ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತಿದ್ದು, ನದಿ - ತೊರೆಗಳು ಬಿಸಿಲ ಧಗೆಗೆ ಬತ್ತಿಹೋಗು ತ್ತಿವೆ. ಪ್ರಾಣಿ-ಪಕ್ಷಿ ಸಂಕುಲಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮಾರ್ಚ್ನಲ್ಲಿ ವಾಡಿಕೆ ಮಳೆಯಾಗಲಿಲ್ಲ. ಗಿಡಗಂಟಿಗಳು ಒಣಗಿ ಪ್ರಾಣಿ - ಪಕ್ಷಿಗಳಿಗೆ ಮೇವು ಹಾಗೂ ನೀರಿನ ಕೊರತೆ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರ್ಚ್ ೨೦ ವಿಶ್ವ ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತಿದೆ. ಹಲವು ಬಗೆಯ ಗುಬ್ಬಚ್ಚಿಗಳು ನಮ್ಮ ಕಣ್ಣಮುಂದೆ ಕಾಣಬರುತ್ತಿವೆ. ಪುಟ್ಟ ಹಕ್ಕಿಯ ಪ್ರಬೇಧಕ್ಕೆ ಸೇರಿದ ಗುಬ್ಬಚ್ಚಿಯ ಗುಂಪೊAದು ಚಿಲಿಪಿಲಿ ಹಾಡುತ್ತಾ ಸ್ವಚ್ಛಂದವಾಗಿ ಪ್ರಕೃತಿಯ ಮಡಿಲಲ್ಲಿ ಹಾರಾಡುತ್ತಾ ಇರುತ್ತದೆೆÉ. ಅದೇ ನಯವಾದ ದುಂಡಗಿನ ತಲೆಯ ದುಂಡಾದ ರೆಕ್ಕೆಯನ್ನು ಹೊಂದಿರುವ ಹಕ್ಕಿ. ಮನೆಯ ಮೂಲೆಯಲ್ಲೋ, ಪಟ್ಟಣದ ಕಟ್ಟಡಗಳ ಮೇಲೇ ಗೂಡು ಕಟ್ಟಿ ಬದುಕುಕಟ್ಟಿಕೊಳ್ಳುವ ಹಕ್ಕಿಯೇ ಈ ಗುಬ್ಬಚ್ಚಿ. ಪ್ರಕೃತಿ ಸೌಂದರ್ಯವೆನ್ನುವ ಮೂಲೆಗುಂಪು ಮಾಡಿದ ತಾಂತ್ರಿಕತೆ, ಅತಿಯಾದ ಕೀಟ ನಾಶಕಗಳ ಬಳಕೆ, ವಾಸ ಸ್ಥಾನದ ಕೊರತೆ ಹೀಗೆ ಹತ್ತು ಹಲವು ಕಾರಣಗಳಿಂದ ಗುಬ್ಬಚ್ಚಿಗಳ ಸಂತತಿ ಅಳಿವಿನ ಅಂಚಿಗೆ ತಲುಪಿದೆ. ಬೇಸಿಗೆಯ ಸಮಯದಲ್ಲಿ ದಣಿದ ಹಕ್ಕಿಗಳಿಗೆ ನೀರು, ಧಾನ್ಯವನ್ನು ಇಟ್ಟು, ತಿಂದುAಡು ನೀರಲೆಲ್ಲ ಮಿಂದಾ ಡುವ ಪುಟ್ಟ ಗುಬ್ಬಚ್ಚಿಯನ್ನು ಕಂಡು ಸಂತೋಷಪಡುವ ಮಾಯಮುಡಿಯ ಕಾಫಿ ಬೆಳೆಗಾರ ಅಪ್ಪನೆರವಂಡ ವಿನು ಕುಂಞಪ್ಪ ಅವರ ಗುಬ್ಬಚ್ಚಿ ಪ್ರೇಮದ ಬಗೆಗಿನ ವಿಶ್ವ ಗುಬ್ಬಚ್ಚಿಯ ದಿನದ ವಿಶೇಷ ಲೇಖನ.
ಪ್ರತಿ ವರ್ಷ ಬೇಸಿಗೆಯ ಉರಿಬಿಸಿಲು ಆವರಿಸುತ್ತಿದ್ದಂತೆ ಗುಬ್ಬಚ್ಚಿಗಳು ಹಾರಾಡುವ ಕಾಫಿ ತೋಟದ ಸುತ್ತಲೂ ಸಿಮೆಂಟ್ ಹಾಗೂ ಪ್ಲಾಸ್ಟಿಕ್ನ ಹಲವು ಬಟ್ಟಲನ್ನಿಟ್ಟು ನಿತ್ಯವೂ ಶುಚಿಗೊಳಿಸಿ ನೀರು ತುಂಬಿಡಲಾಗುತ್ತದೆ. ಬೆಳಗಿನ ಜಾವ ಹಾಗೂ ಸಂಜೆಯಾಗುತ್ತಲೇ ಗುಬ್ಬಚ್ಚಿಗಳಲ್ಲದೆ ವಿವಿಧ ಬಗೆಯ ವಲಸೆ ಹಕ್ಕಿಗಳು ನೀರಿನ ಬಟ್ಟಲಲ್ಲಿ ಕುಳಿತು ನೀರು ಕುಡಿದು ಹಾಡಿ ನಲಿಯುತ್ತಾ ಮಿಂದು ಮೈಯನ್ನೆಲ್ಲ ತಂಪಾಗಿಸಿ ಕೊಳ್ಳುತ್ತಾ ಹಾರಿ ಹೋಗುವುದನ್ನು ನೋಡುವುದೇ ಸಂತೋಷದಾಯಕ ಎನ್ನುತ್ತಾರೆ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ವಿನು ಕುಂಞಪ್ಪ.
ಗುಬ್ಬಚ್ಚಿಗಳಲ್ಲದೆ ವಿವಿಧ ಬಗೆಯ ಪಕ್ಷಿ ಸಂಕುಲಗಳ ಚಲನವಲನ ವನ್ನು ತನ್ನ ಕ್ಯಾಮರಾದ ಕಣ್ಣಲ್ಲಿ ಸೆರೆಹಿಡಿಯುವ ಮೂಲಕ ಕೆಲವೊಂದನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹರಿಯಬಿಟ್ಟು ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರುಣಿಸಿ ಎಂಬ ಸಂದೇಶ ವನ್ನು ಸಾರುವ ಮೂಲಕ ಸಮಾಜಕ್ಕೊಂದು ಮಾದರಿ ಯಾಗಿದ್ದಾರೆ.
- ಪುತ್ತರಿರ ಕರುಣ್ ಕಾಳಯ್ಯ