ಮಡಿಕೇರಿ, ಮಾ. ೧೨: ಸಮರ್ಪಕ ಆರೋಗ್ಯ ಸೇವೆ ಕೊಡಗು ಜಿಲ್ಲೆಯಲ್ಲಿ ಲಭಿಸುತ್ತಿಲ್ಲ ಎಂಬ ದೂರಿನ ನಡುವೆ ಇದೀಗ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ವಿಶೇಷ ಮುತುವರ್ಜಿಯಿಂದ ಜಿಲ್ಲಾಸ್ಪತ್ರೆಗೆ ಖಾಸಗಿ ಸಹಭಾಗಿತ್ವದಡಿ ಸರಕಾರದಿಂದ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ.) ಯಂತ್ರ ಮಂಜೂರಾತಿಗೊAಡಿದ್ದು, ಶೀಘ್ರದಲ್ಲಿಯೇ ಈ ಸೇವೆ ರೋಗಿಗಳಿಗೆ ಲಭ್ಯವಾಗಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಈ ಕುರಿತು ಶಾಸಕ ಮಂತರ್ ಮನವಿ ಮಾಡಿ ಗಮನ ಸೆಳೆದ ಹಿನ್ನೆಲೆ ಸಚಿವರು ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಮಂಜೂರಾತಿಗೊಳಿಸಿದ್ದು, ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಕೂಡ ಈ ಕುರಿತು ಪ್ರಕ್ರಿಯೆ ನಡೆಸಿ ಕಾರ್ಯಾದೇಶವನ್ನು ಯಂತ್ರವನ್ನು ಖರೀದಿಸುವ ಸಂಸ್ಥೆಗೆ ನೀಡಿದೆ.

(ಮೊದಲ ಪುಟದಿಂದ) ರೂ. ೧೦.೭೦ ಕೋಟಿ ವೆಚ್ಚದ ಎಂ.ಆರ್.ಐ. ಯಂತ್ರ ಜಿಲ್ಲೆಗೆ ದೊರೆಯಲಿದೆ. ಕಾರ್ಯಾದೇಶದಲ್ಲಿ ಯಂತ್ರದ ನಿರ್ವಹಣೆ ಕುರಿತು ಕೂಡ ಉಲ್ಲೇಖಿಸಲಾಗಿದೆ. ಹಲವು ಬಾರಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳ ಗಮನ ಸೆಳೆಯುವ ಪ್ರಯತ್ನವನ್ನು ಶಾಸಕ ಮಂತರ್ ಮಾಡಿದ್ದರು.

ಪ್ರಯೋಜನವೇನು..?

ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ.) ಒಂದು ರೀತಿಯ ಸ್ಕಾö್ಯನ್ ಆಗಿದ್ದು, ಇದರಲ್ಲಿ ಶಕ್ತಿಯುತ ಮತ್ತು ನಿಯಂತ್ರಿತ ಕಾಂತೀಯ ಕ್ಷೇತ್ರಗಳು, ರೇಡಿಯೋ ತರಂಗಗಳು ಮತ್ತು ಕಂಪ್ಯೂಟರ್ ತಂತ್ರಜ್ಞಾನವು ಮಾನವ ದೇಹದ ಒಳಭಾಗದ ಹೆಚ್ಚು ವಿವರವಾದ ಚಿತ್ರಗಳನ್ನು ಉತ್ಪಾದಿಸಲು ಸಂಯೋಜಿ ಸುತ್ತದೆ. ಮೂಲಭೂತವಾಗಿ, ಇದು ನಿಮ್ಮ ದೇಹದಲ್ಲಿನ ಅಂಗಗಳು ಮತ್ತು ಅಂಗಾAಶಗಳ ವಿವರವಾxರಚಿತ ತರಂಗಗಳನ್ನು ಬಳಸುವ ವೈದ್ಯಕೀಯ ಚಿತ್ರಣ ತಂತ್ರವಾಗಿದೆ.

ಕೀಲು ಮತ್ತು ಮೂಳೆ ಸಮಸ್ಯೆ ಗುರುತಿಸಲು, ಹೃದಯರಕ್ತನಾಳದ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಗುರುತಿಸಲು, ಬೆನ್ನುಮೂಳೆಯ ಮತ್ತು ಮೆದುಳಿನ ಸಮಸ್ಯೆಗಳನ್ನು, ಗರ್ಭಾಶಯ ಮತ್ತು ಯಕೃತ್ತಿನ ಕ್ಯಾನ್ಸರ್ ಗುರುತಿಸಲು, ಬಂಜೆತನ ಚಿಕಿತ್ಸೆಗೆ ಒಳಗಾಗುವ ಮಹಿಳೆಯರಲ್ಲಿ ಗರ್ಭಾಶಯದ ವೈಪರೀತ್ಯಗಳನ್ನು ಪತ್ತೆ ಮಾಡಲು, ಮಹಿಳೆಯರಲ್ಲಿ ಶ್ರೋಣಿಯ ನೋವಿನ ಕಾರಣಗಳನ್ನು ಮೌಲ್ಯಮಾಪನ ಮಾಡಿ, ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ಗಳು, ವಿವಿಧ ಟ್ಯೂಮೊರಾಯ್ಡ್ಗಳು, ಇತರ ರೋಗಗಳನ್ನು ಪತ್ತೆಹಚ್ಚಲು ಎಂ.ಆರ್.ಐ. ಸಹಕಾರಿಯಾಗಿದೆ.