ಕರಿಕೆ, ಮಾ. ೧೨: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧಿ ಪಡೆದಿರುವ ಮಂಞನಡ್ಕ ಶ್ರೀ ತುಳೂರು ವನದ ಭಗವತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಎಂಟು ದಿನಗಳ ಕಾಲ ವಿಜೃಂಭಣೆಯಿAದ ನಡೆಯಲಿದೆ.
ಕರ್ನಾಟಕ ಕೇರಳ ಗಡಿಗೆ ಹೊಂದಿಕೊAಡಿರುವ ದೇವಾಲಯವು ಕಾಟೂರು ಮನೆತನದ ಆಡಳಿತಕ್ಕೆ ಒಳಪಟ್ಟಿದೆ. ಶಿವರಾತ್ರಿ ದಿನ ಭಾಗಿಲು ತೆರೆದು, ಮಾರನೆಯ ದಿನದಿಂದ ಆರಂಭಗೊAಡ ಉತ್ಸವವು ದಿನಾಂಕ ಹದಿನಾರರಂದು ಸಮಾಪನಗೊಳ್ಳಲಿದೆ. ೧೦೧ ದೈವಗಳ ಕೋಲ ನಡೆಯಲಿದ್ದು ತಾ.೧೫ ಕ್ಕೆ ಮುನ್ನಾಯರ್ ದೇವರ ಮುಡಿ ಹಾಗೂ ಹದಿನಾರರಂದು ತುಳೂರ್ ಭಗವತಿ ಹಾಗೂ ಕ್ಷೇತ್ರ ಪಾಲನ ಮುಡಿಗಳು ಭಕ್ತರಿಗೆ ದರ್ಶನ ನೀಡಲಿವೆ. ಕೇರಳದ ಕಣ್ಣನೂರು, ಕಾಸರಗೋಡು ಜಿಲ್ಲೆ, ದ.ಕ. ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕರಿಕೆ ಗ್ರಾಮಕ್ಕೆ ಧಾರ್ಮಿಕ ನಂಟು ಇರುವ ಈ ಕ್ಷೇತ್ರದ ಕ್ಕೆ ಸಾವಿರಾರು ಭಕ್ತರು ಭೇಟಿ ನೀಡಲಿದ್ದು, ಒಂದುವಾರಗಳ ಕಾಲ ನಿತ್ಯ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ.