ಸಿದ್ದಾಪುರ, ಮಾ. ೨೫: ತೋಟಗಳ ಕಾಫಿ ಗಿಡಗಳಲ್ಲಿ ಹೂ ಬಿಟ್ಟಿರುವ ಕಾರಣ ತೋಟ ಮಾಲೀಕರ ಇಚ್ಛೆಯಂತೆ ತಾ. ೨೬ ಹಾಗೂ ೨೭ ರಂದು ಹಮ್ಮಿಕೊಂಡಿದ್ದ ಕಾಡಾನೆ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ಕಾರ್ಯಾಚರಣೆ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಅರಣ್ಯ ಇಲಾಖಾ ಪ್ರಕಟಣೆ ತಿಳಿಸಿದೆ.