ಮಡಿಕೇರಿ, ಮಾ. ೧೪: ಮಡಿಕೇರಿ ಶಿವಂ ಡಯಾಗ್ನೊಸ್ಟಿಕ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ವೀರಾಜಪೇಟೆಯ ಡಾ.ಲವಿನ್ ಚಂಗಪ್ಪ ಪ್ರಥಮ, ಸಿದ್ದಾಪುರದ ಡಾ.ಶುಭಾ ಚಂದ್ರು ದ್ವಿತೀಯ ಬಹುಮಾನ ಹಾಗೂ ತೃತೀಯ ಬಹುಮಾನವನ್ನು ಮಡಿಕೇರಿಯ ಡಾ.ಅನುಶ್ರೀ ಪಡೆದುಕೊಂಡರು. ಸಮಾಧಾನಕರ ಬಹುಮಾನಗಳನ್ನು ಗೋಣಿಕೊಪ್ಪದ ಡಾ. ಆಶಿಕ್ ಚೆಂಗಪ್ಪ, ಮಡಿಕೇರಿಯ ಡಾ.ದಿವ್ಯ, ಡಾ.ಸೂರಜ್ ಉತ್ತಪ್ಪ ಹಾಗೂ ಸಿದ್ದಾಪುರದ ಡಾ.ಜೀವನ್ ಅವರು ಪಡೆದುಕೊಂಡರು.