ಕುಶಾಲನಗರ, ಏ. ೫: ಕುಶಾಲನಗರ ಪಟ್ಟಣ ಸೇರಿದಂತೆ ಮೂರು ಗ್ರಾಮಗಳಿಗೆ ನಿರಂತರ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕಳೆದ ೨೦ ವರ್ಷಗಳ ಹಿಂದೆ ಆರಂಭಗೊAಡ ಮಹತ್ವದ ಯೋಜನೆಯೊಂದು ಇನ್ನೂ ಕಾರ್ಯಾರಂಭಗೊಳ್ಳದೆ ಕಾಮಗಾರಿ ಕಾಡುಪಾಲಾಗಿರುವ ದೃಶ್ಯ ಕುಶಾಲನಗರದಲ್ಲಿ ಕಾಣಬಹುದು. ಸರಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯಕ್ಕೆ ಇದೊಂದು ಕೈಗನ್ನಡಿ ಎಂದರೆ ತಪ್ಪಾಗಲಾರದು.
ಕುಶಾಲನಗರ ಪಟ್ಟಣ, ಗುಮ್ಮನಕೊಲ್ಲಿ, ಮುಳ್ಳುಸೋಗೆ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಸರಬರಾಜು ನಿರ್ವಹಿಸಲು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಸರಕಾರಿ ಸಂಸ್ಥೆಯೊAದು ರೂ. ೪೦ ಲಕ್ಷ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು.
ಮAಡಳಿ ಈ ಸಂಬAಧ ಸೆಸ್ಕಾಂಗೆ ಮಾಸಿಕವಾಗಿ ರೂ.೩ ಲಕ್ಷಕ್ಕೂ ಅಧಿಕ ಬಿಲ್ ಪಾವತಿಸುವ ಬದಲು ಪರ್ಯಾಯವಾಗಿ ನೀರು ಸರಬರಾಜಿಗೆ ಸುಮಾರು ರೂ. ೪೦ ಲಕ್ಷ ವೆಚ್ಚದಲ್ಲಿ ಜೈವಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇದಾಗಿತ್ತು.
ವಿದ್ಯುತ್ ಕಡಿತ, ವೋಲ್ಟೇಜ್ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಈ ವ್ಯವಸ್ಥೆಯ ನಿರೀಕ್ಷೆಯಾಗಿತ್ತು. ಕಾವೇರಿ ನದಿಯಿಂದ ನೀರೆತ್ತಲು ಪಂಪ್ ಹೌಸ್ನಲ್ಲಿ ಅಳವಡಿಸಿರುವ ೬೦ ಹೆಚ್.ಪಿ. ಸಾಮರ್ಥ್ಯದ ಎರಡು ಪಂಪ್ಗಳಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಈ ಯೋಜನೆ ಅನುಕೂಲವಾಗುತ್ತಿತ್ತು.
ಮಂಡಳಿಯು ‘ಬಯೋಟೆಕ್ನಾಲಜಿ’ ಮೂಲಕ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ರೂಪಿಸಿರುವ ಈ ಯೋಜನೆ ರಾಜ್ಯದ ಕೋಲಾರ ಮತ್ತು ಕುಶಾಲನಗರದಲ್ಲಿ ಮಾತ್ರ ಅಳವಡಿಸಲಾಗಿತ್ತು.
ಕೃಷಿ ತ್ಯಾಜ್ಯಗಳು, ಮುಸುಕಿನ ಜೋಳ, ಮರದ ಎಲೆ, ಪುಡಿ ಇತ್ಯಾದಿ ತ್ಯಾಜ್ಯಗಳನ್ನು ಬಳಸಿ ಜೈವಿಕ ತಂತ್ರಜ್ಞಾನದ ಮೂಲಕ ಇಂಧನ ತಯಾರಿಸುವ ಯೋಜನೆಗೆ ಬೆಂಗಳೂರಿನ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸೈನ್ಸ್ ಮತ್ತಿತರ ಸಂಸ್ಥೆಗಳ ತಂತ್ರಜ್ಞರು ಕೂಡ ಆ ದಿನಗಳಲ್ಲಿ ಬಂದು ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಸಲಹೆ ನೀಡಿದ್ದರು. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ತಂತ್ರಜ್ಞಾನದಿAದ ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದೆ ಸುಮಾರು ೧೦೦ ಕಿಲೋ ವ್ಯಾಟ್ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಅವಕಾಶ ಲಭ್ಯವಿತ್ತು. ಈ ಮೂಲಕ ಕಾವೇರಿ ನದಿಯಿಂದ ನೀರು ಎತ್ತುವ ಪಂಪ್ ಹೌಸಿನಲ್ಲಿರುವ ಎರಡು ಮೋಟಾರ್ ಪಂಪ್ಗಳು ಕೂಡ ಚಾಲನೆ ಆಗುವ ಮೂಲಕ ಯಾವುದೇ ಇಂಧನಗಳಿಗೆ ಪರ್ಯಾಯವಾಗಿ ಈ ಜೈವಿಕ ತಂತ್ರಜ್ಞಾನ ಬಳಕೆ ಆಗಬೇಕಾಗಿತ್ತು.
ಅಂದಾಜು ರೂ. ೪೦ ಲಕ್ಷ ವೆಚ್ಚದ ಈ ಯೋಜನೆಯಲ್ಲಿ ಕುಶಾಲನಗರ ನೀರು ಸರಬರಾಜು ಮಂಡಳಿಯ ಕಚೇರಿ ಆವರಣದಲ್ಲಿ ಕಟ್ಟಡ ನಿರ್ಮಾಣ, ಸಂಬAಧಿಸಿದ ಯಂತ್ರೋಪಕರಣಗಳನ್ನು ಕೂಡ ೨೦೦೪ ರಲ್ಲಿ ಅಳವಡಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಒಂದು ಕೆ. ವಿ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಕೇವಲ ೨.೫೦ ರೂ ವೆಚ್ಚ ತಗಲುತ್ತದೆ.
ಹಲವು ಬೆಲೆಬಾಳುವ ಯಂತ್ರೋಪಕರಣಗಳನ್ನು ಅಳವಡಿಸಲಾಗಿತ್ತು. ಬಹುತೇಕ ಮೋಟಾರ್ ಪಂಪುಗಳು ಇದೀಗ ಕಳ್ಳರ ಪಾಲಾಗಿದ್ದು ಇಡೀ ಕಟ್ಟಡ ಕಾಡು ತುಂಬಿರುವ ದೃಶ್ಯ ಕುಶಾಲನಗರ ಒಳಚರಂಡಿ ಮಂಡಳಿ ಆವರಣದಲ್ಲಿ ಗೋಚರಿಸುತ್ತಿದೆ.
ಈ ಯೋಜನೆ ಆರಂಭಗೊAಡಿದ್ದಲ್ಲಿ ಜೈವಿಕ ತಂತ್ರಜ್ಞಾನದ ಮೂಲಕ ದಿನದ ೨೪ ಗಂಟೆಗಳು ವಿದ್ಯುತ್ ಪಡೆಯುವ ಅವಕಾಶ ಇದ್ದರೂ ಸಂಬAಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಯೋಜನೆ ಮಾತ್ರ ಕಾಡುಪಾಲಾಗಿದೆ.
ಯೋಜನೆ ಕಾರ್ಯಗತವಾಗಿದ್ದಲ್ಲಿ ಮಂಡಳಿ ಮೂಲಕ ಸೆಸ್ಕಾಂಗೆ ಪ್ರತಿ ತಿಂಗಳು ಕಟ್ಟಲಾಗುತ್ತಿರುವ ಲಕ್ಷಾಂತರ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ಉಳಿಕೆಯಾಗುತ್ತಿತ್ತು. ಸರಕಾರಕ್ಕೆ ಇದುವರೆಗೆ ಕೋಟಿಗಟ್ಟಲೆ ರೂಪಾಯಿಗಳ ಆದಾಯ ಉಳಿತಾಯವಾಗುತ್ತಿತ್ತು.
ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ೨೦೦೪ ರ ಡಿಸೆಂಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಬೇಕಾಗಿದ್ದ ಮಹತ್ವದ ಯೋಜನೆಯೊಂದು ೨೦೨೪ ಜನವರಿ ಬಂದರೂ ಇನ್ನೂ ಆರಂಭಗೊಳ್ಳದೆ ಇರುವುದು ನಿಜಕ್ಕೂ ವಿಷಾದದ ಸಂಗತಿ ಅಲ್ಲದೆ ಇನ್ನೇನು..!! -ಚಂದ್ರಮೋಹನ್ ಎಂ.ಎನ್.