ಬೇವಿನ ಕಹಿ... ಬೆಲ್ಲದ ಸಿಹಿ...
ಶಾಲಿವಾಹನ ಶಕೆಯ ಆರಂಭದ ದಿನ ಯುಗಾದಿ. ಇದೀಗ ಶೋಭೆಯನ್ನು, ಕ್ಷೆÆÃಭೆಯನ್ನೂ ಸಮಾನಾಗಿ ಹಂಚಿ ಶೋಭಕೃತ್ ಸಂವತ್ಸರ ಮರೆಗೆ ಸರಿದಿದೆ. ಅಂತೆಯೇ ಬೇವು ಬೆಲ್ಲವೆಂಬ ಕ್ರೋಧ-ಮೋದಗಳ ಸಮ್ಮಿಶ್ರಣವನ್ನು ಹಂಚಲು 'ಕ್ರೋಧಿ' ಸಂವತ್ಸರವು ಅಡಿಯಿಟ್ಟಿದೆ.
ಈ ದಿಸೆಯಲ್ಲಿ ಅನೇಕ ಸಂವತ್ಸರಗಳನ್ನು ಲಂಘಿಸಿ ಬೇವು ಬೆಲ್ಲದ ಸವಿಯನ್ನು ಅನುಭವಿಸದವರು ವಿರಳ. ಪ್ರಕೃತಿಯ ಕೊಡುಗೆಯಾದ ಚಳಿ-ಸೆಖೆ, ಮಳೆ-ಗಾಳಿ, ಶೀತ-ಉಷ್ಣ, ಕತ್ತಲು-ಬೆಳಕನ್ನು ಜಗತ್ತಿಗೆ ಸಮನಾಗೆ ನೀಡಿದೆ. ಅಂತೆಯೇ ನಮ್ಮ ಜೀವನವೂ ಸುಖ ದುಃಖ, ನಗು-ಅಳು, ನೋವು-ನಲಿವು, ಸಿಹಿ-ಕಹಿಯನ್ನು ಅನವರತ ಅನುಭವಿಸುತ್ತದೆ.
ಇಂತಹ ಒಂದು ಸಂದರ್ಭ ನನ್ನ ವೃತ್ತಿ ಜೀವನದಲ್ಲೊಮ್ಮೆ ಘಟಿಸಿತು. ನಾನು ಸೇನೆಯಲ್ಲಿದ್ದುದರಿಂದ ಎಲ್ಲಾ ಹಬ್ಬ-ಹರಿದಿನಗಳು, ಸಭೆ ಸಂಭ್ರಮಗಳು ಸಹೋದ್ಯೋಗಿ ಒಡನಾಡಿಗಳೊಂದಿಗಷ್ಟೇ ಸೀಮಿತವಾಗಿರುತ್ತದೆ.
ಅದೊಂದು ಯುಗಾದಿಯ ಹೊಸ ವರ್ಷದ ಸಂಭ್ರಮದ ದಿನ. ವಿಪರ್ಯಾಸವೆಂದರೆ ಹಬ್ಬ ಹರಿದಿನಗಳ ಸಂದರ್ಭವನ್ನೇ ಕಾಯುತ್ತಿರುವ ಉಗ್ರವಾದಿಗಳು, ಭಯೋತ್ಪಾದಕರು, ಬಾಹ್ಯ ಶತ್ರುಗಳ ದಮನ ಶಮನದಲ್ಲಿ ಸದಾ ನಿಗಾಇಟ್ಟು ಕಾರ್ಯಪ್ರವೃತ್ತರಾಗಿರಬೇಕು. ಆ ದಿನ ನಮಗೆ ಹಗಲಿನ ವೇಳೆ ವಿಶ್ರಾಂತಿ ಇದ್ದ ಕಾರಣ ನನ್ನನ್ನೊಳಗೊಂಡು ನಾಲ್ವರಿಗೆ ರಾತ್ರಿ ಪಾಳಿಯ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದೆವು. ಸಂಜೆ ೬ ರಿಂದ ಬೆಳಿಗ್ಗೆ ೬ರ ತನಕ ಗಸ್ತಿನಲ್ಲಿರಬೇಕಾಗುತ್ತದೆ. ನಾವುಗಳು ಕರ್ತವ್ಯದ ಹಾದಿಯಲ್ಲಿ ಬಯಲು ದಾಟಿ ಹಳ್ಳ ಹಾರಿ ಏರು ಹಾದಿಯ ಕಾಡಂಚಿನಲ್ಲಿ ಅಂತರ ಕಾಯ್ದುಕೊಂಡು ಸಾಗುತ್ತಿದ್ದೆವು. ಆ ವೇಳೆಯ ಆ ಕ್ಷಣದಲ್ಲಿ ಮಿಂಚಿ ಮಾಯವಾಯಿತೊಂದು ಚಮತ್ಕಾರ! ನಮ್ಮೊಂದಿಗೆ ಸಾಗುತ್ತಿದ್ದ ನಾಯಕ್ ಪದ್ಮನಾಭನ್ ಹಠಾತ್ ಕುಸಿದು ಬಿದ್ದನು. ಎಲ್ಲಿಂದಲೋ ಹಾರಿ ಬಂದ ಕಾಡತೂಸು ಅವನೆದೆಯನ್ನು ತೂತು ಮಾಡಿ ತನ್ನ ಕೆಲಸ ಮುಗಿಸಿತ್ತು !
ಉಳಿದ ನಾವುಗಳು ಸಂಭಾಳಿಸಿಕೊAಡು ತಮ್ಮ ಇರುವಿಕೆಯನ್ನು ಬದಲಿಸಿ, ಬೇರೆಡೆ ಕರ್ತವ್ಯದಲ್ಲಿದ್ದ ನಮ್ಮ ಇನ್ನೊಂದು ತುಕಡಿಯನ್ನು ಸಾಂಕೇತಿಕ ಸಂವಹನದಲ್ಲಿ ತಮ್ಮೆಡೆಗೆ ಬರಮಾಡಿಕೊಂಡು ಹಂತಕರ ಕಾರ್ಯಾಚರಣೆ ಕೈಗೊಂಡವು. ಕೆಲವೇ ಕ್ಷಣಗಳಲ್ಲಿ ಹಂತಕರಿಗೆ- ಅಂತ್ಯಕರAತೆ ನಮ್ಮ ಕಾರ್ಯಾಚರಣೆ ಯಶ ಕಂಡಿತು. ಮೂವರಿದ್ದ ಹಂತಕರು ಅಂತ್ಯಕAಡರು.
ಅದಾಗಲೇ ಸಮಯ ಮೀರಿತ್ತು. ನಾವುಗಳು ಹೊತ್ತು ಸಾಗಿದ ‘ಪದ್ಮನಾಭನ' ದೇಹ ನೆಮ್ಮದಿಯ ನಿಟ್ಟುಸಿರೊಂದನ್ನು ಹೊರಹಾಕಿ ನಿಸ್ತೇಜವಾಯಿತು. ಬಾನಂಗಳದಲ್ಲಿ ಮಿನುಗುವ ನಕ್ಷತ್ರದೊಂದಿಗೆ ವಿಲೀನವಾಗಿ ತನ್ನ ಇರುವಿಕೆಯನ್ನು ಸಾಬೀತುಪಡಿಸುವಂತಿತ್ತು. ಆತನ ಆತ್ಮ.
ತಾತ್ಪರ್ಯ: ಒಂದೆಡೆ ದೇಶಕ್ಕಾಗಿ ಮಾಡುತ್ತಿರುವ ಸೇವೆವೇ ‘ತೃಪ್ತಿಯ ಸಿಹಿ'! ಇನ್ನೊಂದೆಡೆ ತಮ್ಮೊಂದಿಗಿದ್ದ ಸೈನಿಕರ ಅಗಲಿಕೆಯ ದುಃಖದ ಕಹಿ!! ಮುಂಜಾನೆ ಮೆದ್ದ ಬೇವು-ಬೆಲ್ಲ ಹೊಸ ವರುಷದ ಹರುಷ, ಕಾದಿರುಳಿನ ತಮದಲ್ಲಿ ಕಮರಿತು..
-ಕಣಜಾಲು ಪೂವಯ್ಯ, ಕೂಡ್ಲೂರು ಚೆಟ್ಟಳ್ಳಿ
ಮೊ.: ೮೭೬೨೩೪೬೭೫೦ ಕಹಿಯೊಂದಿಗೆ ಸಿಹಿಯನ್ನೂ ತಂದ ನೆನಪು
ಬೇವು-ಬೆಲ್ಲಗಳ ಪ್ರಸಾದ ಸ್ವೀಕರಣೆ ಮೂಲಕ ನೋವು-ನಲಿವುಗಳನ್ನು ಸಮನಾಗಿ ಕಾಣು ಎನ್ನುವ ಸಂದೇಶವನ್ನು ನೀಡುವ ಈ ಯುಗಾದಿ ಹಬ್ಬವು ಕೆಲವೊಮ್ಮೆ ನಮ್ಮ ನೋವುಗಳನ್ನು ಅನಿರೀಕ್ಷಿತವಾಗಿ ನಲಿವಿಗೆ ಬದಲಾಯಿಸಿಬಿಡುತ್ತದೆ.
ಐವತ್ತಮೂರು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ವಾಯುಪಡೆಯ ಪರೀಕ್ಷೆಗಳನ್ನೆಲ್ಲ ಎದುರಿಸಿ ಅನಂತರದ ದಿನಗಳಲ್ಲಿ ತರಬೇತಿಯ ಕರೆಗಾಗಿ ಚಾತಕಪಕ್ಷಿಯಂತೆ ಎದುರುನೋಡುತ್ತಿದ್ದೆ. ಅದೆಷ್ಟೇ ದಿನಗಳು ಕಳೆದರೂ ನನಗೆ ಕರೆಯೇ ಬರಲಿಲ್ಲ. ತುಂಬ ನಿರೀಕ್ಷೆ, ಅಪೇಕ್ಷೆಗಳನ್ನಿರಿಸಿಕೊಂಡಿದ್ದ ನನಗೆ ಅಂಚೆಯ ಮೂಲಕ ಬಂದ ಕರೆಯನ್ನು ಅದಾರದೋ ಕೈಗೆ ಅಂಚೆಯಣ್ಣ ಕೊಟ್ಟದ್ದು ಕೊನೆಗೂ ನನ್ನ ಕೈಗೆ ತಲುಪಿದಾಗ ನನ್ನ ಸಂತೋಷಕ್ಕೆ ಗಡಿಯಿರಲಿಲ್ಲ. ಆದರೆ, ಬೆಂಗಳೂರಿಗೆ ತರಬೇತಿಗೆ ಹೋಗಲು ಬಸ್ಚಾರ್ಜ್ ಕೂಡ ನಮ್ಮಲ್ಲಿ ಇರಲಿಲ್ಲ. ನಮ್ಮ ಬಂಧುಬಳಗಗಳಲ್ಲಿ ಈ ಬಗ್ಗೆ ತಿಳಿಸಿ ತುಸು ಕೈಗಡವನ್ನು ಅಪೇಕ್ಷಿಸಿದರೂ ಮತ್ಸರದಿಂದ ಅವರಾರೂ ತುಸುವೂ ಸಹಾಯಹಸ್ತವನ್ನು ನೀಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ನಾನು ಅಳುತ್ತ ರಸ್ತೆಯ ಬದಿಯಲ್ಲಿ ಹೊಗುತ್ತಿದ್ದಾಗ ನಮ್ಮೂರಿನ ಮೇದಪ್ಪ ಹೆಸರಿನ ವಯೋವೃದ್ಧರೊಬ್ಬರು ನನ್ನ ಅಳುವಿಗೆ ಕಾರಣವನ್ನು ವಿಚಾರಿಸಿ ನನಗೆ ಮುನ್ನೂರು ರೂಪಾಯಿಗಳ ನೆರವನ್ನು ನೀಡಿ ನಾನು ವಾಯುಪಡೆಗೆ ಸೇರಲು ಅನುವು ಮಾಡಿಕೊಟ್ಟರು. ಆಗ ಮತ್ತೆ ನನ್ನ ಅಳುವು ತೊಲಗಿ ನನ್ನ ಮುಖದಲ್ಲಿ ನಗೆಯ ಕಡಲಿನಲೆಗಳು ಹರಿಯತೊಡಗಿದುವು. ನಾನು ವಾಯುಪಡೆಗೆ ತರಬೇತಿಗೆ ಹೋಗಲೂ ಸಾಧ್ಯವಾಯಿತು. ಕಾಕತಾಳೀಯವಾಗಿ ಅಂದು ಯುಗಾದಿಯ ದಿನವಾಗಿದ್ದು ಕಹಿಯೊಂದಿಗೆ ಸಿಹಿಯನ್ನೂ ತರುವ ಹಬ್ಬವಿದೆಂದು ನಮಗೆ ಖಾತ್ರಿಯನ್ನು ಅದು ಮಾಡಿಕೊಟ್ಟಿತು..
-ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು
ಕಹಿಯೊಂದಿಗೆ ಸಿಹಿಯನ್ನೂ ತಂದ ನೆನಪು

ಬೇವು ಬೆಲ್ಲದ ಸಮ್ಮಿಳಿತ
ಯುಗಾದಿ ಹಬ್ಬ ಬಂತು ಎಂದರೆ ಎಲ್ಲಾರಿಗೂ ಸಂಭ್ರಮ ನವವರ್ಷದ ಆಗಮನವೇ ಯುಗಾದಿ ಹಬ್ಬ ಭೂತಕಾಲದಲ್ಲಿ ಆಗಿರುವ ನೋವನ್ನೆಲ್ಲಾ ಮರೆತು ಹೊಸ ಭರವಸೆ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿರುವ ಹಬ್ಬವೇ ಯುಗಾದಿ.
ಬದುಕು ಎಂದ ಮೇಲೆ ಸಿಹಿ ಕಹಿಗಳು ಸಾಮಾನ್ಯ. ಬೇವು ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಯುಗಾದಿ ಹಬ್ಬದಂದು ಬೇವು ಬೆಲ್ಲ ಏಕೆ ಸೇವನೆ ಮಾಡಬೇಕು? ಏಕೆಂದರೆ ನಮ್ಮ ಶರೀರದಲ್ಲಿರುವ ರೋಗ ರುಜಿನಗಳೆಲ್ಲಾ ಕರಗಿ ಹೋಗಲಿ ಮತ್ತು ಚಿಗುರಿನ ಹಾಗೇ ನಮ್ಮ ಜೀವನವು ಹಸನಾಗಲಿ. ಹಾಗೇ ಬೇವು ಬೆಲ್ಲ ಸೇವನೆಯಿಂದ ನಮ್ಮ ದೇಹವು ನೂರು ವರ್ಷಗಳ ಕಾಲ ವಜ್ರದೇಹಿಯಾಗಿರಲು ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಟ ನಿವಾರಣೆಗಾಗಿ ಇದರ ಸೇವನೆ ಅಗತ್ಯ.
ನಮ್ಮ ಜೀವನವು ಕೂಡ ಹಾಗೇ ಸುಖ ಬಂದರೆ ಹಿಗ್ಗದೆ ಕಷ್ಟ ಬಂದರೆ ಜಗ್ಗದೆ ಜೀವನವನ್ನು ಮುನ್ನಡೆಸುವುದೇ ಮನುಷ್ಯ ಜೀವನ.
ಹಬ್ಬದ ದಿನ ಮನೆಯವರೆಲ್ಲರೂ ಹೊಸ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ದೇವರ ಆರ್ಶೀವಾದವನ್ನು ಪಡೆಯುವುದು, ಬೇವು ಬೆಲ್ಲ ಸೇವಿಸುವುದು ಮತ್ತು ಹಿರಿಯರ ಆರ್ಶೀವಾದವನ್ನು ಪಡೆಯುವುದು ಈ ಹಬ್ಬದ ವಿಶೇಷ.
ಈ ಹಬ್ಬವು ಎಲ್ಲಾರ ಜೀವನದಲ್ಲಿ ನವೋಲ್ಲಾಸ, ನಮೋತ್ಸಾಹ ಆನಂದ ಹರ್ಷ ತುಂಬಲಿ, ಭೂತಕಾಲದಲ್ಲಿ ಆಗಿರುವ ಘಟನೆಯನ್ನು ಮರೆತು ವರ್ತಮಾನದ ಕುಷಿಯನ್ನು ಆನಂದಿಸುವ.
-ಮಮತ ದಿನೇಶ್, ಗೋಣಿಕೊಪ್ಪಲು
ಮೊ.: ೯೫೩೫೦೭೪೨೧೨ಜೀವನೇ ಬೇವು - ಬೆಲ್ಲ
ಯುಗಾದಿ ಎಂದರೆ ಹೊಸ ವರ್ಷದ ಅರಂಭ. ಹಿಂದೂ ಪಂಚಾAಗದ ಪ್ರಕಾರ ಯುಗಾದಿ ಹಬ್ಬ ಬಂದಾಗ ಹೊಸ ವರ್ಷ ಪ್ರಾರಂಭವಾಯಿತು ಎಂದರ್ಥ. ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಯವರೆಗೆ ಒಂದು ವರ್ಷ. ಎಲ್ಲಾ ಹಬ್ಬಗಳಿಗಿಂತ ಯುಗಾದಿ ಹಬ್ಬ ಹಿಂದೂಗಳಿಗೆ ತುಂಬಾ ಪವಿತ್ರ ಹಾಗೂ ಶ್ರೇಷ್ಠ.
ಯುಗಾದಿಯನ್ನು ಬೇವು-ಬೆಲ್ಲವನ್ನು ಸವಿದು ಅರಂಭಿಸಲಾಗುತ್ತದೆ. ಬೇವು, ಬೆಲ್ಲ ಯಾವ ರೀತಿ ಸಿಹಿ- ಕಹಿಯಿಂದ ಕೂಡಿರುತ್ತದೊ ಅದೇ ರೀತಿ ಮನುಷ್ಯನ ಜೀವನ ಕೂಡ ಸಿಹಿ-ಕಹಿಯ ಮಿಶ್ರಣ. ಜೀವನ ಪೂರ್ತಿ ಸಿಹಿಯೂ ಅಲ್ಲ, ಕಹಿಯೂ ಅಲ್ಲ. ಈ ಲೋಕದಲ್ಲಿ ಕಷ್ಟವಿಲ್ಲದ ಮನುಷ್ಯರೇ ಇಲ್ಲ. ಕೆಲವರು ಹೇಳಿಕೊಂಡು ಪರಿಹಾರ ಕಂಡು ಕೊಂಡರೆ ಇನ್ನೂ ಕೆಲವರು ಮನಸಿನಲೇ ಕೊರಗಿ ಮಾನಸಿಕರಾಗುತ್ತಾರೆ. ಕಷ್ಟ ಮನುಷ್ಯರಿಗಲ್ಲದೆ ಗಿಡ-ಮರಗಳಿಗೆ ಬರುವುದೇ ಎಂಬ ಮಾತಿನಂತೆ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಇವೆರಡನ್ನೂ ಸಮ ಪ್ರಮಾಣದಲ್ಲಿ ತಗೆದುಕೊಂಡು ಜೀವನ ಸಾಗಿಸಬೇಕು.
ಮನುಷ್ಯನ ಜೀವನ ಸಿಹಿಯೂ ಅಲ್ಲ ಕಹಿಯೂ ಅಲ್ಲ ಅದು ನಮ್ಮ ಕೈಯಲ್ಲಿದೆ. ಈ ಲೋಕದಲ್ಲಿ ಎಲ್ಲಾ ಕಷ್ಟಗಳಿಗೂ ಒಂದಲ್ಲ ಒಂದು ಪರಿಹಾರವಿದೆ. ಬದುಕಲು ಸಾವಿರ ದಾರಿಗಳಿವೆ. ಎಲ್ಲಾ ಕಷ್ಟಗಳಿಗೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ. ಇತ್ತಿಚೀನ ದಿನಗಳಲ್ಲಿ ಯುವ ಜನಾಂಗದ ಕೆಲವರು ಒಂದು ಸಣ್ಣ ಕಷ್ಟ ಬಂದರೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ತುಂಬಾ ವಿಷಾದನೀಯ.
ಹಿರಿಯರು ಹೇಳುವ ಗಾದೆ ಮಾತಿನಂತೆ ಬುದ್ಧಿ ಚೆನ್ನಾಗಿದ್ದರೆ ಎಲೆ ಮಾರಿಯಾದರೂ ಬದುಕಬಹುದು ಎಂಬ ಮಾತಿನಂತೆ ಬದುಕಲು ಸಾವಿರ ದಾರಿಗಳಿವೆ. ಒಟ್ಟಿನಲ್ಲಿ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸಿ ಮುನ್ನುಗ್ಗಬೇಕು. ಈ ರೀತಿಯ ಛಲ ಪ್ರತಿಯೊಬ್ಬರಿಗೂ ಇರಲೇಬೇಕು. ಬೇವು- ಬೆಲ್ಲವನ್ನು ಸವಿದು ಸಂತೋಷದಿAದ ಹೊಸ ವರ್ಷವನ್ನು ಬರಮಾಡಿಕೊಂಡು ಎಲ್ಲರೂ ಒಗ್ಗೂಡಿ ಒಗ್ಗಟಿನಿಂದ ಜೀವನವನ್ನು ಸಾಗಿಸೋಣ. ದೇವರು ನೀಡಿದ ಮನುಷ್ಯ ಜನ್ಮವನ್ನು ಈ ಭೂಮಿಯಲ್ಲಿ ಉತ್ತಮ ರೀತಿಯಲ್ಲಿ ಸಾಗಿಸುವ ಮೂಲಕ ಇನ್ನೊಬ್ಬರಿಗೂ ಮಾದರಿಯಾಗಿ ಬದುಕಿ ಬಾಳೋಣ.
ಎಲ್ಲಾರಿಗೂ ಯುಗಾದಿ ಹಬ್ಬದ ಶುಭಾಶಯ
-ಉಳುವಾರನ ರೋಶನ್ ವಸಂತ್, ಕಾಂತೂರು., ಮೊ. ೮೮೬೧೮೬೨೦೩೫
ಜೀವನೇ ಬೇವು - ಬೆಲ್ಲ

ಹರುಷದ ಯುಗಾದಿ
ಚೈತ್ರ ಮಾಸದ ಮೊದಲ ಹಬ್ಬವಾದ ಯುಗಾದಿಯನ್ನು ಹೊಸ ವರ್ಷವೆಂದೇ ಸಂಭ್ರಮಿಸುತ್ತಾರೆ. ಹೊಸ ಚಿಗುರಿನ ಹಸಿರೆಲೆಯ ಎಲ್ಲರಲ್ಲೂ ಹೊಸ ಹುರುಪು. ಹೊಸ ಚೈತನ್ಯವನ್ನು ತರುತ್ತದೆ. ಜೀವನದಲ್ಲಿ ಬರುವ ನೋವು-ನಲಿವನ್ನು ಬೇವು-ಬೆಲ್ಲದಂತೆ ಸಮನಾಗಿ ಸ್ವೀಕರಿಸುತ್ತಾ ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಜೀವನ ನಡೆಸಬೇಕೆಂದು ಸಾರುವ ಹಬ್ಬವೇ 'ಯುಗಾದಿ'.
ಸಾಮಾನ್ಯವಾಗಿ ಕಹಿಗಿಂತ ಸಿಹಿಯನ್ನೇ ಇಷ್ಟಪಡುವ ಹಾಗೆ ಜೀವನದಲ್ಲಿ ಎಲ್ಲರೂ ಸುಖವನ್ನೇ ಅನುಭವಿಸಲು ಇಚ್ಛಿಸುತ್ತಾರೆ. ದುಃಖ ಅಥವಾ ಕಷ್ಟವನ್ನು ಯಾರೂ ಬಯಸುವುದಿಲ್ಲ. ಸಿಹಿ ಇದ್ದಲ್ಲಿ ಇರುವೆಯು ಮುತ್ತುವ ಹಾಗೆ ಸುಖ ಹಾಗೂ ಸಂತೋಷದ ಸಮಯದಲ್ಲಿ ಎಲ್ಲರೂ ನಮ್ಮೊಂದಿಗಿರುತ್ತಾರೆ. ವಿಪರ್ಯಾಸವೆಂದರೆ ದುಃಖ ಅಥವಾ ಕಷ್ಟದ ಸಂದರ್ಭದಲ್ಲಿ ನಮ್ಮವರೂ ನಮ್ಮಿಂದ ದೂರ ಸರಿಯುತ್ತಾರೆ. 'ನನಗೆ ನಾನೇ' ಇದೇ ಸತ್ಯ. ನಾಲ್ಕು ವರ್ಷಗಳ ಹಿಂದೆ ಮರಣ ಮೃದಂಗವನ್ನು ಬಾರಿಸಿದ 'ಕೊರೊನಾ'ದಿಂದಾಗಿ ನನ್ನಂತೆ ಹಲವರು ತಮ್ಮ ಹೆತ್ತವರು, ಬಂಧುಗಳನ್ನು ಕಳೆದುಕೊಂಡರೂ ಕೊನೆಯ ಸಲ ಅವರನ್ನು ನೋಡಲಾಗದ ಸಂದಿಗ್ಧ ಪರಿಸ್ಥಿತಿ ಇದಕ್ಕಿಂತ ಹೆಚ್ಚಿನ ನೋವು ಬೇಕೆ?
ಈ ವರ್ಷದ ಯುಗಾದಿ ಸುಖದ ಸುರಿಮಳೆಯನ್ನು ಸುರಿಸದಿದ್ದರೂ, ಒಂದಷ್ಟು ಕುಷಿ, ಸಾಕಷ್ಟು ನೆಮ್ಮದಿ, ಹೆಚ್ಚಿನ ಆರೋಗ್ಯ, ಸಹಿಸುವಷ್ಟು ಕಷ್ಟ ಅಥವಾ ನೋವು ನೀಡಲೆಂದು ಅಶಿಸೋಣವೇ?
ರೇಣುಕಾ ಆರ್. ನಾಯ್ಕ, ವೀರಾಜಪೇಟೆ
ಮೊ. : ೯೪೮೦೪೬೩೬೨೩