ಸಿದ್ದಾಪುರ, ಏ. ೫ : ಮದುವೆ ಆಗಿಲ್ಲ ಹಾಗೂ ಸಾಲಬಾಧೆ ಕಾರಣಕ್ಕಾಗಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದÀಲ್ಲಿ ನಡೆದಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಿವಾಸಿ ಚಿನ್ನದ ಕೆಲಸ ಮಾಡುತ್ತಿದ್ದ ಗಣೇಶ (೪೪) ನೇಣಿಗೆ ಶರಣಾಗಿದ್ದು, ನೆಲ್ಯಹುದಿಕೇರಿ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಗಣೇಶ್ ಇನ್ನೂ ಮದುವೆಯಾಗಿಲ್ಲ ಹಾಗೂ ಸಾಲಬಾಧೆಯಿಂದ ಮನನೊಂAದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಅಣ್ಣ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ವಂತ ಊರಿಗೆ ರವಾನಿಸಲಾಯಿತು.