ಮಡಿಕೇರಿ, ಮಾ. ೨೮: ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಅಮರ ಸುಳ್ಯ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ತಾ.೨೯ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಸುಳ್ಯದ ಅಂಬಟೆಡ್ಕದಲ್ಲಿರುವ ಕನ್ನಡ ಭವನದಲ್ಲಿ ‘ಶಿಶಿಲ ಚಿಂತನೆ’ ಎಂಬ ಕೃತಿ ಬಿಡುಗಡೆಯಾಗಲಿದೆ,

ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲರಿಗೆ ಎಪ್ಪತ್ತು ವರ್ಷ ತುಂಬಿದ ಪ್ರಯುಕ್ತ ಅವರನ್ನು ಸಂದರ್ಶಿಸಿದ ಬದಿಯಡ್ಕ ಡಾ. ಶಂಕರ ಪಾಟಾಳಿ ಈ ಕೃತಿಯನ್ನು ರಚಿಸಿದ್ದಾರೆ.

ಕೃತಿಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಬಿಡುಗಡೆ ಮಾಡಲಿದ್ದು, ಮಾಜಿ ಲಯನ್ ಗವರ್ನರ್ ಎಂ. ಬಿ. ಸದಾಶಿವ ಪುಸ್ತಕ ಪರಿಚಯ ಮಾಡಲಿದ್ದಾರೆ. ಸಂದರ್ಶನಕಾರ ಡಾ. ಶಂಕರ ಪಾಟಾಳಿ, ಡಾ. ಪ್ರಭಾಕರ ಶಿಶಿಲ, ಶೈಲಿ ಪ್ರಭಾಕರ್ ಉಪಸ್ಥಿತರಿರುತ್ತಾರೆ. ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರ ಶೇಖರ ಪೇರಾಲು ಪರಪ್ಪು ಸಮಾ ರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.