ಪೊನ್ನಂಪೇಟೆ, ಏ. ೪: ಕಾಳು ಮೆಣಸು ಕೀಳುವ ಸಂದರ್ಭ ಅಲ್ಯು ಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಾರ್ಮಿಕ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಧನು ಗಾಲ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬೀರ ತಮ್ಮನಹಳ್ಳಿ ಗ್ರಾಮದ ಪುಷ್ಪಗಿರಿ (೪೭) ಎಂಬವರೇ ಮೃತ ದುರ್ದೈವಿ. ಧನುಗಾಲ ಗ್ರಾಮದ ಕೆ.ಎಂ ಕರುಂಬಯ್ಯ ಅವರ ಕಾಫಿ ತೋಟ ದಲ್ಲಿ ತಾ.೪ ರಂದು ಬೆಳಿಗ್ಗೆ ಕಾಳು ಮೆಣಸು ಕೀಳಲು ಕಾಳು ಮೆಣಸು ಬಳ್ಳಿಗೆ ಏಣಿ ಜೋಡಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿದೆ. ಇದರಿಂದಾಗಿ ಪುಷ್ಪಗಿರಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.