ಮಡಿಕೇರಿ, ಏ. ೪: ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಕೊಡಗು ಜಿಲ್ಲೆ ಪ್ರಸ್ತುತ ಬಿಸಿಲಿನ ತಾಪಕ್ಕೆ ಸಿಲುಕಿ ಬಳಲುತ್ತಿದೆ. ಹೆಚ್ಚಿನ ಬಿಸಿಲಿನಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಮಳೆ ಇಲ್ಲದೆ ಜಿಲ್ಲೆಯ ಜನತೆಯ ಜೀವನಾಧಾರ ಪ್ರಮುಖ ಬೆಳೆಗಳಾದ ಕಾಫಿ ಹಾಗೂ ಕರಿಮೆಣಸು ಬೆಳೆಗಳು ಒಣಗಿ ಬರಡಾಗುತ್ತಿರುವ ದುಸ್ಥಿತಿ ಎದುರಾಗಿದೆ. ಜೊತೆಗೆ ಅಡಿಕೆ ಮತ್ತಿತರ ಬೆಳೆಗಳಿಗೂ ಕೂಡ ಹಾನಿಯಾಗುತ್ತಿದೆ. ಬಿಸಿಲಿನ ಹೊಡೆತಕ್ಕೆ ಸಿಲುಕಿ ನೆಲ ಕಚ್ಚುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ರೈತಾಪಿ ವರ್ಗ ವರುಣನ ಕೃಪೆಗಾಗಿ ಕಾಯುತ್ತಿದೆ. ಜಿಲ್ಲೆಯ ಕಾಫಿ ಬೆಳೆಗಾರರು ಹಾಹಾಕಾರದಿಂದ ನಿತ್ಯವೂ ಮಳೆಗಾಗಿ ಆಗಸ ನೋಡುತ್ತ ಕಳವಳ ಪಡುತ್ತಿರುವ ಚಿತ್ರಣ ಕಂಡು ಬಂದಿದೆ. ಸಿದ್ದಾಪುರ: ಬಿಸಿಲಿನ ತಾಪಕ್ಕೆ ಸಿದ್ದಾಪುರ ಸುತ್ತಮುತ್ತಲಿನ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಫಿ ಗಿಡಗಳು ಮಳೆಗಾಗಿ ಕಾಯುತ್ತಿವೆ. ಕಳೆದ ಕೆಲವು ತಿಂಗಳಿನಿAದ ಮಳೆ ಬಾರದ ಹಿನ್ನೆಲೆಯಲ್ಲಿ ಕಾಫಿ ಗಿಡಗಳು ಒಣಗಲು ಪ್ರಾರಂಭವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಯನ್ನೇ ಅವಲಂಬಿಸಿಕೊAಡು ಜೀವನ ಮಾಡುತ್ತಿರುವ ಸಣ್ಣ ಬೆಳೆಗಾರರು ಹಾಗೂ ಅತೀ ಸಣ್ಣ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ. ಕೆಲವೊಮ್ಮೆ ಮಳೆಯ ಮೋಡ ಬಂದರೂ ಕೂಡ ಮಳೆ ಬರುತ್ತಿಲ್ಲ.

ಚೆಟ್ಟಳ್ಳಿ: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ನೀರಿನ ವ್ಯವಸ್ಥೆ ಇರುವೆಡೆ ಸ್ಪಿçಂಕ್ಲರ್ ಮಾಡುವ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸಿರುವುದರಿಂದ ಕಾಫಿ ಹೂಗಳು ಅರಳಿವೆ. ಆದರೆ ಕೆಲವೆಡೆ ನಂತರದ ಬ್ಯಾಕಿಂಗ್ ನೀರೊದಗಿಸಲು ನೀರಿಲ್ಲದೆ ಮುಂದಿನ ಕಾಫಿ ಫಸಲಿಗೆ ಹೊಡೆತ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ಬೆಳೆಗಾರರು.

ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಧ್ಯಮ ವರ್ಗದ ಬೆಳೆಗಾರರಿದ್ದು ಶೇ.೫೦ ರಷ್ಟು ಕಾಫಿ ತೋಟಗಳಿಗೆ ಮಾತ್ರ ನೀರು ಹಾಯಿಸಲಾಗಿದ್ದು, ಉಳಿದ ಕಾಫಿ ತೋಟಗಳು ಮಳೆಗಾಗಿ ಕಾಯುತ್ತಿದೆ. ಈ ಬಾರಿಯ ಹೂಮಳೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದ್ದು, ಬಿಸಿಲ ತಾಪಕ್ಕೆ ಈಗಾಗಲೇ ಸಣ್ಣಸಣ್ಣ ಕಾಫಿ,

ವೀರಾಜಪೇಟೆ: ತಾಲೂಕಿನ ಅಮ್ಮತ್ತಿ ಹೋಬಳಿಯ ಕಾರ್ಮಾಡು, ಬಾಣಂಗಾಲ, ವೀರಾಜಪೇಟೆ ಹೋಬಳಿಯ ಕಾಕೋಟುಪರಂಬು, ಕದನೂರು, ಆರ್ಜಿ, ಬೇಟೋಳಿ, ಕೆದಮುಳ್ಳೂರು, ಹೆಗ್ಗಳ, ಬಿಟ್ಟಂಗಾಲ ಗ್ರಾಮಗಳು ಸೇರಿದಂತೆ ಎಲ್ಲೆಡೆಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ವೀರಾಜಪೇಟೆಗೆ ಬೇತ್ರಿ ಕಾವೇರಿ ಹೊಳೆಯಿಂದ ನೀರು ಸರಬರಾಜಾಗುತ್ತಿದ್ದು, ಎರಡು ದಿನಗಳಿಗೊಮ್ಮೆ ಇಲ್ಲಿನ ನಿವಾಸಿಗಳಿಗೆ ನೀರು ಲಭಿಸುತ್ತಿದೆ. ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಬಿಸಿಲಿನ ಕಾವಿಗೆ ಮರಗಿಡಗಳು ಒಣಗಿ, ನೀರಿಲ್ಲದೆ ಸೊರಗುತ್ತಿವೆ. ಕೆಲವು ಕಡೆಗಳಲ್ಲಿ ಕಾಫಿ ಫಸಲು ಕುಯ್ಲು ಆದ ಬಳಿಕ ಮಳೆ ಬಾರದೆ ಇರುವುದರಿಂದ

ಸಿದ್ದಾಪುರ

(ಮೊದಲ ಪುಟದಿಂದ) ಇಂದಲ್ಲ ನಾಳೆ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ. ಈ ಬಾರಿ ರೋಬಸ್ಟ ಕಾಫಿಗೆ ಉತ್ತಮ ಬೆಲೆ ಲಭಿಸಿದೆ. ಆದರೆ ಮುಂದಿನ ವರ್ಷಕ್ಕೆ ಕಾಫಿ ಫಸಲು ಬರಲು ಮಳೆ ಬರದೇ ಮುಂದಕ್ಕೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಕಾಫಿ ಬೆಳೆಗಾರರು ಇದ್ದಾರೆ. ಕೆಲವು ದೊಡ್ಡ ಬೆಳೆಗಾರರು ತಮ್ಮ ಕೆರೆಗಳಿಂದ ಕಾಫಿ ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ಆದರೆ ಬಿಸಿಲಿನ ಧಗೆಯಿಂದಾಗಿ ಇದು ಕೂಡ ಅಷ್ಟೊಂದು ಮಟ್ಟದಲ್ಲಿ ಪ್ರಯೋಜಕಾರಿ ಆಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಕಾಫಿ ಅಲ್ಲದೇ ಕರಿಮೆಣಸಿನ ಬಳ್ಳಿಗಳು ಕೂಡ ಸೊರಗುತ್ತಿದೆ. ಅಡಿಕೆ ಫಸಲಿಗೂ ಮುಂದಕ್ಕೆ ಸಮಸ್ಯೆ ಆಗುವ ಭೀತಿ ಎದುರಾಗದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕರಡಿಗೋಡು ಕಾಫಿ ಬೆಳೆಗಾರ ಕುಕ್ಕನೂರು ಮೋಹನ್ ತಾನು ಮಳೆ ನಂಬಿ ಜೀವನ ಮಾಡುತ್ತಿರುವುದು. ಈ ಬಾರಿ ಮಳೆ ಸಕಾಲಕ್ಕೆ ಸಿಗದೇ ಕಾಫಿ ಗಿಡಗಳು ಒಣಗುತ್ತಿವೆ ಎಂದರು. ಸಿದ್ದಾಪುರದ ಕಾಫಿ ಬೆಳೆಗಾರ ಎಸ್.ಬಿ. ಪ್ರತೀಶ್ ಮಾತನಾಡಿ, ಮಳೆ ಇಲ್ಲದೇ ಕೆರೆಯ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದು ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಕರಿಮೆಣಸಿಗೂ ತೊಂದರೆ ಆಗಿದೆ ಎಂದರು. ಚೆಟ್ಟಳ್ಳಿ

(ಮೊದಲ ಪುಟದಿಂದ) ಅಡಿಕೆ, ಬಾಳೆಗಿಡಗಳೆಲ್ಲಾ ಸುಟ್ಟುಹೋಗಿವೆ.

ಚೆಟ್ಟಳ್ಳಿಯ ಪಟ್ಟಣದಲ್ಲಿ ನೀರಿನ ಸಮಸ್ಯೆಯೂ ಎದುರಾಗಿದ್ದು ನೀರಿನ ಮೂಲಗಳು ಬತ್ತುತ್ತಿರುವುದರಿಂದ ಪಂಚಾಯಿತಿ ವತಿಯಿಂದ ನಿಯಮಿತವಾಗಿ ನೀರು ಬಿಡಲಾಗುತ್ತಿದೆ ಎಂದು ನೀರುಗಂಟಿ ಗಣೇಶ ಹೇಳುತ್ತಾರೆ. ಜಲ ಜೀವನ್ ಮಿಷನ್ ಅಡಿ ಚೆಟ್ಟಳ್ಳಿ ಪಟ್ಟಣದ ಮನೆಗಳಿಗೆ ನೀರು ಒದಗಿಸಲು ೫೦ ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕನ್ನು ನಿರ್ಮಿಸಿ ಒಂದುವರೆ ವರ್ಷ ಕಳೆದರೂ ಈವರೆಗೂ ನೀರಿನ ಸಮರ್ಪಕ ವ್ಯವಸ್ಥೆ ಆಗಿಲ್ಲ. ಜೊತೆಗೆ ಚೆಟ್ಟಳ್ಳಿ ಪಂಚಾಯಿತಿಗೂ ಇದನ್ನು ಹಸ್ತಾಂತರ ಮಾಡಿಲ್ಲ. ಕೆಲವೆಡೆ ಮನೆಗಳಿಗೆ ನೀರಿಲ್ಲದೆ ವಾಹನಗಳಲ್ಲಿ ನೀರನ್ನು ಸಾಗಿಸಲಾಗುತ್ತಿದೆ. ಕುಡಿಯುವ ನೀರಿನ ಮೂಲವಾದ ಬಾವಿ, ಬೋರ್ವೆಲ್‌ಗಳೂ ಕೆಲವೆಡೆ ಬತ್ತಿವೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಲವು ಬೋರ್‌ವೆಲ್‌ಗಳಿಗೆ ಮೋಟಾರ್ ಅಳವಡಿಸಲು ಕಳೆದ ಬಾರಿಯೇ ತೀರ್ಮಾನಿಸಿದ್ದರೂ ಗ್ರಾಮ ಪಂಚಾಯಿತಿ ಇದನ್ನು ಇನ್ನೂ ಕೂಡ ಕಾರ್ಯರೂಪಗೊಳಿಸುತ್ತಿಲ್ಲ.

ಆದಾಯದ ಮೂಲವಾದ ಕಾಫಿ ಹಾಗೂ ಕರಿಮೆಣಸು ಬಳ್ಳಿಗಳನ್ನು ಬಿಸಿಲ ಬೇಗೆಯಿಂದ ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಕಾಫಿ ಬೆಳೆಗಾರ ಸೋಮೆಯಂಡ ದಿಲೀಪ್ ಅಪ್ಪಚ್ಚು ಅಳಲು ತೋಡಿಕೊಂಡಿದ್ದಾರೆ.

ಕಳೆದ ಬಾರಿ ನೆಡಲಾದ ಕಾಫಿ, ಅಡಿಕೆ, ಬಾಳೆ ಗಿಡಗಳೆಲ್ಲಾ ಉರಿಬಿಸಿಲ ಬೇಗೆಗೆ ಸುಟ್ಟುಹೋಗುತ್ತಿವೆ ಎಂದು ಕಾಫಿ ಬೆಳೆಗಾರ ಜಯಬೆಳ್ಯಪ್ಪ ತಿಳಿಸಿದ್ದಾರೆ.

ವೀರಾಜಪೇಟೆ

(ಮೊದಲ ಪುಟದಿಂದ) ನೀರು ಹಾಯಿಸುವುದು ವಾಡಿಕೆ. ಹಾಗಾಗಿ ಕೃಷಿಕರು ತಮ್ಮ ಕೆರೆಗಳಿಂದ, ನದಿಗಳಿಂದ ನೀರು ಹಾಯಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ನೀರಿನ ಪ್ರಮಾಣವು ತಗ್ಗುತ್ತಿದೆ. ದನಕರುಗಳಿಗೆ, ಕಾಡುಪ್ರಾಣಿ ಪಕ್ಷಿಗಳಿಗೆ ನೀರಿನ ಕೊರತೆ ಕಾಡುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿದೆ. ಸ್ಪಿçಂಕ್ಲರ್ ಮಾಡುವುದರಿಂದ ಮನೆಗಳ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರು ತಳಮಟ್ಟಕ್ಕೆ ಹೋಗುತ್ತದೆ. ಸ್ಪಿçಂಕ್ಲರ್ ಮಾಡದೆ ಇದ್ದರೆ ಮುಂದಿನ ವರ್ಷದ ಫಸಲನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಬೆಳೆಗಾರರ ಪ್ರಶ್ನೆಯಾಗಿದೆ.

ಬಿಸಿಲಿನ ಝಳಕ್ಕೆ ಕೊಡಗು ಹೈರಾಣಾಗುತ್ತಿದೆ. ಈ ಹಿಂದೆ ಕಾಣದಷ್ಟು ಸುಡು ಬಿಸಿಲು ಕಾಯುತ್ತಿದ್ದು ಮನೆಯಿಂದ ಹೊರ ಬರಲು ಸಂಕಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ, ಈಗಾಗಲೇ ಕುಡಿಯುವ ನೀರು ಬತ್ತುತ್ತಿದೆ ಎಂದು ಅಮ್ಮತ್ತಿಯ ಸಬೀತ ಹೇಳಿದರು.

ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಗಿಡಗಳು ಒಣಗುವ ಹಂತಕ್ಕೆ ಬಂದಿದೆ. ಮಳೆ ಬಾರದೆ ಇದ್ದಲ್ಲಿ ನೀರಿನ ಸಮಸ್ಯೆ ಮತ್ತೆ ಬಿಗಡಾಯಿಸಲಿದೆ. ಮಳೆಗಾಲದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಇದೀಗ ನೀರಿನ ಸಮಸ್ಯೆ ಉಂಟಾಗಿದೆ ಎಂದು ವೀರಾಜಪೇಟೆಯ ಮನು ಅಚ್ಚಪ್ಪ ಹೇಳಿದರು.ಶನಿವಾರಸಂತೆ: ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಕಾಫಿ ಬೆಳೆಗಾರರು ಆಕಾಶದತ್ತ ನೋಡುತ್ತಾ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ತೋಟಗಳ ಪರಿಸ್ಥಿತಿ ಹೇಳತೀರದಾಗಿದೆ. ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿದ್ದರೆ ತೋಟಗಳಲ್ಲಿ ಸಹಜವಾಗಿ ಕಾಫಿ ಹೂಗಳರಳಿ ಪರಿಮಳ ಪಸರಿಸಬೇಕಾಗಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಕಾಫಿ ಗಿಡಗಳು ಒಣಗುತ್ತಿವೆ.

ಕೆಲವೆಡೆ ನೀರಿನ ಅನುಕೂಲ ವ್ಯವಸ್ಥೆ ಇರುವ ಬೆಳೆಗಾರರು ತಮ್ಮ ತೋಟಗಳಲ್ಲಿ ರೋಬಸ್ಟ್ ಕಾಫಿ ಗಿಡಗಳಿಗೆ ಕೊಳವೆ ಬಾವಿಯಿಂದ ಮೋಟಾರ್ ಮೂಲಕ ನೀರು ಹಾಯಿಸಿ ಹೂಗಳನ್ನು ಅರಳಿಸಿದ್ದಾರೆ. ಆದರೆ, ಬಿಸಿಲಿನ ತಾಪಕ್ಕೆ ಹೂವಿನ ಜತೆಗೆ ಗಿಡಗಳೇ ಒಣಗಿ ಹೋಗುತ್ತಿವೆ.

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ರಕ್ಷಿತ್ ಗೌಡ ಮಾತನಾಡಿ, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು ಕಾಫಿ ಗಿಡಗಳು ಸುಟ್ಟು ಹೋಗುತ್ತಿವೆ. ನೀರಿನ ಅನುಕೂಲವಿದ್ದವರು ನೀರು ಹಾಯಿಸಿ ಗಿಡದಲ್ಲಿ ಮೂಡಿದ ಮೊಗ್ಗು ಬಿಸಿಲಿಗೆ ಮುರುಟಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವರದಿ: ಎ.ಎನ್. ವಾಸು, ನಾಗರಾಜಶೆಟ್ಟಿ, ಕರುಣ್ ಕಾಳಯ್ಯ, ರಾಜುರೈ, ಹೊದ್ದೆಟ್ಟಿ ಸುಧೀರ್, ನಯನತಾರಈ ಬಾರಿಯ ಹವಾಮಾನ ವೈಪರೀತ್ಯದ ಪರಿಣಾಮ ಬಿಸಿಲಿನ ತಾಪಮಾನದ ಹೆಚ್ಚಳ ದಿಂದ ಕರಿಕೆ ಭಾಗದಲ್ಲಿ ಜನರನ್ನು ಕಂಗೆಡಿಸಿದ್ದು, ಗೇರು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಬಾರಿಗಿಂತ ಹೆಚ್ಚಿನ ಬಿಸಿಲಿನ ತಾಪದಿಂದ ಗೇರು ಮರದ ಹೂ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸರಿಯಾದ ಸಮಯದಲ್ಲಿ ಮಳೆ ಕೈಕೊಟ್ಟ ಕಾರಣ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಸೆಕೆಯ ವಾತಾವರಣದಲ್ಲಿ ಹೆಚ್ಚಾಗಿ ಬೆಳೆಯುವ ಗೇರು ಬೆಳೆಯನ್ನು ಕೊಡಗಿನ ಕರಿಕೆ, ಪೆರಾಜೆ, ಸಂಪಾಜೆ, ಚೆಂಬು ಗ್ರಾಮಗಳಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿ ಬೆಳೆಯುತ್ತಿದ್ದು, ಜನವರಿಯಲ್ಲಿ ಆರಂಭಗೊAಡು ಮೇ ತನಕ ಫಸಲು ನೀಡುತ್ತದೆ.

ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಮೂರು ನಾಲ್ಕು ಮಳೆ ಸುರಿದಲ್ಲಿ ಹೂಗಳು ಉತ್ತಮ ರೀತಿಯಲ್ಲಿ ಕಾಯಿ ಬಿಡುತ್ತವೆ. ಆದರೆ ಈಗಿನ ವಾತಾವರಣಕ್ಕೆ ಹೂ ಸಂಪೂರ್ಣ ಒಣಗಿ ಕರಕಲಾಗಿದ್ದು ಶೇ. ೫೦ರಷ್ಟು ಇಳುವರಿ ಕಡಿಮೆ ಆಗಿದೆ. ಮಾರುಕಟ್ಟೆ ಬೆಲೆ ಕೂಡ ಇಳಿಕೆಯಾಗಿದ್ದು, ಕಳೆದ ಬಾರಿ ಕೆ.ಜಿ ಗೆ ೧೦೫ ರೂಪಾಯಿ ಇದ್ದ ಬೆಲೆ ಈ ಬಾರಿ ೯೫ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಈ ಬಾರಿ ಮಳೆ ಕಾಣದೆ ಗೇರು ಬೆಳೆಗಾರರು ಕಂಗೆಟ್ಟಿದ್ದಾರೆ.

ಕಳೆದ ಬಾರಿ ಉತ್ತಮ ಫಸಲು ಪಡೆದಿದ್ದು, ಈ ಬಾರಿಯ ವಾತಾವರಣ ವಿಭಿನ್ನವಾಗಿದೆ. ಇದುವರೆಗೂ ಮಳೆಯಾಗಿಲ್ಲ ಹಾಗೂ ಉಷ್ಣತೆಯ ಏರಿಕೆ ಪರಿಣಾಮ ಶೇ.೫೦ ಫಸಲು ಕಡಿಮೆಯಾಗಿದ್ದು, ಗೇರು ಹೂವಿನ ಗೊಂಚಲು ಒಣಗಿ ಕರಕಲಾಗಿದೆ. ಇಳುವರಿ ಕೊರತೆಯ ಪರಿಣಾಮ ತೀವ್ರ ನಷ್ಟ ಉಂಟಾಗಿದೆ ಎಂದು ಗೇರು ಬೆಳೆಗಾರ ಶಂಕರ ಸರಳಾಯ ಹೇಳಿದರು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬಿಸಿಲಿನ ಧಗೆಗೆ ಕಾಫಿ ಬೆಳೆಗಾರರು ಕಂಗಾಲಾಗಿರುವುದು ಕಂಡು ಬಂದಿದೆ. ಗಿಡ ಗಳು ಬಿಸಿಲಿನ ತಾಪಕ್ಕೆ ಸೊರ ಗುತ್ತಿವೆ. ಕೆಲ ಭಾಗದಲ್ಲಿ ಕರಿಮೆ ಣಸು ಬಳ್ಳಿ ಗಳು ಬಾಡಿಹೋಗಿವೆ. ಕಲ್ಲೂರು ನಿವಾಸಿ ಯಾದ ಕೃಷಿಕ ಬಸಪ್ಪ ಎಂಬುವರು ಪತ್ರಿಕೆಯೊಂದಿಗೆ ಮಾತ ನಾಡಿ, ತಾನು ಇದು ವರೆಗೂ ಇಂತಹ ಪರಿಸ್ಥಿತಿ ನೋಡಿಲ್ಲ. ಯಾವತ್ತೂ ಕಾಫಿ ಫಸಲು ಕೊಯ್ಲು ಮುಗಿದ ನಂತರ ಮಳೆ ಬಂದು ಹೊಸ ಚಿಗುರು ಹಾಗೂ ಹೂಗಳು ಅರಳಿ ನಮಗೆ ಸಂತೋಷವಾಗುತ್ತಿತ್ತು. ಆದರೆ ಈ ಬಾರಿ ಮಳೆಯೆ ಬಾರದಿರುವುದು ಆತಂಕ ಮೂಡಿಸಿದೆ ಎಂದರು. ಸಣ್ಣ ಬೆಳೆಗಾರರಾದ ಉತ್ತಪ್ಪ (ಕುಮಾರ) ಗರಗಂದೂರು ಭಾಗದಲ್ಲಿ ಹಲವು ತೋಟಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಕಂಡುಬAದಿದೆ. ಗರಗಂದೂರು ಹೊಳೆಯು ಸಹ ನೀರಿಲ್ಲದೆ ಬತ್ತಿ ಹೋಗಿದೆ ಎಂದು ತಿಳಿಸಿದರು. ಈ ಬಾರಿ ಅಂತ ರ್ಜಲ ಕುಸಿತದಿಂದ, ಮಳೆಯ ಅಭಾವದಿಂದ ಸಣ್ಣ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಸುಂಟಿಕೊಪ್ಪದ ಎಲ್ಲಾ ಗ್ರಾಮಗಳಲ್ಲಿ ಸಹ ಏರುತ್ತಿರುವ ಬಿಸಿಲಿನ ತಾಪಮಾನಕ್ಕೆ ಜಲಮೂಲಗಳು, ಹಳ್ಳಕೊಳ್ಳಗಳು, ತೋಟಗಳಲ್ಲಿರುವ ಕೆರೆಗಳು ಬತ್ತಿಹೋಗಿದ್ದು, ನೀರಿಲ್ಲದೆ ಮರಗಿಡಗಳು ಸೊರಗುತ್ತಿವೆ.ಸುಡುಬಿಸಿಲಿನ ತಾಪಮಾನಕ್ಕೆ ಅಂತರ್ಜಲದ ಮಟ್ಟ ತೀರಾ ಕಡಿಮೆ ಆದ ಹಿನ್ನೆಲೆಯಲ್ಲಿ ಕೊಳವೆ ಬಾವಿಯ ನೀರನ್ನು ನಂಬಿ ಅರೆ ಬೇಸಾಯ ಮಾಡಿರುವ ಕುಶಾಲನಗರ ತಾಲೂಕು ವ್ಯಾಪ್ತಿಯ ರೈತರ ಮುಸುಕಿನ ಜೋಳ ಮತ್ತು ಇತರ ದ್ವಿದಳ ಧಾನ್ಯದ ಬೆಳೆ ಒಣಗುವಂತಹ ಪ್ರಸಂಗ ಎದುರಾಗುತ್ತಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಅರೆ ಬೇಸಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ, ಆದರೆ ಈಗಾಗಲೇ ಬಿಸಿಲಿನ ತಾಪದಿಂದ ಈ ಭಾಗದ ಅನೇಕ ಕೊಳವೆ ಬಾವಿಗಳಿಂದ ನೀರು ಬಾರದ ಕಾರಣದಿಂದಾಗಿ, ಸ್ವಲ್ಪ ಪ್ರಮಾಣದ ಮಟ್ಟಿಗೆ ಬೆಳೆ ಬೆಳೆದಿದ್ದು, ನೀರಿಲ್ಲದೆ ಒಣಗಲು ಆರಂಭವಾಗಿದೆ.

ಈ ಬೆಳೆಯು ಈ ಭಾಗದ ರೈತರಿಗೆ ಹೈನುಗಾರಿಕೆಗೆ ಪೂರಕವಾದ ಆಹಾರವಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ತೊಂದರೆ ಆಗುವ ಸಂಭವ ಕಂಡುಬರುತ್ತಿದೆ. ವರುಣ ದೇವರು ಕರುಣೆ ತೋರಿಸಲಿ ಎಂದು ಆಗಸದತ್ತ ಮುಖ ಮಾಡಿ ನೋಡುತ್ತಿರುವ ರೈತರು; ಗ್ರಾಮದ ವಿವಿಧ ದೇವಾಲಯಗಳಿಗೆ ತೆರಳಿ ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

ಶನಿವಾರಸಂತೆ: ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಕಾಫಿ ಬೆಳೆಗಾರರು ಆಕಾಶದತ್ತ ನೋಡುತ್ತಾ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ತೋಟಗಳ ಪರಿಸ್ಥಿತಿ ಹೇಳತೀರದಾಗಿದೆ. ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಸಕಾಲಕ್ಕೆ ಸರಿಯಾಗಿ ಮಳೆಯಾಗಿದ್ದರೆ ತೋಟಗಳಲ್ಲಿ ಸಹಜವಾಗಿ ಕಾಫಿ ಹೂಗಳರಳಿ ಪರಿಮಳ ಪಸರಿಸಬೇಕಾಗಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಕಾಫಿ ಗಿಡಗಳು ಒಣಗುತ್ತಿವೆ.

ಕೆಲವೆಡೆ ನೀರಿನ ಅನುಕೂಲ ವ್ಯವಸ್ಥೆ ಇರುವ ಬೆಳೆಗಾರರು ತಮ್ಮ ತೋಟಗಳಲ್ಲಿ ರೋಬಸ್ಟ್ ಕಾಫಿ ಗಿಡಗಳಿಗೆ ಕೊಳವೆ ಬಾವಿಯಿಂದ ಮೋಟಾರ್ ಮೂಲಕ ನೀರು ಹಾಯಿಸಿ ಹೂಗಳನ್ನು ಅರಳಿಸಿದ್ದಾರೆ. ಆದರೆ, ಬಿಸಿಲಿನ ತಾಪಕ್ಕೆ ಹೂವಿನ ಜತೆಗೆ ಗಿಡಗಳೇ ಒಣಗಿ ಹೋಗುತ್ತಿವೆ.

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಬೆಳೆಗಾರ ರಕ್ಷಿತ್ ಗೌಡ ಮಾತನಾಡಿ, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು ಕಾಫಿ ಗಿಡಗಳು ಸುಟ್ಟು ಹೋಗುತ್ತಿವೆ. ನೀರಿನ ಅನುಕೂಲವಿದ್ದವರು ನೀರು ಹಾಯಿಸಿ ಗಿಡದಲ್ಲಿ ಮೂಡಿದ ಮೊಗ್ಗು ಬಿಸಿಲಿಗೆ ಮುರುಟಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವರದಿ: ಎ.ಎನ್. ವಾಸು, ನಾಗರಾಜಶೆಟ್ಟಿ, ಕರುಣ್ ಕಾಳಯ್ಯ, ರಾಜುರೈ, ಹೊದ್ದೆಟ್ಟಿ ಸುಧೀರ್, ನಯನತಾರ