ಮಡಿಕೇರಿ, ಮಾ. ೧೦: ಪ್ರತಿ ಮನುಷ್ಯರಿಗೂ ಶ್ರವಣ (ಕಿವಿ) ಪ್ರಮುಖ ಅಂಗವಾಗಿದ್ದು, ಸೂಕ್ಷö್ಮ ಪ್ರದೇಶವಾದ ಕಿವಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಡಿಕೇರಿ ಬಾಹ್ಯ ಸೇವಾ ಕೇಂದ್ರ ಇವರ ಸಹಯೋಗದಲ್ಲಿ ‘ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ’ ದಡಿಯಲ್ಲಿ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪನ್ಯಾಸ ಕೊಠಡಿಯಲ್ಲಿ ನಡೆದ ‘ವಿಶ್ವ ಶ್ರವಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಂದು ಸಾವಿರ ಜನರಲ್ಲಿ ೨೯೧ ಮಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರವಣದೋಷ ಇರುತ್ತದೆ. ಆದ್ದರಿಂದ ಸೂಕ್ಷö್ಮ ಭಾಗವಾದ ಶ್ರವಣ ಬಗ್ಗೆ ಎಚ್ಚರ ವಹಿಸಬೇಕು. ೭೫ ಡಿಸಿಬಲ್‌ಗಿಂತ ಕಡಿಮೆ ಶಬ್ಧ ಬಳಸಬೇಕು ಎಂದು ಸಲಹೆ ಮಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಅವರು ಸೂಕ್ಷö್ಮ ಅಂಗವಾದ ಕಿವಿಯ ರಕ್ಷಣೆಯ ಕುರಿತು ಮಾತನಾಡಿ, ಯುವಜನರು ತಮ್ಮ ಇಯರ್ ಫೋನ್‌ಗಳು ಮತ್ತು ಹೆಡ್‌ಫೋನ್ (ಕರ್ಣವಾಣಿ) ಬಳಕೆಯನ್ನು ಮಿತಿಗೊಳಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನರಸಿಂಹ ರೈ ಮಾತನಾಡಿ ಇಯರ್‌ಫೋನ್ ಬಳಕೆಯನ್ನು ಮಿತಿಗೊಳಿಸುವ ಮಹತ್ವದ ಬಗ್ಗೆ ವಿವರಿಸಿದರು.

ವೈದ್ಯಕೀಯ ಅಧೀಕ್ಷಕರಾದ ಡಾ. ರೂಪೇಶ್ ಗೋಪಾಲ್ ಅವರು ಮಾತನಾಡಿ, ವಯಸ್ಸಾದವರಲ್ಲಿ ಶ್ರವಣೇಂದ್ರಿಯ ಆರೈಕೆಯ ಪ್ರಾಮುಖ್ಯತೆ ಮತ್ತು ಶ್ರವಣ ದೋಷದ ಭಾವನಾತ್ಮಕ ಮತ್ತು ಸಾಮಾಜಿಕ ಪರಿಣಾಮ ಕುರಿತು ತಿಳಿಸಿದರು.

ಜಾಥಾ: ದಿನದ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂರನೇ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಜಾಥಾ ಹಮ್ಮಿಕೊಳ್ಳಲಾಯಿತು.

ನಗರದ ರಾಜಾಸೀಟು ಬಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದ ಅಧಿಕಾರಿ ಡಾ. ಆನಂದ್ ಮತ್ತು ಕೊ.ವೈ.ವಿ.ಸಂ.ನ ಪ್ರಾಂಶುಪಾಲರು ಡಾ. ನರಸಿಂಹ ರೈ, ಡಾ. ಶ್ವೇತ ಅವರು ಚಾಲನೆ ನೀಡಿದರು. ಕೊ.ವೈ.ವಿ.ಸಂ ಬೋಧನಾ ಆಸ್ಪತ್ರೆಗೆ ವಿದ್ಯಾರ್ಥಿಗಳು ಕಿವಿ ಮತ್ತು ಶ್ರವಣೇಂದ್ರಿಯದ ಬಗ್ಗೆ ಫಲಕಗಳು ಮತ್ತು ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.