ಮಡಿಕೇರಿ, ಮಾ. ೨೨: ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿ ರುವ ನೀರಿನ ಸಮಸ್ಯೆ ಭವಿಷ್ಯದ ದಿನಗಳನ್ನು ಆತಂಕಕ್ಕೆ ದೂಡಿದ್ದು, ಜಿಲ್ಲೆಯ ಜನ ಈಗಾಗಲೇ ಈ ನಿಟ್ಟಿನಲ್ಲಿ ಜಾಗೃತಿಗೊಳ್ಳಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಉಂಟಾಗುತ್ತವೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆಗೆ ನಿರ್ಬಂಧ ಹಾಗೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಡಿವಾಣ ಹಾಕುವಂತೆ ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ನಿವೃತ್ತ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿ ನಲ್ಲಿ ಗಂಭೀರವಾಗಿ ನೀರಿನ ಸಮಸ್ಯೆ ತಲೆದೋರಿರುವುದಕ್ಕೆ ಕೊಡಗಿನಲ್ಲಿ ನಡೆದ ಭೂಪರಿವರ್ತನೆ ಪ್ರಮುಖ ಕಾರಣವಾಗಿದೆ. ಕೃಷಿ ಭೂಮಿಗಳು ಲೇಔಟ್‌ಗಳಲ್ಲಿ ಪರಿವರ್ತನೆಗೊಂಡು ಜಲಮೂಲಗಳು ನಶಿಸಿಹೋಗಿವೆ. ಬೇರೆ ಬೇರೆ ಉದ್ಯಮಗಳಲ್ಲಿ ಅಪಾರ ಲಾಭಗಳಿಸಿದ ಉದ್ಯಮಿಗಳು ನೂರಾರು ಎಕರೆ ಕೃಷಿ ಭೂಮಿಗಳನ್ನು ಲೇಔಟ್‌ಗಳಾಗಿ ಮಾರ್ಪಡಿಸುತ್ತಿರುವ ಪರಿಣಾಮದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ಬೆಂಗಳೂರಿಗೆ ಆದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಉದ್ಭವಿಸುವುದು ಖಚಿತ ಎಂದು ಕಳವಳ ವ್ಯಕ್ತಪಡಿಸಿದರು.

ವನ್ಯಜೀವಿ ಹಾವಳಿ ಹೆಚ್ಚಾಗು ತ್ತಿರುವುದಕ್ಕೆ ರಿಯಲ್ ಎಸ್ಟೇಟ್ ಕೂಡ ಕಾರಣವಾಗಿದೆ. ಈ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳು ಲೇಔಟ್ ಮಾಡುವು ದನ್ನು ಸ್ಥಗಿತಗೊಳಿಸಿ ಕೊಡಗಿನ ಉಳಿವಿಗೆ ಕೈಜೋಡಿಸಬೇಕು. ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಗೊಳಿಸದಂತೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿ ಸಕರಾತ್ಮಕ ಸ್ಪಂದನ ನೀಡಿದ್ದಾರೆ. ಅದೇ ರೀತಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೂ ವಿಷಯ ತಿಳಿಸಲಾಗಿದೆ. ವಿವಿಧ ಗ್ರಾ.ಪಂ.ಗಳಿಗೆ ಈ ಸಂಬAಧ ಮನವಿ ಮಾಡಿ ಗ್ರಾ.ಪಂ. ಮಟ್ಟದಲ್ಲಿ ಅನುಮತಿ ನೀಡದಂತೆ ಮನವರಿಕೆ ಮಾಡಲಾ ಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಹಲವೆಡೆ ಭೂ ಪರಿವರ್ತನೆ ಮಾಡದೆ ಅಕ್ರಮವಾಗಿ ಬಡಾವಣೆ, ಐಷಾರಾಮಿ ರೆಸಾರ್ಟ್ ಗಳನ್ನು ನಿರ್ಮಿಸಲಾಗಿದೆ. ಇದು ಕಾನೂನಿನ ಉಲ್ಲಂಘನೆ ಎಂದು ಆರೋಪಿಸಿದ ಮುತ್ತಣ್ಣ ಅವರು, ಕಾವೇರಿ ಉಳಿವಿಗೆ ಎಲ್ಲಾ ಜನಾಂಗ, ಸಂಘಟನೆಗಳು ಪರಸ್ಪರ ಭಿನ್ನಾಭಿ ಉದ್ದೇಶಕ್ಕೆ ಭೂಪರಿವರ್ತನೆ ಗೊಳಿಸದಂತೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿ ಸಕರಾತ್ಮಕ ಸ್ಪಂದನ ನೀಡಿದ್ದಾರೆ. ಅದೇ ರೀತಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೂ ವಿಷಯ ತಿಳಿಸಲಾಗಿದೆ. ವಿವಿಧ ಗ್ರಾ.ಪಂ.ಗಳಿಗೆ ಈ ಸಂಬAಧ ಮನವಿ ಮಾಡಿ ಗ್ರಾ.ಪಂ. ಮಟ್ಟದಲ್ಲಿ ಅನುಮತಿ ನೀಡದಂತೆ ಮನವರಿಕೆ ಮಾಡಲಾ ಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಹಲವೆಡೆ ಭೂ ಪರಿವರ್ತನೆ ಮಾಡದೆ ಅಕ್ರಮವಾಗಿ ಬಡಾವಣೆ, ಐಷಾರಾಮಿ ರೆಸಾರ್ಟ್ ಗಳನ್ನು ನಿರ್ಮಿಸಲಾಗಿದೆ. ಇದು ಕಾನೂನಿನ ಉಲ್ಲಂಘನೆ ಎಂದು ಆರೋಪಿಸಿದ ಮುತ್ತಣ್ಣ ಅವರು, ಕಾವೇರಿ ಉಳಿವಿಗೆ ಎಲ್ಲಾ ಜನಾಂಗ, ಸಂಘಟನೆಗಳು ಪರಸ್ಪರ ಭಿನ್ನಾಭಿ ಪ್ರಾಯಗಳನ್ನು ಬದಿಗೊತ್ತಿ ಜಿಲ್ಲೆಯ ಹಿತ ಕಾಯಲು ಒಂದಾಗಬೇಕು ಎಂದು ಕರೆ ನೀಡಿದರು.

ಮೋದೂರು ಶಿವಶಂಕರ್ ಮಾತನಾಡಿ, ತೋಡು ಒತ್ತುವರಿ ಮಾಡಿದ ಪರಿಣಾಮ ಜಲಮೂಲಕ್ಕೆ ಧಕ್ಕೆ ಬಂದಿದೆ. ಗದ್ದೆಗಳು ಸೈಟಾಗಿ ಪರಿವರ್ತನೆಗೊಂಡಿವೆ. ಇನ್ನಾದರೂ ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.

ಗೋಪಿನಾಥ್ ತಿಮ್ಮಯ್ಯ ಮಾತನಾಡಿ, ಹಣಬಲದಿಂದ ಕೆಲವರು ಅಕ್ರಮವಾಗಿ ಭೂಪರಿವರ್ತನೆಗೆ ಮುಂದಾಗಿದ್ದಾರೆ. ಕೊಡಗಿನಲ್ಲಿ ತಾಪಮಾನ ಹೆಚ್ಚಾಗಲು ಪರಿಸರ ನಾಶ ಮೂಲ ಕಾರಣ. ಉತ್ತಮ ವಾತಾವರಣ ಹೊಂದಿದ್ದ ಜಿಲ್ಲೆ ಇಂದು ನೈಜತೆ ಕಳೆದುಕೊಂಡಿದೆ.

ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಶಾಮ್ ಬೋಪಣ್ಣ ಹಾಜರಿದ್ದರು.