ಮಡಿಕೇರಿ, ಮಾ.೧೦ : ವಿಶಾಲವಾದ ಮೈದಾನದಲ್ಲಿ ತಂಪಾದ ವಾತಾವರಣದ ನಡುವೆ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ಬಣ್ಣ ಬಣ್ಣದ ಚಿತ್ತಾರ., ಗಾಳಿ ಕೂಡ ತೂರಿ ಹೋಗಲು ಸ್ಥಳವಿಲ್ಲದಂತೆ ತುಂಬಿದ್ದ ಕಲಾವಿದರು., ರಂಗು ರಂಗಿನ ಪೋಷಾಕಿನಲ್ಲಿ ಅವರಲ್ಲಿ ಕುಣಿಯುತ್ತಿದ್ದರೆ ಇತ್ತ ಕೆಳಭಾಗದಲ್ಲಿದ್ದ ಕಲಾಪ್ರೇಮಿಗಳ ಕಾಲು-ಕೈ-ತಲೆ ತನ್ನಿಂತಾನೆ ಅಲುಗಾಡುತ್ತಿದ್ದವು., ೨೫೦ ಮಂದಿಯಿAದ ಒಂದೇ ವೇದಿಕೆಯಲ್ಲಿ ನಮ್ಮ ದೇಶದ ವಿವಿಧ ಹತ್ತು ಸಂಸ್ಕೃತಿಯ ಪರಿಚಯವಾಯಿತು.., ಅಷ್ಟಕ್ಕೂ ಅವರಾರೂ ವೃತ್ತಿಪರ ಕಲಾವಿದರಾಗಿರಲಿಲ್ಲ., ಎಲ್ಲರೂ ವಿದ್ಯಾರ್ಥಿಗಳೇ..!
ಈ ಒಂದು ಸುಂದರ ಚಿತ್ರಣ ಕಂಡು ಬಂದಿದ್ದು ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ. ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ಸಹಯೋಗ ದೊಂದಿಗೆ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸುಮಾರು ೨೫೦ಮಂದಿ ವಿದ್ಯಾರ್ಥಿಗಳು ಹತ್ತು ವಿವಿಧ ರೀತಿಯ ಕಲಾ ಪ್ರದರ್ಶನ ನೀಡಿದರು. ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ಭವ್ಯ ಭಾರತ ದೇಶ ಸಾಂಸ್ಕೃತಿಕವಾಗಿಯೂ ವಿಭಿನ್ನತೆಯನ್ನು ಹೋದಿದೆ. ಒಂದೊAದು ರಾಜ್ಯದ ಸಂಸ್ಕೃತಿಗೂ ವ್ಯತ್ಯಾಸಗಳಿವೆ. ಈ ವಿಭಿನ್ನ ಸಂಸ್ಕೃತಿಯ ಪರಿಚಯವನ್ನು ವಿದ್ಯಾರ್ಥಿಗಳು ಮಾಡಿಕೊಟ್ಟರು.
ಭರತನಾಟ್ಯ
ಭಾರತ ಶಾಸ್ತಿçÃಯವಾಗಿ ಹೆಸರು ವಾಸಿ. ಶಾಸ್ತಿçÃಯ ನೃತ್ಯ ಪ್ರಾಕಾರಗಳಲ್ಲಿ ಭರತ ನಾಟ್ಯ ಅಗ್ರಸ್ಥಾನವನ್ನು ಹೊಂದಿದೆ. ಪ್ರಾರಂಭದಲ್ಲಿ ಭರತ ನಾಟ್ಯದ ಮೂಲಕ ಪ್ರಸ್ತುತಪಡಿಸಿದ ನವದುರ್ಗಿ ವೈಭವ ನೃತ್ಯ ಪ್ರಾಕಾರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು.
ಬಂಜಾರ ನೃತ್ಯ
ಮೂಲತಃ ಆಂಧ್ರಪ್ರದೇಶದ ಸಾಂಪ್ರದಾಯಿಕ ನೃತ್ಯ ಪ್ರಾಕಾರ ವಾಗಿರುವ ಬಂಜಾರ ನೃತ್ಯ ಪ್ರೇಕ್ಷಕರನ್ನು ಪುಟಿದೇಳುವಂತೆ ಮಾಡಿತು. ವೇದಿಕೆ ಪೂರ್ತಿ ಆವರಿಸಿಕೊಂಡಿದ್ದ ಕಲಾವಿದರು ಒಂದಿಷ್ಟು ವಿಚಲಿತರಾಗದೆ ೧೫ನಿಮಿಷಗಳ ಕಾಲ ಹೆಜ್ಜೆ ಹಾಕುತ್ತಿದ್ದರೆ ಇತ್ತ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದರು.
ರಾಮನ ಪಟ್ಟಾಭಿಷೇಕ
ನಂತರ ವೇದಿಕೆ ಮೇಲೆ ಕಂಗೊಳಿಸಿದ್ದು ತುಳುನಾಡಿನ ಸಂಸ್ಕೃತಿ. ಯಕ್ಷಗಾನದ ಮೂಲಕ ನಡೆದ ಶ್ರೀರಾಮನ ಪಟ್ಟಾಭಿಷೇಕ. ಯಕ್ಷಗಾನದ ಮೂಲಕ ೧೫ ನಿಮಿಷದಲ್ಲಿ ಸಂಪೂರ್ಣ ರಾಮಾಯಣವನ್ನು ಪ್ರಸ್ತುತಪಡಿಸಿದ್ದು ಬಹಳ ಸುಂದರವಾಗಿತ್ತು. ರಾಮಾಯಣ ದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಕಲಾವಿದರು ಜೀವ ತುಂಬಿದರು.
ಸಾಹಸಮಯ ಸ್ಟಿಕ್ ಡ್ಯಾನ್ಸ್
ಮಣಿಪುರದ ಸಮರಕಲೆಯ ಒಂದು ಭಾಗವನ್ನು ಸ್ಟಿಕ್ ಡ್ಯಾನ್ಸ್ ಮೂಲಕ ವೇದಿಕೆಯಲ್ಲಿ ಪ್ರದರ್ಶಿಸಿದರು. ಕಲಾವಿದರ ಚಾಕಚಕ್ಯತೆ, ಸಾಹಸಮಯ ಪ್ರದರ್ಶನಗಳು ನೋಡುಗರನ್ನು ಬೆರಗಾಗಿಸಿದವು. ಬಹುತೇಕ ಮಣಿಪುರದವರೇ ಈ ಪ್ರದರ್ಶನದಲ್ಲಿ ಕಂಡು ಬಂದರು.
ಅಪಾಯಕಾರಿ ಮಲ್ಲಕಂಬ
ಮಹಾಭಾರತ ಕಾಲದಲ್ಲಿನ ಮಲ್ಲಕಂಬ ಎಂಬ ವಿದ್ಯೆಯ ಪ್ರದರ್ಶನವನ್ನು ಇಲ್ಲಿ ವೇದಿಕೆಯ ಮೇಲೆ ವಿದ್ಯಾರ್ಥಿಗಳು ಮಾಡಿದರು. ಪುಟ್ಟ ಹುಡುಗರಿಂದ ಹಿಡಿದು ಪದವಿ ವರೆಗಿನ ೫೦ಕ್ಕೂ ಹೆಚ್ಚು ಮಕ್ಕಳು ಮಲ್ಲಕಂಬವನ್ನೇರಿ ವಿವಿಧ ರೀತಿಯ ಸಾಹಾಸಮಯ ಪ್ರದರ್ಶನಗಳನ್ನು ನೀಡಿದರು. ಬಾಲಕಿಯರು ಕೂಡ ತಾವೇನೂ ಕಮ್ಮಿ ಇಲ್ಲವೆಂಬAತೆ ತೂಗಾಡುತ್ತಿದ್ದ ಹಗ್ಗವನ್ನೇರಿ ಸಾಹಸಮಯ ಪ್ರದರ್ಶನ ತೋರಿದರು. ಎಲ್ಲಿ ಯಾರೂ ಕೈ-ಕಾಲು ಜಾರಿ ಬಿದ್ದು ಬಿಡುವರೋ ಎಂಬ ಆತಂಕದೊAದಿಗೆ ಪ್ರೇಕ್ಷಕರು ಬಿಟ್ಟ ಕಣ್ಣು ಮುಚ್ಚದೆ, ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತಾಗಿತ್ತು..!
ಗಾರ್ಬ-ದಾAಡಿಯ
ಗುಜರಾತಿನ ಸಾಂಪ್ರದಾಯಿಕ ನೃತ್ಯಗಳಾದ ಗಾರ್ಬ ಹಾಗೂ ದಾಂಡಿಯಾ ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು. ಕೋಲು, ಬಿಂದಿಗೆ ಹಿಡಿದು ಬಾಲಕ- ಬಾಲಕಿಯರು ೧೫ ನಿಮಿಷಗಳ ಕಾಲ ನೃತ್ಯ ಪ್ರದರ್ಶನ ಮಾಡುತ್ತಿದ್ದರೆ, ಪ್ರೇಕ್ಷಕರ ಕಡೆಯಿಂದ ಚಪ್ಪಾಳೆ-ಶಿಳ್ಳೆ ಕೇಳಿಬರುತ್ತಿದ್ದವು.
ರಿಂಗ್ ಬ್ಯಾಲೆನ್ಸ್
ರಿಂಗ್ ಬ್ಯಾಲೆನ್ಸ್ ಸಾಮಾನ್ಯವಾಗಿ ಎಲ್ಲ ನೃತ್ಯ ಸ್ಪರ್ಧೆಗಳಲ್ಲಿ ನೋಡುತ್ತಿರುತ್ತೇವೆ. ಒಂದರಿAದ ಐದು ರಿಂಗ್ಗಳನ್ನು ಸುಲಭವಾಗಿ ತಿರುಗಿಸುತ್ತಾರೆ. ಅದರಲ್ಲೊಬ್ಬ ಬಾಲಕಿ ಬರೋಬ್ಬರಿ ೫೦ ರಿಂಗ್ಗಳನ್ನು ಒಂದೇ ಬಾರಿಗೆ ತಿರುಗಿಸುವ ಮೂಲಕ ಅಚ್ಚರಿ ಮೂಡಿಸಿದಳು.
ಡೊಳ್ಳು ಕುಣಿತ
ಕರ್ನಾಟಕ ರಾಜ್ಯದ ಜನಪದೀಯ ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ ಕೂಡ ವೇದಿಕೆಯಲ್ಲಿ ಮೇಳೈಸಿತು. ಆಳ್ವಾಸ್ನ ಇಂಜಿನಿಯರಿAಗ್ ವಿದ್ಯಾರ್ಥಿಗಳು ಡೊಳ್ಳು ಕುಣಿತದ ವಿವಧ ಮಜಲುಗಳನ್ನು ಪ್ರದರ್ಶಿಸಿದರು.
ಸಿಂಹ ಬೇಟೆ
ಪಷ್ಚಿಮ ಬಂಗಾಳದ ಕಲಾ ಪ್ರಾಕಾರವಾಗಿರುವ ಸಿಂಹ ಬೇಟೆ ಪ್ರದರ್ಶನವೂ ಇಲ್ಲಿತ್ತು. ಒಂದೇ ವೇದಿಕೆಯಲ್ಲಿ ಹದಿನೈದು ಸಿಂಹಗಳು ಎರಡು ಕಾಡು ಕೋಣಗಳನ್ನು ಬೇಟೆಯಾಡುವ ದೃಶ್ಯವನ್ನು ನೃತ್ಯದ ಮೂಲಕ ಪ್ರದರ್ಶಿಸಲಾಯಿತು. ಈ ನೃತ್ಯ ಪ್ರಾಕಾರದಲ್ಲಿ ಹಾಸ್ಯವೂ ಮಿಳಿತಗೊಂಡು ಪ್ರೇಕ್ಷಕರನ್ನು ನಗಿಸುವಂತೆ ಮಾಡಿತು..!
ಶ್ರೀಲಂಕಾ ನೃತ್ಯ
ಇಲ್ಲಿ ಭಾರತದ ಸಂಸ್ಕೃತಿ ಮಾತ್ರವಲ್ಲದೆ ನೆರೆಯ ಶ್ರೀಲಂಕಾ ದೇಶದ ಸಂಸ್ಕೃತಿಯೂ ಅನಾವರಣಗೊಂಡಿತು. ಶ್ರೀಲಂಕಾದ ಕ್ಯಾಂಡ್ಯಾನ್ ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು. ಇದರಲ್ಲಿ ಪಲ್ಟಿ ಹೊಡೆಯುವ ಸಾಹಸ ಹಾಗೂ ಬೆಂಕಿ ಉಗುಳುವದು ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿತು.
ಕೊಡವ ಡ್ಯಾನ್ಸ್
ಕಾರ್ಯಕ್ರಮದ ಆರಂಭದಲ್ಲಿ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಯರು ಕೊಡವ ಹಾಡಿಗೆ ನೃತ್ಯ ಮಾಡಿದರು. ಗೋಣಿಕೊಪ್ಪಲಿನ ಗಾಯಕ ಅನ್ವಿತ್ ಹಾಡು ಹೇಳುವ ಮೂಲಕ ರಂಜಿಸಿದರು. ಒಟ್ಟಾರೆಯಾಗಿ ಕಾರ್ಯಕ್ರಮ ನೆರೆದಿದ್ದ ಜನರ ಮನ ರಂಜಿಸು ವಲ್ಲಿ ಯಶಸ್ವಿ ಯಾಯಿತು.
?ಕುಡೆಕಲ್ ಸಂತೋಷ್ಮಡಿಕೇರಿ : ಸದೃಢ ಭಾರತ ನಿರ್ಮಾಣವಾಗಬೇಕಾದರೆ ಯುವಶಕ್ತಿ ಜಾಗೃತ ಗೊಳ್ಳಬೇಕು. ಅವರ ಸಹಕಾರದಿದ್ದರೆ ಬಲಾಢ್ಯ ಭಾರತ ಕಟ್ಟುವುದು ಕಷ್ಟದ ಮಾತಲ್ಲ ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ ಪ್ರತಿಪಾದಿಸಿದರು.
ಕಾವೇರಿ ಕಾಲೇಜಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ನಂತರ ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ, ವ್ಯಾಪಾರ ಮನೋಧರ್ಮದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸ ಬಾರದು. ಹೊರದೇಶ-ರಾಜ್ಯಗಳಿಂದ ವಿದ್ಯಾಕ್ಷೇತ್ರಕ್ಕೆ ಬರುವ ಉದ್ಯಮಿಗಳಿಂದ ಸವಾಲೊಡ್ಡುವ ಕೆಲಸವಾಗುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆ ಕಡೆ ವಲಸೆ ಹೋಗುವ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ಕಳವಳಕಾರಿ. ದೇಶದ ಮೇಲೆ ಅಪಾರ ನಂಬಿಕೆ, ಗೌರವವಿರಬೇಕು. ದೇಶಕ್ಕೆ ನಾಗರಿಕತೆ ಬಂದು ೬ ಸಾವಿರ ವರ್ಷಗಳ ಇತಿಹಾಸವಿದೆ. ಭಾರತಕ್ಕೆ ದೊಡ್ಡ ಭವಿಷ್ಯವಿದೆ. ಯುವಶಕ್ತಿ ಭಾರತದ ಶಕ್ತಿಯಾಗಿದ್ದು, ಲಕ್ಷಾಂತರ ಕಾಲೇಜು, ವಿದ್ಯಾರ್ಥಿಗಳಿರುವುದು ಭಾರತದಲ್ಲಿ ಮಾತ್ರ. ಭಾರತದ ಯುವಪೀಳಿಗೆಯನ್ನು ಆಕರ್ಷಿಸಿ ಬೇರೆ ದೇಶ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ವಿಫುಲ ಅವಕಾಶಗಳಿವೆ. ಅದರ ಸದ್ಭಳಕೆಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಲೆ ನಮ್ಮ ಬದುಕನ್ನು ಕಟ್ಟುವ ಜೊತೆಗೆ ಜೀವನ ಉಲ್ಲಾಸ ಮೂಡಿಸುತ್ತದೆ. ಶಿಕ್ಷಣದೊಂದಿಗೆ ದೇಶಿಯ, ಶಾಸ್ತ್ರೀಯ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಕಲೆ ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮಾಡುವ ಪ್ರಯೋಗ ಯಶಸ್ವಿಯಾಗಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಸಂಸ್ಥೆ ಶಿಕ್ಷಣದೊಂದಿಗೆ ಕಲಾಸಕ್ತಿ ಮೂಡಿಸುತ್ತಿರುವುದು ಪ್ರಶಂಸನೀಯ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಸಾಧ್ಯ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ನೀಡುವಷ್ಟು ಬೆಳೆಯಲು ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಕಾರಣವಾಗಿದೆ. ನಿರಂತರ ಕಲಿಕೆಯಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಆಳ್ವಾಸ್ ಕಲಾವಿದರು ಉದಾಹರಣೆ ಎಂದು ಶ್ಲಾಘಿಸಿದರು. ಪುರಸಭೆ ಸದಸ್ಯ ನೀಡಿದರು. ಕಲೆ ನಮ್ಮ ಬದುಕನ್ನು ಕಟ್ಟುವ ಜೊತೆಗೆ ಜೀವನ ಉಲ್ಲಾಸ ಮೂಡಿಸುತ್ತದೆ. ಶಿಕ್ಷಣದೊಂದಿಗೆ ದೇಶಿಯ, ಶಾಸ್ತ್ರೀಯ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಕಲೆ ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮಾಡುವ ಪ್ರಯೋಗ ಯಶಸ್ವಿಯಾಗಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಸಂಸ್ಥೆ ಶಿಕ್ಷಣದೊಂದಿಗೆ ಕಲಾಸಕ್ತಿ ಮೂಡಿಸುತ್ತಿರುವುದು ಪ್ರಶಂಸನೀಯ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಸಾಧ್ಯ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ನೀಡುವಷ್ಟು ಬೆಳೆಯಲು ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಕಾರಣವಾಗಿದೆ. ನಿರಂತರ ಕಲಿಕೆಯಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಆಳ್ವಾಸ್ ಕಲಾವಿದರು ಉದಾಹರಣೆ ಎಂದು ಶ್ಲಾಘಿಸಿದರು. ಪುರಸಭೆ ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅತ್ಯುನ್ನತ ಶಿಕ್ಷಣ ನೀಡುವ ಮೂಲಕ ಕಾವೇರಿ ವಿದ್ಯಾಸಂಸ್ಥೆ ಆಶಾಕಿರಣವಾಗಿದೆ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ.ಇಟ್ಟೀರ ಕೆ ಬಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭರವಸೆಯ ಬೆಳಕು ಮೂಡಿಸುವ ಕೆಲಸ ಕಾವೇರಿ ವಿದ್ಯಾಸಂಸ್ಥೆ ಯಿಂದಾಗಿದೆ ಎಂದರು. ವೀರಾಜಪೇಟೆ ಪುರಸಭೆ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಐಕ್ಯೂಇಸಿ ಸಂಚಾಲಕಿ ಡಾ. ಕೆ.ಜಿ. ವೀಣಾ ಹಾಜರಿದ್ದರು. ಪ್ರಭಾ ಮತ್ತು ತಂಡ ಪ್ರಾರ್ಥಿಸಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜೇಶ್ ಪದ್ಮನಾಭ ಸ್ವಾಗತಿಸಿ, ಪ್ರಾಂಶುಪಾಲ ಡಾ. ಆನಂದ್ ಕಾರ್ಲ ವಂದಿಸಿದರು.
- ಹೆಚ್. ಜೆ. ರಾಕೇಶ್