ಟಿ ಹಲವರ ವಿಚಾರಣೆ
ಟಿ ತನಿಖೆ ಬಿರುಸು
ಮಡಿಕೇರಿ, ಮಾ. ೧೬: ಮಡಿಕೇರಿ ಅರಣ್ಯ ವಿಭಾಗದ ಮುಕ್ಕೋಡ್ಲು ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಮರ ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ತೋಟವೊಂದರಲ್ಲಿ ಸುಮಾರು ೨೨ ನಂದಿ ಮರಗಳನ್ನು ಕಡಿಯಲಾಗಿದೆ ಎನ್ನಲಾಗಿದ್ದು ಅರಣ್ಯ ಇಲಾಖೆ ಮರವನ್ನು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿನ ಎನ್. ತಿಮ್ಮಯ್ಯ ಎಂಬವರಿಗೆ ಸೇರಿದ ತೋಟ ಇದೆನ್ನಲಾಗಿದೆ. ಮಾಲೀಕರಾದ ತಿಮ್ಯಯ್ಯ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು ಇದೀಗ ಅನಧಿಕೃತವಾಗಿ ಮರ ಕಡಿದಿರುವ ಹಿನ್ನೆಲೆಯಲ್ಲಿ ಅವರೂ ಸೇರಿದಂತೆ ಕೆಲವರನ್ನು ಅರಣ್ಯ ಇಲಾಖೆ ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಡಿ.ಸಿ.ಎಫ್. ಭಾಸ್ಕರ್ ಅವರು ಮರ ಕಡಿದಿರುವುದು ನಿಜ, ತೋಟ ಮಾಲೀಕರು ಬೆಂಗಳೂರಿ ನಲ್ಲಿರುವುದರಿಂದ ಇದರಲ್ಲಿ ಅವರ ಪಾತ್ರವಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಮಡಿಕೇರಿ ಎ.ಸಿ.ಎಫ್. ಅವgರನ್ನು ತನಿಖಾಧಿ ಕಾರಿಯಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.