ಐಗೂರು, ಏ. ೬: ಸಮೀಪದ ಐಗೂರು ಗ್ರಾ.ಪಂ.ನಲ್ಲಿ ರೂ. ೧೯ ಲಕ್ಷ ಹಣ ದುರುಪಯೋಗವಾಗಿದ್ದರೂ, ಆರೋಪಿಗಳ ವಿರುದ್ಧ ಇದುವರೆಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ, ಬೃಹತ್ ಮೊತ್ತದ ದುರುಪಯೋಗ ಪ್ರಕರಣದ ತನಿಖೆ ಹಳ್ಳ ಹಿಡಿಯು ತ್ತಿದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಮೂರು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಚಾರ್ಜ್ಶೀಟ್ ಆಗದ ಬಗ್ಗೆ ವಿಳಂಬ ನೀತಿಯನ್ನು ಪ್ರಶ್ನಿಸಿ, ಐಗೂರು ಗ್ರಾಮದ ನಿವಾಸಿಗಳಾದ ಎಂ.ಎನ್. ಅಶೋಕ್, ಹೊನ್ನಪ್ಪ, ಸಜ್ಜಳ್ಳಿ ಶ್ಯಾಮ್, ಸಿ.ಪಿ. ಲವಕುಮಾರ್, ವಿಜು ಯಡವಾರೆ ಮತ್ತು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿಯ ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ ಹಿನ್ನೆಲೆ, ತನಿಖಾಧಿಕಾರಿಗಳಾದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮತ್ತು ಸೋಮವಾರಪೇಟೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರವೀಂದ್ರ ಐಗೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿದಾರರ ಸಮ್ಮುಖ ಸಭೆ ನಡೆಸಿದ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.

ಐಗೂರು ಗ್ರಾಮ ಪಂಚಾಯಿ ತಿಯಲ್ಲಿ ೨೦೨೩ನೇ ಸಾಲಿನ ಆಡಿಟ್ ವರದಿಯಲ್ಲಿ ರೂ.೧೬ ಲಕ್ಷ ಹಣ ದುರುಪಯೋಗವಾಗಿದ್ದು, ಹಗರಣಕ್ಕೆ ಸಂಬAಧಪಟ್ಟAತೆ ತಾಲೂಕು ಪಂಚಾಯಿತಿಯ ಅನುಮೋದಿತ ಸಿಬ್ಬಂದಿ ಗುಮಾಸ್ತೆ ಸರಿತಾಳಿಗೆ ನೋಟೀಸ್ ಜಾರಿ ಮಾಡಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ದುರುಪಯೋಗದ ಹಣದ ಮೊತ್ತ ಈಗ ರೂ.೧೯ ಲಕ್ಷಕ್ಕೆ ತಲುಪಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ಹೊರ ಬಿದ್ದಿದೆ. ಸಭೆಯಲ್ಲಿ ಉಪಸ್ಥಿತರಿದ್ದ ಎಂ.ಎನ್. ಅಶೋಕ್ ಮಾತನಾಡಿ, ಎಫ್.ಐ.ಆರ್. ದಾಖಲಿಸಿ ಮೂರು ತಿಂಗಳು ಕಳೆದರೂ ಚಾರ್ಜ್ಶೀಟ್ ಏಕೆ ಆಗಿಲ್ಲ? ಎಂದು ಪ್ರಶ್ನಿಸಿದರು.

ಹಣ ದುರುಪಯೋಗದ ಬಗ್ಗೆ ಪಿ.ಡಿ.ಓ. ಬಾಲಕೃಷ್ಣ, ಗುಮಾಸ್ತೆ ಸರಿತಾಳ ಮೇಲೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾ ಧಿಕಾರಿಗೆ ಒಟ್ಟು ರೂ. ೧೯ ಲಕ್ಷ ಹಣ ದುರುಪಯೋಗವಾದ ಬಗ್ಗೆ ವರದಿ ಸಲ್ಲಿಸಿದ್ದೇವೆ ಎಂದು ತನಿಖಾಧಿ ಕಾರಿಗಳು ಉತ್ತರಿಸಿದರು. ಪಿ.ಡಿ.ಓ. ಬಾಲಕೃಷ್ಣ ಮಾತನಾಡಿ. ೨೦೨೧ ರಲ್ಲಿದ್ದ ಪಿಡಿಓ ಯಾದವ್ ಅವರ ಅಧಿಕಾರ ಅವಧಿಯಲ್ಲಿ ಹಣ ದುರುಪ ಯೋಗವಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಎಲ್. ಹೊನ್ನಪ್ಪ, ನೀವು ಅಧಿಕಾರ ವಹಿಸಿಕೊಂಡ ನಂತರ ಹಣ ದುರುಪ ಯೋಗದ ವರದಿಗಳು ಬಂದರೂ ಯಾದವ್ ರವರ ಮೇಲೆ ಏಕೆ ದೂರು ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪಿಡಿಒ ಬಾಲಕೃಷ್ಣರವರಿಂದ ಸಮರ್ಪಕವಾದ ಉತ್ತರ ದೊರೆಯ ಲಿಲ್ಲ. ಸಭೆಯಲ್ಲಿದ್ದ ಕೆ.ಪಿ. ಮುತ್ತಪ್ಪ ಮಾತನಾಡಿ, ಗುತ್ತಿಗೆದಾರರ ಖಾತೆಗೆ ೩-೪ ಬಾರಿ ಹೆಚ್ಚಿಗೆ ಹಣ ಜಮಾ ಆಗಿದ್ದು, ಗುತ್ತಿಗೆದಾರರು ಈ ಹಣವನ್ನು ಸರಕಾರಿ ಖಾತೆಗೆ ಹಾಕದೆ ಸರಿತಾಳ ವೈಯಕ್ತಿಕ ಖಾತೆಗೆ ಹಣ ಜಮಾವಣೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಗುಮಾಸ್ತೆ ಸರಿತಾಳ ಬ್ಯಾಂಕ್ ವೈಯಕ್ತಿಕ ಖಾತೆಗೆ ಹಣ ಜಮಾವಣೆ ಆಗಿರು ÀÅದು ಸಾಬೀತಾಗಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಾಗಿದೆ ಎಂದರು. ಪಿ.ಡಿ.ಓ. ಬಾಲಕೃಷ್ಣ ಮಾತನಾಡಿ, ಸರಿತಾ ಅವರು ಹಗರಣ ನಡೆದ ನಂತರ ಪಂಚಾಯಿತಿ ಖಾತೆಗೆ ೫೬ ಸಾವಿರ ರೂ. ಹಣ ಜಮಾ ಮಾಡಿ ದ್ದಾರೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ತನಿಖಾಧಿಕಾರಿಗಳು ೧೯೯೩ರ ಪಂಚಾಯಿತಿ ಕಾಯಿದೆ ಪ್ರಕಾರ ಪಂಚಾಯಿತಿಯ ಹಣ ದುರುಪಯೋಗಕ್ಕೆ ಪಿಡಿಓ ಹೊಣೆಗಾ ರರಾಗುತ್ತಾರೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತನಿಖಾಧಿಕಾರಿ ಶ್ರೀನಿವಾಸ್, ತಾ.ಪಂ. ವ್ಯವಸ್ಥಾಪಕ ರಾದ ರವೀಂದ್ರ ಗ್ರಾ.ಪಂ. ಮಾಜಿ ಸದಸ್ಯ ದಿನೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. -ಸುಕುಮಾರ