ವೀರಾಜಪೇಟೆ, ಏ. ೮: ಇಲ್ಲಿನ ಸ್ಯಾಪಲಿಂಗ್ ಮಾಂಟಸರಿ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ಸೆರೆನಿಟಿ ಸಭಾಂಗಣದಲ್ಲಿ ನಡೆಯಿತು. ಅರಮೇರಿ ಶ್ರೀ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ವೀರಾಜಪೇಟೆಯ ಹಿರಿಯ ವೈದ್ಯ ದಂಪತಿಗಳಾದ ಡಾ. ಎಂ.ಸಿ. ಕಾರ್ಯಪ್ಪ ಹಾಗೂ ಡಾ. ಫಾತಿಮಾ ಕಾರ್ಯಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಾಂಟಸರಿ ಶಾಲೆ ನಡೆದು ಬಂದ ಬಗ್ಗೆ ನಿರ್ದೇಶಕಿ ರಶ್ಮಿ ಪೂವಯ್ಯ ವಿವರಿಸಿದರು. ಸಂಸ್ಥೆಯಲ್ಲಿ ಕಲಿತು ಉನ್ನತ ಹುದ್ದೆಗೆ ಸೇರ್ಪಡೆಗೊಂಡ ಆಲಿಯಾ ಚೋಂದಮ್ಮ, ನಿಷ್ಮಾ ನೀಲಮ್ಮ, ಸ್ವಯಮ್ ಬೋಪಯ್ಯ ಹಾಗೂ ಸಂಸ್ಥೆಯ ಸ್ಥಾಪಕ ವರ್ಷದ ಶಿಕ್ಷಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಮತ್ತೋರ್ವ ನಿರ್ದೇಶಕ ಕಂಡ್ರತAಡ ಪ್ರವೀಣ್ ಪೂವಯ್ಯ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ವನಜಾಕ್ಷಿ ಹಾಜರಿದ್ದರು.