ಅಧ್ಯಕ್ಷರಾಗಿ ಕೆ.ಎ.ಆದಂ ನೇಮಕ
ಸೋಮವಾರಪೇಟೆ, ಮಾ.೧೪: ಸೋಮವಾ ರಪೇಟೆ ಪಟ್ಟಣ ಪಂಚಾಯಿತಿಗೆ ಸಂಬAಧಪಟ್ಟAತೆ ಯೋಜನಾ ಪ್ರಾಧಿಕಾರ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಪಟ್ಟಣದ ರೇಂಜರ್ ಬ್ಲಾಕ್ ನಿವಾಸಿ, ಪ.ಪಂ. ಮಾಜಿ ಸದಸ್ಯ ಕೆ.ಎ. ಆದಂ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಯೋಜನಾ ಪ್ರಾಧಿಕಾರ ಇದೀಗ ರಚನೆಗೊಂಡಿದ್ದು, ಪ್ರಥಮ ಅಧ್ಯಕ್ಷರಾಗಿ, ಪ.ಪಂ ಸದಸ್ಯರಾಗಿ ಅನುಭವ ಹೊಂದಿರುವ ಕಾಂಗ್ರೆಸ್ ಮುಖಂಡ ಕೆ.ಎ. ಆದಂ ನೇಮಕಗೊಂಡಿದ್ದಾರೆ.
ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ಪ್ರಾಧಿಕಾರದ ಮೊದಲ ಅದ್ಯಕ್ಷರಾಗಿ ಕೆ. ಎ. ಆದಂ, ಸದಸ್ಯರಾಗಿ ಬಿ.ಎನ್.ಬಸವರಾಜ್, ಲೋಹಿತಾಶ್ವ, ದರ್ಶನ್ ನೇಮಕಗೊಂಡಿದ್ದಾರೆ.
ಈ ಬಗ್ಗೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.