ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಏ. ೫: ಜಾಗತಿಕ ಮಟ್ಟದಲ್ಲಿ ರೋಬಸ್ಟಾ ಕಾಫಿ ಬೆಲೆ ಈ ಬಾರಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಸಮಯದಲ್ಲಿಯೇ ಮಾರ್ಚ್ ೨೦೨೪ ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು ಮೌಲ್ಯವೂ ಹೊಸ ಎತ್ತರವನ್ನು ಮುಟ್ಟಿದೆ.

ಅಲ್ಪ ಪ್ರಮಾಣದ ಕುಸಿತದ ಹೊರತಾಗಿಯೂ, ರಫ್ತು ಪ್ರಮಾಣ ಹೊಸ ದಾಖಲೆ ಬರೆದಿದೆ. ವಾಸ್ತವವಾಗಿ, ೨೦೨೩-೨೪ ರ ಆರ್ಥಿಕ ವರ್ಷವು ಸೇರಿದಂತೆ ಸತತ ಮೂರು ವರ್ಷಗಳಿಂದ ಭಾರತೀಯ ಕಾಫಿ ರಫ್ತು ಏರಿಕೆಯನ್ನೇ ದಾಖಲಿಸುತ್ತಾ ಬಂದಿದೆ. ಡಾಲರ್ ಲೆಕ್ಕದಲ್ಲಿ, ಭಾರತೀಯ ಕಾಫಿ ರಫ್ತು ೨೦೨೨-೨೩ ಹಣಕಾಸು ವರ್ಷದಲ್ಲಿ $೧.೧೨ ಶತಕೋಟಿಗಿಂತ $೧.೨೬ ಶತಕೋಟಿಗೆ ಏರಿಕೆ ದಾಖಲಿಸಿ ೧೨.೫ ಶೇಕಡಾವಾರು ಹೆಚ್ಚಳವನ್ನು ದಾಖಲಿಸಿದೆ. ಅದೇ ರೀತಿ ರೂಪಾಯಿ ಲೆಕ್ಕದಲ್ಲಿ ರಫ್ತು ಶೇ.೧೬ರಷ್ಟು ಏರಿಕೆಯಾಗಿದ್ದು ರೂ. ೯,೦೩೩ ಕೋಟಿ ರೂಪಾಯಿಗಳಿಂದ ರೂ. ೧೦,೪೯೧ ಕೋಟಿಗೆ ತಲುಪಿದೆ. ಕಾಫಿಯ ಮೌಲ್ಯ ಜಾಸ್ತಿ ಇದ್ದರೂ ರಫ್ತು ಪ್ರಮಾಣ ೨೦೨೨-೨೩ ರಲ್ಲಿ ೩.೯೮ ಲಕ್ಷ ಟನ್ ಗಳಾಗಿತ್ತು ಆದರೆ ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ ೨.೫ ರಷ್ಟು ಕುಸಿತ ದಾಖಲಿಸಿ ೩.೮೮ ಲಕ್ಷ ಟನ್‌ಗಳಿಗೆ ಇಳಿಕೆ ಕಂಡಿವೆ.

ರೋಬಸ್ಟಾ ಬೆಲೆ ವಿಯೆಟ್ನಾಂ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಉತ್ಪಾದಕ ರಾಷ್ಟçಗಳಲ್ಲಿ ಪೂರೈಕೆ ಸಮಸ್ಯೆಗಳ ಕಾರಣದಿಂದಾಗಿ ಮೂರು ದಶಕಗಳಲ್ಲಿ ಗರಿಷ್ಠ ಮಟ್ಟದಲ್ಲಿವೆ. ಇದು ಭಾರತೀಯ ಕಾಫಿಯ ದರ ಏರಿಕೆಗೆ ಮೂಲ ಕಾರಣವಾಗಿದೆ. ಹೆಚ್ಚಿನ ರೋಬಸ್ಟಾ ಬೆಲೆಗಳ ಪರಿಣಾಮವಾಗಿ, ಭಾರತೀಯ ರಫ್ತುದಾರರಿಗೆ ಪ್ರತಿ ಯೂನಿಟ್ ದರವು ಹಿಂದಿನ ಹಣಕಾಸು ವರ್ಷದಲ್ಲಿ ರೂ. ೨.೨೬ ಲಕ್ಷಕ್ಕೆ ಹೋಲಿಸಿದರೆ ೨೦೨೩-೨೪ರ ಅವಧಿಯಲ್ಲಿ ಪ್ರತಿ ಟನ್‌ಗೆ ರೂ. ೨.೭ ಲಕ್ಷಕ್ಕೆ ಹೆಚ್ಚಾಗಿದ್ದು ಐದನೇ ಒಂದು ಭಾಗದಷ್ಟು ಏರಿಕೆ ದಾಖಲಿಸಿದೆ.

ಭಾರತೀಯ ಕಾಫಿಗೆ ಉತ್ತಮ ಮಾರುಕಟ್ಟೆ ಬೆಲೆಗಳು, ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿನ ಪೂರೈಕೆ ಅಡ್ಡಿಗಳಂತಹ ಅಂಶಗಳ ಸಂಯೋಜನೆಯು ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಕಾಫಿ ಮಂಡಳಿಯ ಕಾರ್ಯದರ್ಶಿ ಮತ್ತು ಸಿಇಒ ಕೆ ಜಿ ಜಗದೀಶ ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ನಮ್ಮ ರಫ್ತು ಪ್ರಮಾಣವು ಮುಖ್ಯವಾಗಿ ಇನ್ಸ್ಟಂಟ್ ಕಾಫಿಯಿಂದ ಹೆಚ್ಚಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಉತ್ಪಾದನೆಯಾಗುವ ಸುಮಾರು ೩.೫ ಲಕ್ಷ ಟನ್‌ಗಳಷ್ಟು ಕಾಫಿಯ ಮೂರನೇ ಎರಡರಷ್ಟು ಭಾಗವನ್ನು ಭಾರತ ರಫ್ತು ಮಾಡುತ್ತದೆ. ಅಲ್ಲದೆ ಭಾರತದ ಕಾಫಿ ವರ್ತಕರು ವಿದೇಶಗಳಿಂದ ಅಗ್ಗದ ಬೆಲೆಯ ರೋಬಸ್ಟಾ ಕಾಫಿಯನ್ನು ಆಮದು ಮಾಡಿಕೊಂಡು ಅದನ್ನು ಸಂಸ್ಕರಿಸಿ ಮೌಲ್ಯವರ್ಧನೆಯ ನಂತರ ಮರು-ರಫ್ತು ಮಾಡುತ್ತಿದ್ದಾರೆ. ಇದರಿಂದಾಗಿಯೇ ದೇಶದ ಕಾಫಿ ಉತ್ಪಾದನೆ ಕಡಿಮೆ ಇದ್ದರೂ ರಫ್ತು ೪ ಲಕ್ಷ ಟನ್‌ಗಳ ಸಮೀಪದಲ್ಲಿದೆ.

ಈ ಕುರಿತು ಮಾತನಾಡಿದ ದೇಶದ ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ್ ರಾಜಾ ಅವರು , ೨೦೨೩-೨೪ರ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯದಲ್ಲಿ ಹೆಚ್ಚಳವು ರೋಬಸ್ಟಾ ಕಾಫಿಯ ದರ ಏರಿಕೆಯಿಂದ ಆಗಿದೆ. ಬೇಡಿಕೆ ಉತ್ತಮವಾಗಿದೆ ಮತ್ತು ಹಣಕಾಸು ವರ್ಷದ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ರಫ್ತು ಹಿಂದಿನ ತ್ರೈಮಾಸಿಕಗಳಿಗಿಂತ ಉತ್ತಮವಾಗಿವೆ ಎಂದರು. ಇತ್ತೀಚಿನ ವಾರಗಳಲ್ಲಿ ಭಾರತದಲ್ಲಿ ರೋಬಸ್ಟಾ ಕಾಫಿ ಬೆಲೆ ಅರೇಬಿಕಾವನ್ನು ಹಿಂದಿಕ್ಕಿವೆ. ಈಗ ರೋಬಸ್ಟಾ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬೆಲೆ ೫೦ ಕೆಜಿ ಚೀಲಕ್ಕೆ ಸುಮಾರು ೯ ಸಾವಿರದ ಆಸುಪಾಸಿನಲ್ಲಿದೆ. ರೋಬಸ್ಟಾ ಚರ‍್ರಿ ದರ ರೂ. ೯೨೦೦ -೯೫೦೦ ರಷ್ಟಿದೆ. ಅರೇಬಿಕಾ ಚರ‍್ರಿ ಕಾಫಿ ಪ್ರತಿ ಚೀಲಕ್ಕೆ ರೂ. ೮,೬೦೦-೮,೮೦೦ ರಷ್ಟಿದ್ದರೆ, ಅರೇಬಿಕಾ ಪಾರ್ಚ್ಮೆಂಟ್ ರೂ. ೧೪೪೦೦-೧೪,೬೦೦ ರಷ್ಟಿದೆ.

ದರ ಹೆಚ್ಚಳದ ಕಾರಣದಿಂದಾಗಿ ಭಾರತೀಯ ರೋಬಸ್ಟಾ ಪಾರ್ಚ್ಮೆಂಟ್ ಕಾಫಿ ಎಬಿ ಲಂಡನ್ ಮಾರುಕಟ್ಟೆಯಲ್ಲಿ ಒಂದು ಟನ್‌ಗೆ $೭೦೦-೭೫೦ ಪ್ರೀಮಿಯಂ ಬೆಲೆಗೆ ಮಾರಾಟವಾಗುತ್ತಿವೆ. ರೋಬಸ್ಟಾ ರ‍್ರಿ ಪ್ರೀಮಿಯಂಗಳು ಪ್ರತಿ ಟನ್‌ಗೆ ಸುಮಾರು $೩೫೦-೪೦೦ ರಷ್ಟಿದೆ. ಕಳೆದ ಅಕ್ಟೋಬರ್‌ನಿಂದ ಪ್ರಾರಂಭವಾಗುವ ೨೦೨೩-೨೪ ರ ಬೆಳೆ ವರ್ಷಕ್ಕೆ, ಕಾಫಿ ಮಂಡಳಿಯು ೩.೭೪ ಲಕ್ಷ ಟನ್‌ಗಳಷ್ಟು ಉತ್ಪಾದನೆಯನ್ನು ಅಂದಾಜಿಸಿದೆ. ಮಾರುಕಟ್ಟೆಯ ಮೂಲಗಳ ಪ್ರಕಾರ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಕಾಫಿ ದರ ಇಳಿಕೆ ಆಗುವ ಸೂಚನೆಗಳಿಲ್ಲ ಮತ್ತಷ್ಟು ಏರಿಕೆಗೆ ಅವಕಾಶವಿದೆ ಎಂದು ತಜ್ಞರು ಹೇಳುತ್ತಾರೆ.