*ಸಿದ್ದಾಪುರ, ಮಾ. ೧೯ : ಕಾಡಾನೆಗಳು ನೀರು ಮತ್ತು ಆಹಾರ ಅರಸುತ್ತಾ ಗ್ರಾಮಗಳೆಡೆಗೆ ಲಗ್ಗೆ ಇಡುತ್ತಿವೆ. ಬೆಟ್ಟದಕಾಡು, ಅಭ್ಯತ್‌ಮಂಗಲ, ಒಂಟಿಯAಗಡಿ ಭಾಗದಲ್ಲಿ

ಕಾಡಾನೆಗಳ ಉಪಟಳ ಮಿತಿ ಮೀರಿದೆ.

ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದಲ್ಲಿ ಸುಮಾರು ನಾಲ್ಕು ಕಾಡಾನೆಗಳು ಸಂಚರಿಸುತ್ತಿದ್ದು, ತೋಟಗಳಿಗೆ ಹಾನಿ ಉಂಟುಮಾಡಿವೆ. ಸ್ಥಳೀಯ ಬೆಳೆಗಾರ ಮುಟ್ಲುಮನೆ ರಮೇಶ್ ಅವರಿಗೆ ಸೇರಿದ ಅಡಿಕೆ ಕೃಷಿಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ ವನ್ಯಜೀವಿಗಳ ದಾಳಿ ತಡೆಗೆ ವೈಜ್ಞಾನಿಕ ರೂಪದಲ್ಲಿ ಶಾಶ್ವತ ಯೋಜನೆ ರೂಪಿಸಬೇಕು ಮತ್ತು ತಮಗಾದ ನಷ್ಟವನ್ನು ಭರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಭ್ಯತ್‌ಮಂಗಲ-ಒAಟಿಯAಗಡಿ ವ್ಯಾಪ್ತಿಯಲ್ಲೂ ಕಾಫಿ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿವೆ. ಅಪಾರ ನಷ್ಟ ಉಂಟಾಗಿದ್ದು, ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

- ಅಂಚೆಮನೆ ಸುಧಿ