ಮಡಿಕೇರಿ, ಏ. ೬: ಸೇವಾ ನ್ಯೂನತೆಗೆ ಸಂಬAಧಿಸಿದAತೆ ಬ್ಯಾಂಕ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ತಾ. ೨೬.೭.೨೦೨೩ ರಂದು ಬಾಡಗ ಬಾಣಂಗಾಲ ಗ್ರಾಮದ ಕೆ.ಬಿ. ಹೇಮಚಂದ್ರ ಎಂಬವರು ಸಿದ್ದಾಪುರದ ಜಿಎಪಿಎಸಿಎಸ್ ಬ್ಯಾಂಕ್‌ಗೆ ರೂ. ೭೦ ಸಾವಿರದ ಬ್ಯಾಂಕ್ ಆಫ್ ಬರೋಡಾದ ಚೆಕ್ ನೀಡಿದ್ದಾರೆ. ಖಾತೆಯಲ್ಲಿ ರೂ. ೯೯,೬೦೫ ಹಣವಿದ್ದರೂ ಬ್ಯಾಂಕ್ ಆಫ್ ಬರೋಡದ ಸಿದ್ದಾಪುರ ಶಾಖೆ ಸಿಬ್ಬಂದಿಗಳು ಖಾತೆಯಲ್ಲಿ ಹಣವಿಲ್ಲವೆಂದು ಹಿಂಬರಹ ನೀಡಿ ಹಿಂದಿರುಗಿಸಿದ್ದಾರೆ.

ನAತರ ಖಾತೆಯಲ್ಲಿ ಹಣವಿರುವುದು ತಿಳಿದು ಹೇಮಚಂದ್ರ ಖಾತೆಗೆ ರೂ. ೩೧ ಸಾವಿರ ಪರಿಹಾರವಾಗಿ ನೀಡಿದ್ದು, ಇದನ್ನು ಹೇಮಚಂದ್ರ ಹಿಂದಿರುಗಿಸಿ ಬ್ಯಾಂಕ್‌ನಿAದ ಸೇವಾ ನ್ಯೂನತೆ ಹಾಗೂ ಮಾನಸಿಕ ವೇದನೆಯಾಗಿದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.

ಅರ್ಜಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಸಿ. ರೇಣುಕಾಂಭ ಹಾಗೂ ಸದಸ್ಯರಾದ ಗೌರಮಣಿ ಅವರು ಸೇವಾ ನ್ಯೂನತೆ ಉಂಟಾಗಿರುವುದನ್ನು ಗಮನಿಸಿ ದಂಡನಾರ್ಹ ಪರಿಹಾರವಾಗಿ ರೂ. ೨ ಲಕ್ಷಗಳನ್ನು ಶೇ. ೬ ಬಡ್ಡಿಯನ್ನು ಸೇರಿಸಲು ಭಾದ್ಯವಾಗಿರುತ್ತಾರೆ ಎಂದು ಆದೇಶಿಸಿದ್ದಾರೆ.