ಮಡಿಕೇರಿ, ಮಾ. ೧೬: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರುಗಳ ನೇಮಕಾತಿಯಾಗಿದೆ. ಕೊಡವ ಅಕಾಡೆಮಿ ಅಧ್ಯಕ್ಷರಾಗಿ ಪೂಮಾಲೆ ಕೊಡವ ವಾರಪತ್ರಿಕೆಯ ಸಂಪಾದಕರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ವರಾದ ಸದಾನಂದ ಮಾವಾಜಿ ಅವರು ಗಳನ್ನು ಸರಕಾರ ನೇಮಕ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಇಂದು ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಕೊಡವ ಅಕಾಡೆಮಿಗೆ ಸಂಬAಧಿಸಿದAತೆ ಯಾವುದೇ ಸದಸ್ಯರ ಹೆಸರನ್ನು ಸರಕಾರ ಇನ್ನೂ ಪ್ರಕಟಿಸಿಲ್ಲ. ಅರೆಭಾಷೆ ಅಕಾಡೆಮಿಗೂ ಸಹ ಕೊಡಗು ಜಿಲ್ಲೆಯಿಂದ ಯಾರನ್ನೂ ಸದಸ್ಯರಾಗಿ ಇನ್ನೂ ನೇಮಕ ಮಾಡಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆರು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲೆಯ ಸದಸ್ಯರ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ. ಇದೀಗ ಸದಾನಂದ ಮಾವಾಜಿ ಅಧ್ಯಕ್ಷತೆಯ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಾದ ಪರಪ್ಪು ಚಂದ್ರಶೇಖರ ಪೇರಾಲು ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ ಲತಾ ಕುದುಪಾಜೆ, ಪಿ.ಎಸ್. ಕಾರ್ಯಪ್ಪ ಹಾಗೂ ಡಾ|| ನಿಡ್ಯಮಲೆ ಎ. ಜ್ಞಾನೇಶ್ ಅವರುಗಳನ್ನು ಸದಸ್ಯರುಗಳನ್ನಾಗಿ ಪ್ರಕಟಿಸಲಾಗಿದೆ.

ಮಹೇಶ್ ಪ್ರತಿಕ್ರಿಯೆ

ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು ಉತ್ತಮ ಕೆಲಸ ಕಾರ್ಯಗಳೊಂದಿಗೆ ಅಕಾಡೆಮಿಯನ್ನು ದೇಶದಲ್ಲಿ ಉನ್ನತ ಮಟ್ಟದ ಹೆಸರಿಗೆ ಕೊಂಡೊ ಯ್ಯುವುದು ತಮ್ಮ ಅಭಿಲಾಷೆಯಾಗಿದೆ. ಈ ನಿಟ್ಟಿನಲ್ಲಿ ಸರ್ವರ ಸಹಕಾರವನ್ನು ಬಯಸುವುದಾಗಿ ಹೇಳಿದ್ದಾರೆ.

(ಮೊದಲ ಪುಟದಿಂದ)

ಸದಾನAದ ಮಾವಾಜಿ ನುಡಿ : ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಅಭಿಪ್ರಾಯ ವ್ಯಕ್ತಪಡಿಸಿ ತಾವು ಈ ಹಿಂದೆಯೂ ಸದಸ್ಯರಾಗಿದ್ದು ಇದೀಗ ಅಧ್ಯಕ್ಷ ಸ್ಥಾನ ದೊರೆತಿದೆ. ತಮ್ಮ ಅವಧಿಯಲ್ಲಿ ಭಾಷೆ-ಸಾಹಿತ್ಯವನ್ನು ಬೆಳೆಸಲು, ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುವುದಾಗಿ ಹೇಳಿದರು. ಕೊಡಗಿಗೆ ಸಂಬAಧಿಸಿದAತೆ ಸದ್ಯದಲ್ಲಿ ಸದಸ್ಯರ ಆಯ್ಕೆ ಪ್ರಕಟವಾಗಲಿದ್ದು ತಮ್ಮ ತಂಡ ಉತ್ತಮವಾಗಿದೆ ಎಂದು ಅವರು ಹೇಳಿದರು.