ಮಡಿಕೇರಿ, ಮಾ. ೧೪: ಸೋಮವಾರಪೇಟೆ ತಾಲೂಕು ಹಿರಿಕರ ಗ್ರಾಮದ ನಿವೃತ್ತ ಶಿಕ್ಷಕ ಧರ್ಮಪ್ಪ ಹೆಚ್.ಬಿ. ಹಾಗೂ ಲತಾ ಹೆಚ್.ಡಿ. ಅವರ ಪುತ್ರಿ. ಹೆಚ್.ಡಿ. ರೋಜಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಭೂವಿಜ್ಞಾನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ದೊರಕಿದೆ. ಡಾ. ಡಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದು, ಹೈಡ್ರೋಜಿಯಾಲಜಿಕಲ್ ಸ್ಟಡೀಸ್ ಆನ್ ಸೋಮವಾರಪೇಟೆ ವಾಟರ್ ಶೆಡ್ ಕೊಡಗು ಡಿಸ್ಟಿçಕ್ಟ್ ಯು ಸಿಂಗ್ ರಿಮೋಟ್ ಸೆನ್ಸಿಂಗ್ ಆಂಡ್ ಜಿ.ಐ.ಎಸ್ ವಿಷಯದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ೧೦೪ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ಪ್ರಸ್ತುತ ಕೊಡಗು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭೂವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.