- ಅನಿಲ್ ಎಚ್.ಟಿ.

ಹಿಂದೂಗಳ ಆರಾಧ್ಯ ದೈವ ಅಯೋಧ್ಯೆಯ ಬಾಲರಾಮನಿಗೆ ನಿದ್ದೆ ಮಾಡಲೂ ಸಮಯ ಕೊಡಿ. !

ಹೀಗೊಂದು ಬೇಡಿಕೆ ಅಯೋಧ್ಯೆಯ ಪ್ರಮುಖ ಸಾಧುಸಂತರಿAದ ಕೇಳಿಬರುತ್ತಿದೆ. ಇಂಥಹ ಬೇಡಿಕೆಗೆ ಕಾರಣವಾದ ಬೆಳವಣಿಗೆಯೊಂದು ಅಯೋಧ್ಯೆಯಲ್ಲಿ ಸಂಭವಿಸಿದೆ.

ಜನವರಿ ೨೨ ರಂದು ಪ್ರಾಣ ಪ್ರತಿಷ್ಠಾಪನೆಯಾದ ಬಾಲರಾಮನ ದರ್ಶನ ಪಡೆಯಲು ಅಂದಿನಿAದ ಪ್ರತಿ ನಿತ್ಯ ೧ ರಿಂದ ೨ ಲಕ್ಷ ಭಕ್ತರು ಅಯೋಧ್ಯೆಗೆ ಬರುತ್ತಿದ್ದಾರೆ. ಕಳೆದ ಎರಡೂವರೆ ತಿಂಗಳಿನಲ್ಲಿ ಅಂದಾಜು ೧ ಕೋಟಿ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ.

ಆದರೆ ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಬಾಲ ಶ್ರೀರಾಮನ ಪ್ರತಿಷ್ಠಾಪನೆಯಾದ ಬಳಿಕ ಇದೇ ೧೭ ರಂದು ಪ್ರಥಮ ಬಾರಿಗೆ ಬರಲಿರುವ ಶ್ರೀರಾಮನವಮಿ ಬಾಲರಾಮನ ಪಾಲಿಗೆ ಪ್ರಥಮ ಉತ್ಸವವಾಗಲಿದೆ. ಹೀಗಾಗಿಯೇ ಅಂದು ದೇಶವ್ಯಾಪಿ ಮಾತ್ರವಲ್ಲ ವಿಶ್ವವ್ಯಾಪಿಯ ಭಕ್ತರು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲಶ್ರೀರಾಮನನ್ನು ನೋಡಲು ಬರಲಿದ್ದಾರೆ.

ಅಂದಾಜಿನAತೆ ಏಪ್ರಿಲ್ ೧೬ ರಿಂದ ೧೮ ರವರೆಗೆ ಅಯೋಧ್ಯೆಗೆ ಬರಲಿರುವ ಭಕ್ತಸಾಗರ ಎಷ್ಟು ಗೊತ್ತೇ? ಅಂದಾಜು ೪೦ ಲಕ್ಷ ಭಕ್ತರು ಈ ಮೂರು ದಿನಗಳಲ್ಲಿ ಅಯೋಧ್ಯೆಗೆ ಬರುವ ಸಾಧ್ಯತೆಯಿದೆ.

ಇಷ್ಟೊಂದು ಲಕ್ಷ ಭಕ್ತರು ಬರುವ ಹಿನ್ನೆಲೆಯಲ್ಲಿ ರಾಮಮಂದಿರದಲ್ಲಿ ಬಾಲ ಶ್ರೀರಾಮನನ್ನು ದಿನದ ೨೪ ಗಂಟೆಯೂ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಪ್ರಸ್ತುತ ಬೆಳಗ್ಗೆ ೬ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ಮತ್ತು ಮಧ್ಯಾಹ್ನ ೨ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ಮಾತ್ರ ಬಾಲರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಸಮಯವನ್ನು ಬಾಲರಾಮನ ವಿಶ್ರಾಂತಿಗೆAದು ಮೀಸಲಿಡಲಾಗಿದೆ. ಈ ಹೊತ್ತಿನಲ್ಲಿ ರಾಮಮಂದಿರ ಮುಚ್ಚಿರುತ್ತದೆ.

ಆದರೆ, ಈ ರೀತಿ ಮೂರು ದಿನಗಳ ಕಾಲ ವಿರಾಮವಿಲ್ಲದೇ ರಾಮಮಂದಿರವನ್ನು ಭಕ್ತರ ದರ್ಶನಕ್ಕೆ ತೆರೆದಿಡುವ ಬಗ್ಗೆ ಅಯೋಧ್ಯೆಯಲ್ಲಿನ ಸಾಧುಸಂತರ ವಿರೋಧ ವ್ಯಕ್ತವಾಗುತ್ತಿದೆ.ಆದರೆ, ಈ ರೀತಿ ಮೂರು ದಿನಗಳ ಕಾಲ ವಿರಾಮವಿಲ್ಲದೇ ರಾಮಮಂದಿರವನ್ನು ಭಕ್ತರ ದರ್ಶನಕ್ಕೆ ತೆರೆದಿಡುವ ಬಗ್ಗೆ ಅಯೋಧ್ಯೆಯಲ್ಲಿನ ಸಾಧುಸಂತರ ವಿರೋಧ ವ್ಯಕ್ತವಾಗುತ್ತಿದೆ.

ಹೀಗೆ ಮಾಡಿದರೆ ಹೇಗೆ. ಬಾಲರಾಮನಿಗೆ ವಿಶ್ರಾಂತಿ ಬೇಡವೇ. ಭಕ್ತಸಾಗರ ದರ್ಶನ ಮಾಡಬೇಕೆಂದು ಬಾಲರಾಮನನ್ನು ಅವಿರತ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಖಂಡಿತಾ ಸರಿಯಲ್ಲ. ಅವನಿನ್ನೂ ೫ ವರ್ಷದ ಬಾಲರಾಮ. ಈ ಪುಟ್ಟ ರಘುರಾಮನಿಗೆ ವಿರಾಮ ನೀಡದೇ ನಿದ್ದೆಯನ್ನೂ ಮಾಡಲು ಬಿಡದೇ ಭಕ್ತರಿಗೆ ದರ್ಶನ ನೀಡೆಂದು ಮಂದಿರದ ಬಾಗಿಲು ತೆರೆಯವುದು ಸೂಕ್ತ ಅಲ್ಲವೇ ಅಲ್ಲ ಎಂಬುದು ಸಾಧುಗಳ ವಾದ.

ಆದರೆ ಅಯೋಧ್ಯೆ ಜಿಲ್ಲಾಡಳಿತ ಮಾತ್ರ ಬೇರೆಯದ್ದೇ ವಾದ ಮಂಡಿಸುತ್ತಿದೆ. ಮೂರು ದಿನಗಳ ಕಾಲ ೪೦ ಲಕ್ಷ ಭಕ್ತರು ಪುಟ್ಟ ಊರಾದ ಅಯೋಧ್ಯೆಗೆ ಬಂದರೆ ಇಷ್ಟೊಂದು ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಲಿದೆ. ದಿನಕ್ಕೆ ಕೇವಲ ೧೦-೧೧ ಗಂಟೆ ಮಾತ್ರ ದರ್ಶನಕ್ಕೆ ಅವಕಾಶ ನೀಡಿದರೆ ೩೦-೪೦ ಲಕ್ಷ ಭಕ್ತರು ಬಾಲರಾಮನ ದರ್ಶನ ಮಾಡಿ ಅಯೋಧ್ಯೆಯಿಂದ ಮರಳುವುದು ಯಾವಾಗ?

ಇಷ್ಟೂ ಭಕ್ತರು ಮೂರು ದಿನ ಎಲ್ಲಿರುತ್ತಾರೆ? ಅಯೋಧ್ಯೆಯ ಹೊರವಲಯದಲ್ಲಿಯೂ ಲಕ್ಷಾಂತರ ಜನರನ್ನು ಸೇರಿಸಲು ಕಷ್ಟಸಾಧ್ಯ. ಹೀಗಾಗಿ ಮೂರು ದಿನಗಳ ಕಾಲ ಅವಿರತ ದರ್ಶನಕ್ಕೆ ಅವಕಾಶ ನೀಡಿದ್ದೇ ಆದಲ್ಲಿ ಜನಸಾಗರ ಕರಗಿಹೋಗುತ್ತದೆ ಎಂಬುದು ಅಧಿಕಾರಿಗಳ ವಾದ.

ರಾಮನವಮಿಗೆ ಭಕ್ತರು ಈಗಾಗಲೇ ಅಯೋಧ್ಯೆಯ ಹೋಂಸ್ಟೇಗಳು, ವಸತಿ ಗೃಹಗಳನ್ನು ಕಾದಿರಿಸಿದ್ದು ಒಂದೇ ಒಂದು ಕೊಠಡಿಯೂ ಈ ಮೂರು ದಿನಗಳಲ್ಲಿ ದೊರಕದಾಗಿದೆ.

ಲಕ್ಷಾಂತರ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದೇ ಮುಖ್ಯವಲ್ಲ ಇದರ ಜತೆಗೆ ಜಗದಗಲ ಪೂಜಿಸಲ್ಪಡುವ ಬಾಲರಾಮನಿಗೆ ವಿಶ್ರಾಂತಿಯೂ ಅಗತ್ಯ ಎಂಬುದನ್ನು ಸಂಪ್ರದಾಯಬದ್ದವಾಗಿಯೂ ಗಮನಿಸಬೇಕೆಂಬುದು ಸಂತರ ಅಭಿಪ್ರಾಯ.

ಅಯೋಧ್ಯೆಯ ಬಾಲ ಶ್ರೀರಾಮನಿಗೆ ನಿದ್ರಿಸಲು ಮೂರು ದಿನಗಳಲ್ಲಿ ಕೊಂಚ ಸಮಯ ದೊರಕುವುದೇ? ಕಾದು ನೋಡೋಣ!