ಸೋಮವಾರಪೇಟೆ, ಏ. ೬: ಪಟ್ಟಣದಿಂದ ಕೇವಲ ೭ ಕಿ.ಮೀ. ದೂರದಲ್ಲಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಕಾಡಾನೆಗಳು ಪ್ರತಿದಿನ ರೋಡ್ ಶೋ ನಡೆಸುತ್ತಿವೆ.
ಅರಣ್ಯ ಬರಿದಾಗಿದ್ದು, ಆಹಾರ-ನೀರು ಅಲಭ್ಯವಾಗುತ್ತಿರುವ ಹಿನ್ನೆಲೆ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿವೆ. ಕಾಫಿ ತೋಟದಲ್ಲಿರುವ ಮರಗಳು, ಹಲಸಿನ ಹಣ್ಣು ಕಾಡಾನೆಗಳಿಗೆ ಆಹಾರವಾಗುತ್ತಿದ್ದು, ಕೆರೆಕಟ್ಟೆಗಳಿಂದ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿವೆ.
ಪ್ರತಿದಿನ ಸಂಜೆ ಹಾಗೂ ಬೆಳಗ್ಗಿನ ಜಾವ ರಾಜ್ಯ ಹೆದ್ದಾರಿ, ಕಾಜೂರು ಮುಖ್ಯರಸ್ತೆಯಲ್ಲಿ ಆನೆಗಳು ಸಂಚರಿಸುತ್ತಿವೆ. ಮರಿಯಾನೆ ಸಹಿತ ಒಟ್ಟು ೧೦ ಆನೆಗಳು ಈ ಭಾಗದಲ್ಲಿವೆ. ರಸ್ತೆಯಲ್ಲಿಯೇ ಪಯಣ ಆರಂಭಿಸಿರುವ ಹಿನ್ನೆಲೆ ಸ್ಥಳೀಯರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಪೈಕಿ ಒಂದು ಸಲಗ ಆಗಾಗ್ಗೆ ದ್ವಿಚಕ್ರ ವಾಹನಗಳ ಮೇಲೆ ಧಾಳಿ ನಡೆಸುತ್ತಿದೆ. ಈ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆAದು ಗ್ರಾಮಸ್ಥರು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೋವರ್ಕೊಲ್ಲಿ ಜಂಕ್ಷನ್ನಿAದ ಕಾಜೂರು ಜಂಕ್ಷನ್, ಕಾಜೂರು-ಯಡವಾರೆ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಂಚರಿಸುವವರು ಅತ್ಯಂತ ಎಚ್ಚರಿಕೆಯಿಂದ ತೆರಳಬೇಕಿದೆ.