ಮಡಿಕೇರಿ, ಮಾ. ೧೪: ಜಿಲ್ಲೆಯ ಗಾಳಿಬೀಡು ಸಮೀಪದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಬೋರ್ ವೆಲ್ ಕೊರೆಸಲು ದಾನಿಯೊಬ್ಬರು ರೂ.೧ ಲಕ್ಷ ದೇಣಿಗೆ ನೀಡಿದ್ದಾರೆ. ರಾಜ್ಯದಲ್ಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ನೀರಿನ ದಾಹ ಪೂರೈಸಲು ವಿದ್ಯಾಲಯದ ಆಡಳಿತ ಮಂಡಳಿಯು ಬೋರ್ ವೆಲ್ ಕೊರೆಸಲು ನಿರ್ಧರಿಸಿತ್ತು. ಇದಕ್ಕಾಗಿ ಗಾಳಿಬೀಡಿನ ಕಾಫಿ ಬೆಳೆಗಾರರಾದ ಸಜ್ಜನರಾವ್ ಚೆಟ್ಟಿ ಅವರು ಪೋಷಕ - ಶಿಕ್ಷಕ ಪರಿಷತ್ತಿನ ನಿಧಿಗೆ ರೂ.೧ ಲಕ್ಷ ದೇಣಿಗೆ ಚೆಕ್ ಮುಖಾಂತರ ನೀಡಿದರು.