ಮಡಿಕೇರಿ, ಮಾ. ೧೨: ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಘಟಕ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಕೆಲವು ತಿಂಗಳುಗಳಿAದ ವೇತನ ಪಾವತಿಯಾಗಿಲ್ಲ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಧರ್ಮ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮನವಿ ಸಲ್ಲಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕಳೆದ ಆರು ದಿವಸಗಳಿಂದ ಮುಷ್ಕರ ನಡೆಯುತ್ತಿದೆ. ಇದರೊಂದಿಗೆ ಕೊರೊನಾ ಅವಧಿಯ ೩ ತಿಂಗಳ ವೇತನವೂ ಬಾಕಿ ಇದ್ದು, ಇದುವರೆಗೆ ಪಾವತಿಯಾಗಿರುವುದಿಲ್ಲ. ಅತಿಥಿ ಉಪನ್ಯಾಸಕರುಗಳಿಗೆ ಪಾವತಿಸುವ ವೇತನವೂ ಕನಿಷ್ಟ ಪಕ್ಷ ಪ್ರತಿ ತಿಂಗಳ ೧೦ನೇ ತಾರೀಕಿನ ಒಳಗೆ ಅವರ ಖಾತೆಗೆ ಜಮೆ ಆಗುವಂತೆ ಕ್ರಮಕೈಗೊಳ್ಳಬೇಕಾಗಿ ಸಂಘ ಮನವಿ ಮಾಡಿದೆ.
ಈ ಸಂದರ್ಭ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಮತ್ತು ಪದಾಧಿಕಾರಿಗಳು ಹಾಜರಿದ್ದರು.