ಶ್ರೀಮಂಗಲ, ಮಾ. ೨೨: ಲೋಕಸಭಾ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಗುಡ್ಡಗಾಡು ಕೊಡಗು ಜಿಲ್ಲೆಯ ಹಿತಾಸಕ್ತಿ ಕಾಪಾಡುವ ಹಾಗೂ ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಪ್ರಣಾಳಿಕೆಯಲ್ಲಿ ಯಾವ ಕಾರ್ಯಯೋಜನೆ ಇಟ್ಟು ಕೊಂಡಿದ್ದಾರೆ ಹಾಗೂ ಕೊಡಗಿನ ಬಗ್ಗೆ ಅವರ ದೃಷ್ಟಿಕೋನ ಏನೆಂಬುದನ್ನು ಚುನಾವಣಾ ಪೂರ್ವ ದಲ್ಲಿಯೇ ಸ್ಪಷ್ಟಪಡಿಸಬೇಕೆಂದು ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರು ಒತ್ತಾಯಿಸಿದ್ದಾರೆ.
ಬಿ. ಶೆಟ್ಟಿಗೇರಿಯಲ್ಲಿ ನಡೆದ ಸಂಘಟನೆಯ ಸಮಾಲೋಚನಾ ಸಭೆಯಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಅಭ್ಯರ್ಥಿಗಳು, ಸಂಭಾವ್ಯ ಅಭ್ಯರ್ಥಿಗಳು ಹೇಳುತ್ತಾರೆ. ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಪರಿಕಲ್ಪನೆಯನ್ನು ಸ್ಪಷ್ಟಪಡಿಸಬೇಕೆಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳು ಬರಗಾಲ ಹಿನ್ನೆಲೆ ನದಿ ಹಾಗೂ ನದಿ ಮೂಲಗಳಿಂದ ರೈತರು ಕೃಷಿ ಹಾಗೂ ಕಾಫಿ ತೋಟಕ್ಕೆ ನೀರು ಬಳಸದಂತೆ ನಿರ್ಬಂಧದ ಆದೇಶ ಮಾಡುತ್ತಾರೆ.
ಆದರೆ ಇಡೀ ತಮಿಳುನಾಡುವರೆಗೆ, ರಾಜ್ಯದ ಬೆಂಗಳೂರು-ಮೈಸೂರು ನಗರ, ಇತರ ಜಿಲ್ಲೆಗಳಿಗೆ ನೀರು ಒದಗಿಸುವ ಕಾವೇರಿ ಲಕ್ಷö್ಮಣ ತೀರ್ಥ ಸೇರಿದಂತೆ ಹಲವು ನದಿಗಳು ಜಿಲ್ಲೆಯಲ್ಲಿ ಹುಟ್ಟಿದ್ದು. ಈ ನದಿಯಲ್ಲಿ ಬೇಸಿಗೆಯಲ್ಲಿ ಕೆಲ ತಿಂಗಳು ಮಾತ್ರ ಜಿಲ್ಲೆಯ ರೈತರು ಕೃಷಿಗೆ ನೀರು ಬಳಸುತ್ತಾರೆ. ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಮತ್ತು ತೋಟಗಳಿಗೆ ನೀರು ಬಳಕೆಗೆ ಶಾಶ್ವತ ಮಾರ್ಗೋ ಪಾಯಗಳೇನು ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಪ್ರತಿನಿತ್ಯ ಪ್ರವಾಸಿಗರು ಆಗಮಿಸುತ್ತಿದ್ದು, ನದಿ ನೀರು ಸೇರಿದಂತೆ ನೀರಿನ ಬಳಕೆ ಅತಿ ಹೆಚ್ಚು ಪೋಲಾಗುತ್ತಿದೆ. ಇದರಿಂದಲೂ ಸಹ ನೀರಿನ ಕೊರತೆ ಉಂಟಾಗುತ್ತದೆ. ಕೃಷಿ ರಂಗದ ಮೇಲೆ ನೀರಿನ ಬಳಕೆಗೆ ನಿಷೇಧ ಹೇರುವ ಸರಕಾರ ಪ್ರವಾಸೋದ್ಯಮದ ಒತ್ತಡದಿಂದಲೂ ನೀರಿನ ಅಭಾವ ಕಾಡುವಂತಾಗಿದೆ ಎಂಬುದನ್ನು ಅರಿಯಬೇಕು.
ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಾವು ಗೆದ್ದ ನಂತರ ಜಿಲ್ಲೆಯಲ್ಲಿ ನೀರಿನ ಕೊರತೆ ಕಾಡದಂತೆ ಯಾವ ಕ್ರಮವನ್ನು ಕೈಗೊಳ್ಳುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಕೃಷಿಕರು ೧೦ಹೆಚ್ಪಿ ವರೆಗೆ ಪಂಪ್ಸೆಟ್ ಬಳಕೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಆದರೆ ಇದುವರೆಗೆ ಜಿಲ್ಲೆಯ ಕೃಷಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಮಲತಾಯಿ ಧೋರಣೆಯನ್ನು ಸರಿಪಡಿಸಿ ಸೌಲಭ್ಯವನ್ನು ಖಾಯಂ ನೀಡಬೇಕು.
ಅರಣ್ಯದಿಂದ ಕಾಡಾನೆಗಳು, ಹುಲಿಗಳು ಗ್ರಾಮಗಳಿಗೆ ನುಗ್ಗಿ ಕೃಷಿ ನಷ್ಟ ಹಾಗೂ ಜಾನುವಾರು ಮಾನವರಿಗೂ ಸಹ ಪ್ರಾಣ ಹಾನಿಯಾಗುತ್ತಿರುವ ಬಹಳಷ್ಟು ಆತಂಕ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿಮ್ಮ ನಿಲುವೇನು ಎಂದು ಸ್ಪಷ್ಟಪಡಿಸಲು ಒತ್ತಾಯಿಸಿದರು.
ಜಬ್ಭೂಮಿ ಸಂಘಟನೆಯ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಜಮ್ಮಡ ಗಣೇಶ್ ಅಯ್ಯಣ್ಣ, ಪಾಲೇಂಗಡ ಅಮೀತ್ ಭೀಮಯ್ಯ, ಶಾಂತೇಯAಡ ನಿರನ್ ನಾಚಪ್ಪ, ಮಾಳೇಟೀರ ಅಜೀತ್ ಪೂವಣ್ಣ, ಪೆಮ್ಮಂಡ ಸಚಿನ್ ಅಪ್ಪಣ್ಣ, ಮಲ್ಲಪನೆರ ವಿನು ಚಿಣ್ಣಪ್ಪ, ಮಾಚಂಗಡ ಸಚಿನ್, ಪೋಕಚಂಡ ಗಣಪತಿ, ಉಳುವಂಗಡ ಲೋಹಿತ್ ಭೀಮಯ್ಯ, ಗುಡಿಯಂಗಡ ಲಿಖಿತ್, ಮೂಡೇರ ರಾಯ್ ಕಾಳಯ್ಯ, ಚೊಟ್ಟೆಯಂಡ ಸಂಜು, ಕಿರಿಯಮಾಡ ಮಿಲನ್, ಮತ್ತಿತರರು ಹಾಜರಿದ್ದರು.ಆಗ್ರಹಿಸಿದರು.
ನೀರಿನ ಅಭಾವ ಉಂಟಾಗಲು ನೀರಿನ ಮೂಲಗಳಾದ ಭತ್ತದ ಗದ್ದೆಗಳನ್ನು ಹಾಗೂ ತೋಟಗಳನ್ನು ಭೂಪರಿವರ್ತನೆ ಮಾಡಿರುವುದು ಹಾಗೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಮರ ಹನನವಾಗಿರುವುದು ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ನೀರಿನ ಅಭಾವಕ್ಕೆ ಮಾರಕ ಯೋಜನೆಗಳನ್ನು ತಡೆಯುವ, ಕೃಷಿಯೇತರ ಉದ್ದೇಶಕ್ಕೆ ವ್ಯಾಪಕವಾಗಿ ಭೂಪರಿವರ್ತನೆ ಆಗಿರುವ, ಆಗುವ ಕೃಷಿ ಭೂಮಿಯ ರಕ್ಷಣೆ ಕಾನೂನು ರೂಪಿಸುವ ಹಾಗೂ ಪಾಳುಬಿಟ್ಟಿರುವ ಭತ್ತದ ಭೂಮಿ ಮರುಕೃಷಿಗೆ ಉತ್ತೇಜನಕ್ಕೆ ಯಾವ ರೀತಿಯಲ್ಲಿ ಅಭ್ಯರ್ಥಿಗಳು ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬುದನ್ನು ವಿವರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಪರಿಸರ ಸ್ನೇಹಿಯಾದ ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿಪಡಿಸಬೇಕು, ಕೊಡಗು ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಯಾವ ರೀತಿಯಲ್ಲಿ ರೂಪಿಸಬೇಕು ಎಂಬ ಪರಿಕಲ್ಪನೆ ಇದೆಯೇ? ಕೊಡಗು ಜಿಲ್ಲೆಯ ಬಹುತೇಕ ಜನರು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿಲ್ಲ.
ಇಲ್ಲಿನ ಬಹುಪಾಲು ಜನರು ಕೃಷಿ ಹಾಗೂ ತೋಟಗಾರಿಕೆಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಕೃಷಿ ಹಾಗೂ ತೋಟಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯಾವ ರೀತಿಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದೀರಿ ಎಂಬುದನ್ನು ಸಹ ಸ್ಪಷ್ಟಪಡಿಸಲು ಕೋರಿದರು.
ರಾಜ್ಯದ ಇತರ ಜಿಲ್ಲೆಗಳಲ್ಲಿ