ಸೋಮವಾರಪೇಟೆ, ಮಾ. ೨೮: ನಿನ್ನೆ ರಾತ್ರಿ ಪಟ್ಟಣದ ಸುವಿಧ್ ಲಾಡ್ಜ್ನಲ್ಲಿ ತೆಲಂಗಾಣದ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಲಾಡ್ಜ್ನಲ್ಲಿ ನೇಣಿಗೆ ಶರಣಾದ ಮಹಿಳೆ ಕಳೆದ ೩೦ ವರ್ಷಗಳ ಹಿಂದೆ ಸೂರ್ಲಬ್ಬಿ ಗ್ರಾಮದಿಂದ ಮನೆಬಿಟ್ಟು ಹೋದವರು ಎಂಬುದು ತಿಳಿದುಬಂದಿದೆ.

ಆತ್ಮಹತ್ಯೆಯ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಮಹಿಳೆ ಕೊಡಗು ಮೂಲದವರು ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ದಿ.ಪೊನ್ನಪ್ಪ ಎಂಬವರ ಪುತ್ರಿಆಲ್ಬರ್ಟ್ ಸ್ವಾತಿ(೫೯) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.

ಕಳೆದ ಮೂವತ್ತು ವರ್ಷಗಳ ಹಿಂದೆ ಸೂರ್ಲಬ್ಬಿ ಗ್ರಾಮದ ಮನೆಬಿಟ್ಟು ಆಂಧ್ರಪ್ರದೇಶಕ್ಕೆ ಹೋದವರು ಈವರೆಗೆ ವಾಪಸ್ ಬಂದಿರುವುದಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತೆಯ ಓರ್ವ ಅಣ್ಣ ಗಣಪತಿ ಎಂಬವರು ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸರಿಂದ ಮಾಹಿತಿ ಪಡೆದು ಮಡಿಕೇರಿಗೆ ಆಗಮಿಸಿ, ತಂಗಿಯ ಶವವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

ತೆಲಂಗಾಣ ರಾಜ್ಯದ ನಿಜಾಮಾಬಾದ್‌ನ ಕೊಟಾಕಲ್ಲಿ ಗಾಯಿತ್ರಿನಗರ ನಿವಾಸಿ ನಿವೃತ್ತ ಪೊಲೀಸ್ ಜಾನಕಿ ರಾಮಯ್ಯ ಎಂಬವರ ಪುತ್ರ ಮೇದವರಪ್ಪು ರಾಜು(೬೨) ಅವರೊಂದಿಗಿದ್ದ ಸ್ವಾತಿ ಅವರು, ರಾಜು ಅವರೊಂದಿಗೆ ನಿನ್ನೆ ರಾತ್ರಿ ಲಾಡ್ಜ್ನ ಮೇಲ್ಛಾವಣಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಮೃತ ರಾಜು ಅವರ ತಂಗಿ ಭಾರತಿ ಅವರು ಪೊಲೀಸ್ ಸಂಪರ್ಕಕ್ಕೆ ಸಿಕ್ಕಿದ್ದು, ಅವರ ಮಗ ಶರತ್ ಶನಿವಾರ ಕೊಡಗಿಗೆ ಬಂದ ನಂತರ ಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಜ.೪ ರಂದು ಸೋಮವಾರಪೇಟೆಗೆ ಆಗಮಿಸಿದ್ದ ದಂಪತಿಯರು ಪಟ್ಟಣದ ಸುವಿಧ್ ಲಾಡ್ಜ್ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಪಟ್ಟಣದ ಹೊಟೇಲ್, ಕ್ಯಾಂಟೀನ್‌ಗಳಲ್ಲಿಯೇ ಮೂರು ಹೊತ್ತು ಊಟ, ತಿಂಡಿ ಸೇವಿಸಿಕೊಂಡು ಕೊಠಡಿಯಲ್ಲಿ ತಂಗಿದ್ದರು. ಕೊಠಡಿಯ ಬಾಡಿಗೆಯನ್ನು ಚಾಚೂ ತಪ್ಪದೇ ಪಾವತಿಸಿಕೊಂಡು ಬಂದಿದ್ದ ದಂಪತಿಯರು ನಿನ್ನೆ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಹ್ಲಾದ್ ತನಿಖೆ ಕೈಗೊಂಡಿದ್ದು, ರಾಜು ಅವರ ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದೆ.