಇದರ ಮಧ್ಯೆ ಇತಿಹಾಸ ಪ್ರಸಿದ್ಧ ವಾಗಿರುವ ಕುಂದೂರು ಭಗವತಿ ದೇವಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ನೂರಾರು ವರ್ಷಗಳ ಇತಿಹಾಸ ವಿರುವ ಕುಂದೂರು ಭಗವತಿ ದೇವಿಯ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಇತ್ತೀಚೆಗೆ ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಚೇಂದಿರ ಕುಟುಂಬಸ್ಥರ ಮುಂದಾಳತ್ವದಲ್ಲಿ ಜೀರ್ಣೋದ್ಧಾರದೊಂದಿಗೆ ನಡೆದಿದೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಬೇಗೂರು ಗ್ರಾಮದ ಹಚ್ಚಹಸಿರಿನ ಪ್ರಕೃತಿಯ ಮಡಿಲಿನ ಎತ್ತರದ ಪ್ರದೇಶದಲ್ಲಿ ಕುಂದೂರು ಶ್ರೀ ಭಗವತಿಯು ನೆಲೆ ನಿಂತಿದ್ದು ವಾರದ ಶುಕ್ರವಾರ ಹಾಗೂ ಮಂಗಳವಾರ ದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಂಬಿಕೆ ಗ್ರಾಮದ ಜನತೆಯಲ್ಲಿದೆ. ಶ್ರೀ ಕುಂದೂರು ಭಗವತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯು ಕಳೆದ ೮ ತಿಂಗಳ ಹಿಂದೆ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸುವ ಮೂಲಕ ನಾಡಿನ ಜನತೆಗೆ ದೇವಿಯ ಪೂಜೆಗೆ ಅವಕಾಶ ಕಲ್ಪಿಸಿದೆ. ಸ್ಥಳೀಯ ದಾನಿಗಳ, ಗ್ರಾಮಸ್ಥರ, ಊರಿನವರ ಹಾಗೂ ಚೇಂದಿರ ಕುಟುಂಬಸ್ಥರ ಸಹಕಾರದಿಂದ ಭಗವತಿ ದೇವಿಯು ನೆಲೆ ನಿಂತಿದ್ದು ದೇವಾಲಯ ಸೇರಿದಂತೆ ಆವರಣವನ್ನು ಅಭಿವೃದ್ಧಿ ಪಡಿಸಲಾಗಿದೆ. ದೇವಾಲಯದ ಇನ್ನುಳಿದ ಸ್ಥಳದಲ್ಲಿ ಹಲವು ಕಟ್ಟಡಗಳು, ಭೋಜನಾಲಯ, ಸಮಿತಿಯು ಕಳೆದ ೮ ತಿಂಗಳ ಹಿಂದೆ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸುವ ಮೂಲಕ ನಾಡಿನ ಜನತೆಗೆ ದೇವಿಯ ಪೂಜೆಗೆ ಅವಕಾಶ ಕಲ್ಪಿಸಿದೆ. ಸ್ಥಳೀಯ ದಾನಿಗಳ, ಗ್ರಾಮಸ್ಥರ, ಊರಿನವರ ಹಾಗೂ ಚೇಂದಿರ ಕುಟುಂಬಸ್ಥರ ಸಹಕಾರದಿಂದ ಭಗವತಿ ದೇವಿಯು ನೆಲೆ ನಿಂತಿದ್ದು ದೇವಾಲಯ ಸೇರಿದಂತೆ ಆವರಣವನ್ನು ಅಭಿವೃದ್ಧಿ ಪಡಿಸಲಾಗಿದೆ. ದೇವಾಲಯದ ಇನ್ನುಳಿದ ಸ್ಥಳದಲ್ಲಿ ಹಲವು ಕಟ್ಟಡಗಳು, ಭೋಜನಾಲಯ, ದೇವಾಲಯಕ್ಕೆ ಆಗಮಿಸುವ ಮಣ್ಣಿನ ರಸ್ತೆಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಮುಂದೆ ನಡೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಜೀರ್ಣೋದ್ಧಾರ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ.

ವಾರ್ಷಿಕ ಪೂಜೆ, ಹುತ್ತರಿ ಸೇರಿದಂತೆ ಹಲವು ವಿಶೇಷ ಸಂದರ್ಭಗಳಲ್ಲಿ ದೇವಾಲಯದ ಆವರಣದಲ್ಲಿ ವಿಶೇಷ ರೀತಿಯ ಪೂಜಾ ಕೈಂಕರ್ಯಗಳನ್ನು ನಡೆಸಲು ಆಡಳಿತ ಮಂಡಳಿ ಹಲವು ತೀರ್ಮಾನಗಳನ್ನು ಕೈಗೊಂಡಿದೆ. ದೇವಾಲಯದ ಅರ್ಚಕರಾಗಿ ಸುಂದರೇಶ್ ಭಟ್ ಸೇವೆ ಸಲ್ಲಿಸುತ್ತಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಚೇಂದಿರ ಜೀವನ್ ಸೇರಿದಂತೆ ಹಲವು ಪದಾಧಿಕಾರಿಗಳು ಸಮಿತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗ್ರಾಮದ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

- ಹೆಚ್.ಕೆ. ಜಗದೀಶ್