ಮಡಿಕೇರಿ, ಮಾ. ೧೯: ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ.೨೨ ರಿಂದ ೨೬ರವ ರೆಗೆ ನಡೆಯಲಿದೆ.

ಉತ್ಸವದ ಅಂಗ ವಾಗಿ ತಾ.೨೨ ರಂದು ಬೆಳಿಗ್ಗೆ ೧೦ ಗಂಟೆಯಿAದ ಗಣಪತಿ ಹೋಮ, ಮಹಾಪೂಜೆ, ಸಂಜೆ ಆರು ಗಂಟೆಗೆ ಪ್ರಾರ್ಥನೆ, ತಕ್ಕರ ಮನೆಯಿಂದ ಭಂಡಾರ ತೆಗೆದುಕೊಂಡು ಬರುವುದು, ಅಂದಿಬೆಳಕು, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ತಾ.೨೩ರಂದು ಬೆಳಗ್ಗೆ ೬ ಗಂಟೆಗೆ ದೇವರು ಬಲಿ ಬರುವುದು, ಮಹಾಪೂಜೆ. ಸಂಜೆ ೬ ಗಂಟೆಗೆ ದೇವರು ಬಲಿಬರುವುದು, ಅಂದಿಬೆಳಕು, ಮಹಾಪೂಜೆ, ನಂತರ ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿಪಾಡುವುದು ಕಾರ್ಯಕ್ರಮಗಳು ಜರುಗಲಿದೆ.

ತಾ.೨೪ರಂದು ಬೆಳಿಗ್ಗೆ ೬ ಗಂಟೆಗೆ ದೇವರು ಬಲಿ ಬರುವುದು, ಅಯ್ಯಪ್ಪ ದೇವರ ಪೂಜೆ, ಮಹಾಪೂಜೆ, ಸಂಜೆ ೬ ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಪ್ರಸಾದ ವಿತರಣೆ ನಡೆಯಲಿದೆ.

ತಾ.೨೫ರಂದು ಪಟ್ಟಣಿ, ಬೆಳಿಗ್ಗೆ ೬ ಗಂಟೆಗೆ ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ ಮುಡಿ ತರುವುದು, ಶ್ರೀ ಅಯ್ಯಪ್ಪ ದೇವರ ಭಂಡಾರ ತರುವುದು, ಶ್ರೀ ಕುಟ್ಟಿಚಾತ ದೇವರ ಎಡೆಮಡಗುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುದು, ತೆಂಗೆಪೋರು, ಮಹಾಪೂಜೆ, ಅನ್ನ ಸಂತರ್ಪಣೆ, ಶ್ರೀ ದೇವರ ನೆರಪು ಬಲಿ, ಶ್ರೀ ಪರದೇವರ, ಅಯ್ಯಪ್ಪ ದೇವರ, ಕುಟ್ಟಿ ಚಾತ ದೇವರ ಕೋಲ ನಡೆಯಲಿದೆ.

ತಾ.೨೬ರ ಸಂಜೆ ನಾಲ್ಕು ಗಂಟೆಗೆ ಬೆಳಕು, ಶ್ರೀ ದೇವರ ಬಲಿ, ದೇವರ ಜಳಕ ಕಾರ್ಯ, ನಂತರ ಮೆಟ್ಟಿಲು ಪೂಜೆ, ನೃತ್ಯ ಬಲಿ, ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.