ಮಡಿಕೇರಿ, ಮಾ. ೨೫: ಮಳೆಗಾಗಿ ವಿ.ಹಿ. ಪರಿಷತ್ ವತಿಯಿಂದ ಇಂದು ಭಾಗಮಂಡಲ -ತಲಕಾವೇರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ರಾಜ್ಯ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಅವರು ಪೇಜಾವರ ಮಠಾಧೀಶರ ಪ್ರೇರೇಪಣೆಯಂತೆ ಬೆಂಗಳೂರಿನಿAದ ೬೦ ಮಂದಿ ಕಾರ್ಯಕರ್ತರೊಂದಿಗೆ ತೀರ್ಥಕ್ಷೇತ್ರಕ್ಕೆ ಆಗಮಿಸಿ ರಾಜ್ಯದಲ್ಲಿ ತಲೆದೋರಿರುವ ಜಲಕ್ಷಾಮವನ್ನು ನಿವಾರಿಸುವಂತೆ ಕಾವೇರಿ ಮಾತೆಗೆ ಬೆಳ್ಳಿ ಯ ಭಾಗಿನ ಅರ್ಪಿಸಿದರು. ಹೋಳಿ ಹುಣ್ಣಿಮೆಯ ದಿನವಾದ ಇಂದು ಮಳೆ ಬರುವ ವಾಡಿಕೆ ಪ್ರಜೆಗಳೆಲ್ಲರೂ ಬಿಸಿಲಿನ ತಾಪಮಾನ ತಡೆಯಲಾಗದೆ ಆಕಾಶವನ್ನು ನೋಡುವಂತಾಗಿದ್ದು ಸಕಾಲದಲ್ಲಿ ವರುಣನ ಕೃಪೆಯಾಗಲೆಂದು ಶ್ರದ್ಧಾ ಭಾವನೆಯಿಂದ ಕಾವೇರಿ ಮಾತೆಯನ್ನು ಪೂಜಿಸಿದರು.

ಈ ಸಂದರ್ಭದಲ್ಲಿ ವಿಶೇಷ ಪೂಜೆಯಲ್ಲಿ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ ಜಿಲ್ಲಾ ಭಜರಂಗದಳದ ನವೀನ್ ಪೂಜಾರಿ ಹಾಗೂ ಮಾತೃಮಂಡಲದ ಪೂರ್ಣಿಮಾ ಸುರೇಶ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿಗಳು ಹಾಜರಿದ್ದರು.