ಮಡಿಕೇರಿ, ಮಾ. ೧೬: ಕರ್ನಾಟಕದ ಜೀವನದಿ ಕಾವೇರಿಯ ಒಡಲಿನಲ್ಲಿ ಎಸೆಯಲ್ಪಡುವ ಮಾಲಿನ್ಯ ವಸ್ತುಗಳು ಪ್ಲಾಸ್ಟಿಕ್ ಪದಾರ್ಥಗಳು ಪಾವಿತ್ರö್ಯವನ್ನು ಹಾಳು ಮಾಡುತ್ತಿವೆ. ಶುದ್ಧ ಜಲವನ್ನು ಮಲಿನಗೊಳಿಸುತ್ತಿವೆ. ಇದನ್ನು ತÀಡೆಯಲು ಭವಿಷ್ಯತ್ತಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಪ್ರಯತ್ನ ನಡೆಸುವೆ ಎಂದು ರಾಜವಂಶಸ್ಥ ಹಾಗೂ ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಮುಕ್ತ ನುಡಿಯಾಡಿದರು.

‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.

ಮಡಿಕೇರಿ, ಮಾ. ೧೬: ಕರ್ನಾಟಕದ ಜೀವನದಿ ಕಾವೇರಿಯ ಒಡಲಿನಲ್ಲಿ ಎಸೆಯಲ್ಪಡುವ ಮಾಲಿನ್ಯ ವಸ್ತುಗಳು ಪ್ಲಾಸ್ಟಿಕ್ ಪದಾರ್ಥಗಳು ಪಾವಿತ್ರö್ಯವನ್ನು ಹಾಳು ಮಾಡುತ್ತಿವೆ. ಶುದ್ಧ ಜಲವನ್ನು ಮಲಿನಗೊಳಿಸುತ್ತಿವೆ. ಇದನ್ನು ತÀಡೆಯಲು ಭವಿಷ್ಯತ್ತಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಪ್ರಯತ್ನ ನಡೆಸುವೆ ಎಂದು ರಾಜವಂಶಸ್ಥ ಹಾಗೂ ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಮುಕ್ತ ನುಡಿಯಾಡಿದರು.

‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.

ಪ್ರವಾಸೋದ್ಯಮವೇ ಬೆಳವಣಿಗೆಯಲ್ಲಿದ್ದು, ಇದಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದರು. ಉದಾ ಹರಣೆಗೆ ನಾಗರ ಹೊಳೆ ಅಭಯಾರಣ್ಯ ಪ್ರದೇಶ, ಬಂಡಿಪುರ, ಕೊಡಗಿನ ದುಬಾರೆ ಇತ್ಯಾದಿ ಪ್ರದೇಶಗಳು ಪರಿಸರ ಮತ್ತು ವನ್ಯ ಪ್ರಾಣಿಗಳ ಸಹಜೀವನದೊಂದಿಗೆ ಪ್ರವಾಸಿಗರ ಮನ ಸೆಳೆದಿವೆ. ಹೀಗಿರುವಾಗ ವನ್ಯಜೀವಿಗಳ ಮತ್ತು ವನ್ಯಪ್ರದೇಶಗಳ ಅಸ್ತಿತ್ವವನ್ನು ಉಳಿಸಿಕೊಂಡು ಪ್ರವಾಸೋದ್ಯಮವನ್ನು ಮುನ್ನಡೆಸಬೇಕಾಗಿದೆ ಎಂದರು. ಅದೇ ರೀತಿ ಕೊಡಗಿನಲ್ಲಿ ಗಂಭೀರವಾಗಿರುವ ಆನೆ-ಮಾನವ ಸಂಘರ್ಷವನ್ನು ನಿಯಂತ್ರಿಸಲು ಕೂಡ ಅಗತ್ಯ ಕ್ರಮಕೈಗೊಳ್ಳುವಲ್ಲಿ ತನಗೆ ಆಸಕ್ತಿ ಇದೆ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ಜಿಲ್ಲಾಮಟ್ಟದ ಆಸ್ಪತ್ರೆ ನಿರ್ವಹಿಸಲ್ಪಡುತ್ತಿದ್ದರೂ ಹೃದ್ರೋಗ ಚಿಕಿತ್ಸಾ ವಿಭಾಗ ಇಲ್ಲದಿರುವ ಕುರಿತು ಅವರ ಗಮನಕ್ಕೆ ತರಲಾಯಿತು. ಅಲ್ಲದೆ ಸರ್ಕಾರಿ ಅಧೀನದ ನರ್ಸಿಂಗ್ ಕಾಲೇಜಿಗೆ ಅಧಿಕ ಸಂಖ್ಯೆಯಲ್ಲಿ ಪ್ರವೇಶಾತಿ ಕಂಡು ಬಂದರೂ ಸ್ವಂತ ಕಟ್ಟಡ ಇಲ್ಲದೆ ಬವಣೆ ಪಡುತ್ತಿರುವ ಕುರಿತು ಗಮನಕ್ಕೆ ತರಲಾಯಿತು. ತಾನು ಸಂಸದನಾಗಿ ಆಯ್ಕೆಗೊಂಡರೆ ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿ ಜನತೆಯ ಸೇವೆಗೆ ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಅವರು ಭರವಸೆಯಿತ್ತರು.

ಕೊಡಗಿನಲ್ಲಿ ಜನರು ಮುಖ್ಯವಾಗಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರೀಕ್ಷಿಸುತ್ತಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದಾಗ

ಆಸ್ಪತ್ರೆ ನಿರ್ವಹಿಸಲ್ಪಡುತ್ತಿದ್ದರೂ ಹೃದ್ರೋಗ ಚಿಕಿತ್ಸಾ ವಿಭಾಗ ಇಲ್ಲದಿರುವ ಕುರಿತು ಅವರ ಗಮನಕ್ಕೆ ತರಲಾಯಿತು. ಅಲ್ಲದೆ ಸರ್ಕಾರಿ ಅಧೀನದ ನರ್ಸಿಂಗ್ ಕಾಲೇಜಿಗೆ ಅಧಿಕ ಸಂಖ್ಯೆಯಲ್ಲಿ ಪ್ರವೇಶಾತಿ ಕಂಡು ಬಂದರೂ ಸ್ವಂತ ಕಟ್ಟಡ ಇಲ್ಲದೆ ಬವಣೆ ಪಡುತ್ತಿರುವ ಕುರಿತು ಗಮನಕ್ಕೆ ತರಲಾಯಿತು. ತಾನು ಸಂಸದನಾಗಿ ಆಯ್ಕೆಗೊಂಡರೆ ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿ ಜನತೆಯ ಸೇವೆಗೆ ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಅವರು ಭರವಸೆಯಿತ್ತರು.

ಕೊಡಗಿನಲ್ಲಿ ಜನರು ಮುಖ್ಯವಾಗಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರೀಕ್ಷಿಸುತ್ತಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದಾಗ (ಮೊದಲ ಪುಟದಿಂದ) ತಾನು ಗೆದ್ದು ಬಂದರೆ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ರಾಜಕೀಯವಾಗಿ ಈ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇನೆ. ತಕ್ಷಣ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಕಾರ್ಯೋನ್ಮುಖನಾಗುತ್ತೇನೆ ಎಂದು ಭರವಸೆಯಿತ್ತರು.

ಕೊಡಗಿನ ಬೆಳೆಗಾರರ ಸಮಸ್ಯೆಗೆ ಯಾವ ರೀತಿ ಸ್ಪಂದಿಸುತ್ತೀರಿ ಎನ್ನುವ ಪ್ರಶ್ನೆಗೆ ಕೊಡಗಿನ ಕಾಫಿ, ಕರಿಮೆಣಸು ಮತ್ತು ಕಿತ್ತಳೆ ಬೆಳೆಗಳ ಬಗ್ಗೆ ಆದ್ಯ ಗಮನ ಹರಿಸಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಅವರು ಆಶ್ವಾಸನೆಯಿತ್ತರು.