ಮಡಿಕೇರಿ, ಏ. ೩: ಸ್ವಾತಂತ್ರಾö್ಯನAತರ ಭಾರತದಲ್ಲಿ ತಿರುಚಿದ ಇತಿಹಾಸವನ್ನು ಜನತೆಯ ಮುಂದಿಡಲಾಯಿತು. ಇದರಿಂದ ಭಾರತೀಯರು ಕೀಳರಿಮೆಯನ್ನು ಮೂಡಿಸಿಕೊಂಡು ಬೌದ್ಧಿಕ ಗುಲಾಮಗಿರಿಗೆ ಒಳಗಾಗಬೇಕಾಯಿತು. ಆದರೆ ಸಾಮಾಜಿಕ ಜಾಲತಾಣ ಮೂಲಕ ಯುವಜನತೆ ಸತ್ಯವನ್ನು ತಿಳಿದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ರಾಷ್ಟಿçÃಯವಾದಿ ಚಿಂತಕ ಹಾಗೂ ಲೇಖಕ, ವಾಗ್ಮಿ ನಿತ್ಯಾನಂದ ವಿವೇಕವಂಶಿ ಅಭಿಪ್ರಾಯಪಟ್ಟರು. ಸಾಹಿತಿ ಹಾಗೂ ಕಲಾವಿದ ಅಡ್ಡಂಡ ಕಾರ್ಯಪ್ಪ ರಚಿತ ಕರಿನೀರ ವೀರ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು. ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಮಂಗಳವಾರ ಕಾರ್ಯಕ್ರಮ ನಡೆಯಿತು.
ಭಾರತ ಹಿಂದೆ ವಿಶ್ವಗುರುವಾಗಿತ್ತು. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಇತಿಹಾಸ ಕೊಡಗು ಸೇರಿದಂತೆ ದೇಶದ ಜನತೆಯ ಮುಂದಿದೆ. ಅಂತಹ ಕ್ಷಾತ್ರ ಪರಂಪರೆಯನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಇತ್ತೀಚೆಗೆ ನಿಜವಾದ ಸ್ವಾತಂತ್ರ್ಯ ಹೋರಾಟದ ಚಿತ್ರಣಗಳು ಜನತೆಗೆ ಸಿಗುತ್ತಿದೆ. ಸಾವರ್ಕರ್ ಅವರನ್ನು ಸ್ವಾತಂತ್ರ ಹೋರಾಟದ ಹೇಡಿ ಎಂದು ಬಿಂಬಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣದ ಪರಿಣಾಮವಾಗಿ ಯುವ ಜನತೆ ಸತ್ಯವನ್ನು ತಿಳಿದುಕೊಳ್ಳುವ ಕಾತುರತೆಯನ್ನು ಹೊಂದಿದ್ದಾರೆ. ಈಗಿನ ಯುವಜನರು ಸಾಮಾಜಿಕ ಜಾಲತಾಣ ಇನ್ನಿತರ ಮಾಧ್ಯಮದ ಮೂಲಕ ನಿಜವಾದ ಸ್ವಾತಂತ್ರ ಹೋರಾಟದ ಹೆಗ್ಗುರುತನ್ನು ಕಂಡುಕೊಳ್ಳುವಲ್ಲಿ ಮುಂದಾಗುತ್ತಿದ್ದಾರೆ. ಸ್ವಾತಂತ್ರ್ಯವೀರ ಸಾವರ್ಕರ್ ಅವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಮೂವರು ಸಹೋದರರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಕ್ರಾಂತಿಕಾರಿಗಳನ್ನು ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಲು ಸಾವರ್ಕರ್ ಅವರು ಪ್ರೇರಣೆಯನ್ನು ನೀಡುತ್ತಿದ್ದರು. ಬ್ರಿಟಿಷರ ನೆಲದಲ್ಲೇ ಇದ್ದು ಬ್ರಿಟಿಷರ ವಿರುದ್ಧ ಹೋರಾಟವನ್ನು ಸಾವರ್ಕರ್ ಅವರು ಸಂಘಟಿಸುತ್ತಿದ್ದರು. ಚಂದ್ರಶೇಖರ್ ಆಜಾದ್ ಭಗತ್ ಸಿಂಗ್ ಸುಖದೇವ್ ರಾಜಗುರು ಅವರಿಗೆ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟವೇ ಪ್ರೇರಣೆಯಾಗಿತ್ತು ಎಂಬುದನ್ನು ಚಿಂತಕ ನಿತ್ಯಾನಂದ ವಿವೇಕವಂಶಿ ಬಿಚ್ಚಿಟ್ಟರು.
ಸ್ವಾತಂತ್ರಾö್ಯನAತರ ಭಾರತ ದೇಶದ ಪ್ರಧಾನಿಯಾಗಬೇಕಾಗಿದ್ದವರು ಸ್ವಾತಂತ್ರ್ಯವೀರ ಸಾವರ್ಕರ್, ಆದರೆ ದೇಶದ ದುರಂತವೆAದರೆ ಸಾವರ್ಕರ್ ಅವರಿಗೆ ಭಾಗ್ಯ ಸಿಗಲೇ ಇಲ್ಲ. ಆದರೆ ಸ್ವಾತಂತ್ರ್ಯವೀರ ಸಾವರ್ಕರ್ ಕಂಡ ಕನಸು ಇದೀಗ ನನಸಾಗುವತ್ತ ಸಾಗುತ್ತಿದ್ದು ಭಾರತ ಮತ್ತೊಮ್ಮೆ ವಿಶ್ವಗುರು ಆಗುವತ್ತ ಸಾಗುತ್ತಿದೆ ಎಂದು ನಿತ್ಯಾನಂದ ವಿವೇಕ ವಂಶಿ ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಬಾಲ್ಯದಲ್ಲಿ ದೇಶಭಕ್ತಿ ಮೂಡಿಸುವಂತಹ ಕೆಲಸಗಳು ಆಗಿರಲಿಲ್ಲ. ಆದರೆ ಇತ್ತೀಚೆಗೆ ದೇಶಭಕ್ತಿಯ ಭಾವನೆ ಎಲ್ಲರಲ್ಲೂ ಹೆಚ್ಚಾಗಿ ಮೂಡುತ್ತಿದೆ. ಪ್ರತಿಯೊಬ್ಬರೂ ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ದೇಶ ಕಾರ್ಯವನ್ನು ಮಾಡಲು ಮುಂದಾಗಬೇಕು. ದೇಶದಲ್ಲಿರುವ ಯಾರೂ ಕೂಡ ದೇಶಕ್ಕೆ ದ್ರೋಹ ಮಾಡುವಂತ ಕೆಲಸವನ್ನು ಮಾಡಬಾರದು ಎಂದು ನುಡಿದರು. ಕರಿ ನೀರವೀರ ಪುಸ್ತಕದ ಕರ್ತೃ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಅವಮಾನಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ ಅವರ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ನಾಟಕದ ಮೂಲಕ ರಾಜ್ಯಾದ್ಯಂತ ವ್ಯಕ್ತಪಡಿಸಲಾಗುತ್ತಿದೆ ನಾಟಕ ಕೃತಿ ಕರಿ ನೀರವೀರ ಪುಸ್ತಕವನ್ನು ಜಿಲ್ಲೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಸಂತಸ ಎನಿಸಿದೆ. ಕರಿ ನೀರವೀರ ನಾಟಕವನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಕಾರಣದಿಂದಾಗಿ ಕೊಡಗಿನಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಪುಸ್ತಕವನ್ನು ಪರಿಚಯಿಸುವ ಕಾರ್ಯವನ್ನು ಇಂದು ಮಾಡಲಾಗುತ್ತಿದೆ ಎಂದು ಹೇಳಿದರು. ಸ್ವಾತಂತ್ರö್ಯವೀರ ಸಾವರ್ಕರ್ ಅವರು ಎರಡು ಅವಧಿಯ ಕರಿನೀರ ಶಿಕ್ಷೆಗೆ ಗುರಿಯಾಗಿದ್ದರು. ಅವರ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಅವರನ್ನು ಅವಮಾನಿಸುವ ಕಾರ್ಯ ನಡೆಯಿತು. ಹಾಗಾಗಿ ಅವರ ಹೋರಾಟದ ಚಿತ್ರಣವನ್ನು ಜನತೆಯ ಮುಂದಿಡುವ ಕೆಲಸವನ್ನು ಮಾಡಲಾಗುತ್ತಿದೆ. ಕನ್ನಡದಲ್ಲಿ ಮೊದಲ ನಾಟಕ ಪ್ರದರ್ಶನ ಇದಾಗಿದೆ ಎಂದು ಅಭಿಪ್ರಾಯಪಟ್ಟರು. ಕೋರನ ಸುನಿಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರೆ, ಕುಮಾರಿ ಪದ್ಮಪ್ರಿಯ ವೀರ ಸಾವರ್ಕರ್ ರಚಿತ ಜಯಸ್ತುತಿ ಗೀತೆಯನ್ನು ಹಾಡಿದರು. ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖ ಶಿವರಾಜ್ ವಂದಿಸಿದರು. ಕೋರನ ಹೃತ್ಪೂರ್ವಕ್ ವಂದೇ ಮಾತರಂ ಗೀತೆಯನ್ನು ಹಾಡಿದರು.